Wednesday, October 29, 2008

ಗೋಕರ್ಣ ಒಂದು ಸುತ್ತು - ರಮೇಶ

ಬೀಜವನ್ನು ನೆಟ್ಟು ಮರುದಿನ ಅದು ಸಸಿಯಾಯಿತೇ ಅಂತ ನೋಡಲಿಕ್ಕೆ ಆಗುತ್ತದೆಯೇ ಅಥವಾ ಆ ಬೀಜದಿಂದ ಒಳ್ಳೆಯ ತಳಿ ಬರುತದೆಯೇ ಅಂತ ತಕ್ಷಣ ತಿಳಿಯುತದೆಯೇ? ತಿಳಿಯಲೇ ಬೇಕೆಂಬ ಮನಸ್ಥಿತಿಯಿದ್ದರೆ ಸ್ವಲ್ಪ ತಾಳ್ಮೆ ಬೇಕು. ಸ್ವಲ್ಪ ದಿನ ಕಾದು ನೋಡಬೇಕು. ಆಗ ಗೊತ್ತಾಗುತ್ತದೆ ಬೀಜದ ಶಕ್ತಿ.

ಹಾಗೆ ಇದು ಜೀವನದ ಎಲ್ಲಾ ಕ್ಷೇತ್ರಗಳಿಗೆ ಅನ್ವಯಿಸುತ್ತದೆ. ಒಬ್ಬ ವ್ಯಕ್ತಿ ಅಥವಾ ಸಮಾಜ ಉನ್ನತ ಸ್ಥಾನಕ್ಕೆ ಏರಬೇಕಾದರೆ ಸ್ವಲ್ಪ ಕಾದು ನೋಡಬೇಕು. ಕಾದು ನೋಡದೇ ಬಾಯಿ ಬಡಿದುಕೊಂಡರೆ ಬಯಲಾಗುವುದು ಅವರ ಬಣ್ಣವೇ ವಿನಹ ಬೇರೆಯವರದಲ್ಲ.

ಆತ್ಮೀಯರೇ, ಗೋಕರ್ಣ ಹೇಗಿತ್ತು, ಈಗ ಹೇಗಿದೆ ಅಂತ ಒಮ್ಮೆ ಅಲ್ಲಿ ಹೋಗಿ ನೋಡಿ.

ಗೋಕರ್ಣ ಒಂದು ಪುರಾತನ ಪುಣ್ಯ ಕ್ಷೇತ್ರ. ದಕ್ಷಿಣದ ಕಾಶಿ ಅಂತ ಹೆಸರು ಪಡೆದ ಕ್ಷೇತ್ರ. ಮಹಾಬಲನ ದರ್ಶನದಿಂದ ಸಕಲ ಪಾಪಕ್ಕೆ ಮುಕ್ತಿ ಸಿಗುತದೆ ಮತ್ತು ಶ್ರೇಯಸ್ಸು ಲಭಿಸುತ್ತದೆ ಅನ್ನುವ ಉಕ್ತಿಯೂ ಇದೆ. ಆದರೆ ನೀವು ಕೆಲವು ತಿಂಗಳು ಹಿಂದೆ ಹೋಗಿದ್ದರೆ ನಿಮ್ಮ ಮನಸ್ಸಲ್ಲಿ ಅಲ್ಲಿಂದ ಓಡಿಹೋಗಬೇಕಪ್ಪ ಅನ್ನುವ ರೀತಿಯಾಗುತ್ತಿತು. ಕಾರಣ ಅಲ್ಲಿಯ ಕೊಳಕು ಪರಿಸರ, ಟ್ರಾವೆಲ್ ಏಜೆಂಟರ ರೀತಿ ವರ್ತಿಸುವ ಪುರೋಹಿತರು ಮುಂತಾದವು. ಯಾಕೆ ಹಾಗಿತ್ತು ಗೋಕರ್ಣವೆಂದರೆ ಅಲ್ಲಿ ಯಾರೂ ಹೇಳೋರು ಕೇಳೋರು ಇರಲಿಲ್ಲ. ಜನರು ತಮ್ಮ ಮನಸ್ಸಿಗೆ ಬಂದ ಹಾಗೆ ವರ್ತಿಸುತ್ತಿದ್ದರು. ದೇವಾಲಯದ ಅರ್ಚಕರು ದೇವರಿಗೆ ಏರಿಸಿದ ಹೂಗಳನ್ನು ಎಸೆಯುತ್ತಿದ್ದ ಜಾಗ ಎಲ್ಲಿ ಗೊತ್ತೆ? ಅಲ್ಲೇ ಪಕ್ಕದಲ್ಲಿಯೇ!!!. ದೇವಾಲಯ ಒಮ್ಮೆ ಸುತ್ತು ಹಾಕಿ ಬರೋಣ ಅಂತ ಹೋಗೋದಾದರೆ ಮೂಗು ಮುಚ್ಚಿಕೊಂಡುಹೋಗುವ ಪರಿಸ್ಥಿತಿ ಅಲ್ಲಿತ್ತು. ದೇವರಿಗೆ ಅಭಿಷೇಕವಾದ ನೀರು ಹಾಗೆ ಹೊರಗೆ ಹೋಗಬೇಕು. ಆದರೆ ಅದು ಅಲ್ಲೇ ರೌಂಡು ಹೊಡೆದು ಅಲ್ಲಿ ಇದ್ದ ಇನ್ನೆರಡು ಮೂರು ದೇವರನ್ನು ಪ್ರದಕ್ಷಿಣೆ ಹಾಕಿ ಆಮೇಲೆ ಹೊರಗೆ ಹೋಗುತ್ತಿತ್ತು. ದೇವಾಲಕ್ಕೆ ಅದರದೇ ಆದ ವಾಸ್ತುವಿರುತ್ತದೆ. ದೇವರು ಎಲ್ಲಿ ಇರಬೇಕು, ಗರ್ಭಗುಡಿ ಹೇಗಿರಬೇಕು ಅಂತೆಲ್ಲಾ ಇರುತ್ತದೆ. ಆದರೆ ಗೋಕರ್ಣದಲ್ಲಿ ಹಾಗಿರಲಿಲ್ಲ. ಅರ್ಚಕರು ತಮಗಿಷ್ಟ ಬಂದ ಕಡೆ ಕೆಲವು ದೇವರುಗಳನ್ನು ಇಟ್ಟಿದ್ದರು. ಇನ್ನು ಕೆಲವು ದೇವರುಗಳು ಅಲ್ಲಾಡದ ಹಾಗೆ ಸಿಮೇಂಟು ಹಾಕಿ ಕಟ್ಟಿಹಾಕಿದ್ದರು. ದೇವರ ಪರಿಸ್ಥಿತಿ ನೋಡಿ!!! ದೇವಸ್ಥಾನದ ಮೇಲ್ವಿಚಾರಣೆಯನ್ನು ಹೊತ್ತವರಿಗೂ(?) ಮತ್ತು ಅಲ್ಲಿನ ಸುತ್ತಮುತ್ತ ಜನರಿಗೂ ಒಳ್ಳೆಯ ಸಾಮರಸ್ಯವಿರಲಿಲ್ಲ.

ಈಗ ಹೇಗಿದೆ ಅಂತ ಒಮ್ಮೆ ಹೋಗಿ ನೋಡಿ.ದೇವಾಲಯ ತುಂಬಾ ಸ್ವಚ್ಚವಾಗಿದೆ. ದೇವಾಲಯದ ಒಳಗೆ ಕುಡಿಯುವ ನೀರಿನ ವ್ಯವಸ್ಥೆಯಾಗಿದೆ. ನೀವು ಬಸ್ ಇಳಿದ ತಕ್ಷಣ ಟ್ರಾವೆಲ್ ಏಜೆಂಟರ ರೀತಿ ಯಾರೂ ಬರುವುದಿಲ್ಲ ಅಂತ ಅಲ್ಲಿಯ ಅರ್ಚಕರು ತೀರ್ಮಾನಿಸಿದ್ದಾರೆ. ಸುತ್ತಮುತ್ತ ಜಾಗದ ಜನರು ದೇವಾಲಯಕ್ಕೆ ಬಂದು ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿ ಊರಿನಲ್ಲಿ ದೇವರ ಅಭಿವೃದ್ದಿಗೆಂದು "ಶಿವಗಣ" ವೆಂಬ ಸಂಘಟನೆಗಳಾಗಿವೆ. ಬರುವ ಭಕ್ತರಿಗೆ ಉಚಿತ ಭೋಜನದ ವ್ಯವಸ್ಥೆಯಾಗಿದೆ. ದೇವಾಲಯವನ್ನು ವಾಸ್ತು ಶಾಸ್ರ್ಥಕ್ಕನುಗುಣವಾಗಿರುವಂತೆ ಮಾಡುವ ವ್ಯವಸ್ಥೆಯಾಗುತ್ತಿದೆ. ಪ್ರವೇಶ ಶುಲ್ಕವನ್ನು ರದ್ದು ಮಾಡಲಾಗಿದೆ. ಇವೆಲ್ಲಕಿಂತ ಹೆಚ್ಚಾಗಿ ಜನರಲ್ಲಿ ಒಂದು ಒಳ್ಳೆಯ ಸಾಮರಸ್ಯವೇರ್ಪಟ್ಟಿದೆ. ಜನರಲ್ಲಿ ಸಂಘಟನೆಯಾಗಿದೆ. ಅಲ್ಲಿಯ ಸುತ್ತಮುತ್ತ ಜನರಿಗೆ ಒಂದು ಸಾವಿರ ಭಾರತೀಯ ಗೋವನ್ನು ಉಚಿತವಾಗಿ ಹಂಚಲಾಗಿದೆ. ಇನ್ನು ಬಹಳಷ್ಟು ಕೆಲಸಗಳು ಆಗುತ್ತಲಿವೆ. ಈಗ ಹೇಳಿ ಶ್ರೀಮಠದ ಆಡಳಿತ ವ್ಯವಸ್ಥೆ ಹೇಗಿದೆ ಎಂದು?

ಇದು ನಾನು ಅಲ್ಲಿ ಹೋಗಿ ಕಂಡಿದ್ದು. ಇದು ನನ್ನ ವಯಕ್ತಿಕ ಅಭಿಪ್ರಾಯ
-ರಮೇಶ

Tuesday, October 28, 2008

ಮಹಾಬಲೇಶ್ವರನ ಸನ್ನಿಧಾನದಲ್ಲಿ ಅನ್ನದಾನ ಆರಂಭ

ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಗೋಕರ್ಣದಲ್ಲಿ ಎಲ್ಲರ ಅನೇಕ ದಿನದ ಕನಸು ನನಸಾಗುವ ದಿನ ಬಂದಿದೆ.
ಕೇವಲ ಮೋಜು ಮಸ್ತಿಗೆ ಹೆಸರುವಾಸಿ ಯಾಗಿ ಧಾರ್ಮಿಕತೆ ಮಾಯವಾಗುತ್ತಿರುವಾಗ ದೇವರ ದರ್ಶನಕ್ಕೆ ಬಂದವರಿಗೆ ಅಲ್ಲಿ ಧಾರ್ಮಿಕತೆಯ ಸೊಗಡೆ ಇಲ್ಲದೇ,ಇತರ ಧಾರ್ಮಿಕ ಕ್ಷೇತ್ರಗಳಲ್ಲಿದ್ದಂತೆ ಅನ್ನ ಪ್ರಸಾದ ಇಲ್ಲದೇ ಖೇದದಿಂದ ಮರಳುತ್ತಿರುವವರು ಅದೇಷ್ಟೋ?.

ಗೋಕರ್ಣ ಕ್ಷೇತ್ರದ ಆಡಳಿತವನ್ನು ಶ್ರೀರಾಮಚಂದ್ರಾಪುರ ಮಠಕ್ಕೆ ಸರಕಾರ ವಹಿಸಿಕೊಟ್ಟ ಮೇಲೆ ಅಲ್ಲಿನ ವಾತಾವರಣವೇ ಬದಲಾಗಿದೆ.ದರ್ಶನಕ್ಕೆ ಬರುವ ಭಕ್ತರಿಗೆ “ಧಾರ್ಮಿಕ ಸೊಗಡಿನ” ವಾತಾವರಣವನ್ನು ಉಣಬಡಿಸಲಾಗುತ್ತಿರುವುದು “ಗೋಕರ್ಣದ ಅಭಿವೃಧ್ದಿ” ಯ ದ್ಯೋತಕ.

ದೇವರ ದರ್ಶನಕ್ಕೆ ಬರುವ ಪ್ರವಾಸಿಗರಲ್ಲಿ ದೇವರ ದರ್ಶನವಾದ ಮೇಲೆ “ಹೋಟೆಲ್” ನಲ್ಲಿ ಊಟ ಮಾಡುವುದು ಧಾರ್ಮಿಕ ಕ್ಷೇತ್ರದಲ್ಲಿ ತರವಲ್ಲ.ಆದ್ದರಿಂದಲೇ ಶ್ರೀರಾಮಚಂದ್ರಾಪುರ ಮಠ ಗೋಕರ್ಣದಲ್ಲಿ “ಅನ್ನದಾನ” ಆರಂಭಿಸಿದೆ.

ಉದ್ಘಾಟನೆಯೇ ಭಿನ್ನ!!:
ಶ್ರೀರಾಘವೇಶ್ವರ ಭಾರತೀ ಶ್ರೀಗಳು ತಮ್ಮ ಚಾತುರ್ಮಾಸ್ಯ ವೃತವನ್ನು ಸಂಪನ್ನಗೊಳಿಸಿ ಗೋಕರ್ಣಕ್ಕೆ ಚಿತ್ತೈಸಿದಾಗ ಅನ್ನದಾನಕ್ಕೆ ಚಾಲನೆ ನೀಡಿದರು.ಚಾಲನೆ ನೀಡುವುದರಲ್ಲೂ ಭಿನ್ನತೆ ಮೆರೆದ ಶ್ರೀಗಳು, ಸ್ವತ: ಅವರೇ ಬಾಳೆ ಎಲೆಯನ್ನು ಹಾಕಿ,ಭಕ್ತರ ಬಹುದಿನದ ಕನಸನ್ನು ನನಸು ಮಾಡಿದರು. ಈಗಾಗಲೇ ದೇವಸ್ಥಾನ ಸ್ವಚ್ಚತೆ,ನೀರಿನ ವ್ಯವಸ್ಥೆ ಮುಂತಾದ ಕಾರ್ಯಕ್ರಮದ ಜೊತೆ ಅನ್ನದಾನ ಆರಂಬಿಸಿದ್ದು ಭಕ್ತರಿಂದ ಉತ್ತಮ ಪ್ರತಿಕ್ರೀಯೆ ಬರುತ್ತಿರುವುದು “ಗೋಕರ್ಣದ ನವೋಲ್ಲಾಸಕ್ಕೆ” ಹಿಡಿದ ಕನ್ನಡಿಯಾಗಿದೆ.

ಈಗ ದಿನವೂ 300-400 ಜನ ಮಧ್ಯಾಹ್ನದ ಊಟವನ್ನು ಸೇವಿಸುತ್ತಿದ್ದು, ಗೋಕರ್ಣದಲ್ಲಿ ಈ ಎಲ್ಲ ಕಾರ್ಯಕ್ರಮದಿಂದ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.ಅನ್ನದಾನವನ್ನು ಎಲ್ಲ ಜಾತಿ,ಪಂಗಡ,ಸಮಾಜವನ್ನು ಮರೆತು ಒಗ್ಗಟ್ಟಿನಿಂದ ಸೌಹಾರ್ಧಯುತವಾಗಿ ಸೇವೆಯನ್ನು ನಡೆಸಿಕೊಡಿತ್ತಿರುವುದು ವಿಶೇಷ. ಇದು ಭಕ್ತರ ಜೊತೆ “ಗೋಕರ್ಣದ ಸ್ಥಳಿಯರಲ್ಲೂ” ಕೂಡ ವಿಶೇಷ ಗಮನ ಸೆಳೆದಿದೆ.


ನಿತಿನ್ ಮುತ್ತಿಗೆ
nitinmuttige@gmail.com

Friday, October 17, 2008

ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಗಳ ಸನ್ನಿಧಾನಕ್ಕೆ

ಹವ್ಯಕ ಮತ್ತು ಶೈಕ್ಷಣಿಕ ಹಾಗೂ ಸಾಂಸ್ಕ್ರತಿಕ ಸಂಸ್ಥೆ ಹುಬ್ಬಳ್ಳಿ-ಧಾರವಾಡ ಅನಂತಾನಂತ ಪ್ರಣಾಮಗಳು.
ಹವ್ಯಕ ಸಮುದಾಯದ ಶ್ರೇಯೋಭಿವ್ರಧಿಗಾಗಿ ತಾವು ಕೈಗೊಂಡಿರುವ ಅನೇಕ ಕಾರ್ಯಕ್ರಮಗಳು ಇಡೀ ನಾಡಿನ ಜನಮನನ ಗೆದ್ದಿವೆ.

ಈಗ ಅತ್ಯಾಧುನಿಕ ತಂತ್ರಜ್ನಾನ ಬಳಸಿ ಮಠದ ವಿವಿಧ ಅಭಿವೃದ್ದಿ ಕಾರ್ಯಕ್ರಮಗಳ ಕುರಿತಂತೆ ಅಂತರ ಜಾಲದ ಮೂಲಕ ನಾಡಿನ ಅಷ್ಟೇ ಏಕೆ ಇಡೀ ವಿಶ್ವಕ್ಕೇ ಸಾಧನೆಯ ಮಾಹಿತಿ ನೀಡಿ ಮಾರ್ಗದರ್ಶನ ಮಾಡುತ್ತಿರುವುದು ಇನ್ನೊಂದು ಮಹತ್ವದ ಹೆಜ್ಜೆಯಾಗಿದೆ.

ಈ ಎಲ್ಲ ಕಾರ್ಯಗಳಲ್ಲಿ ಹವ್ಯಕ ಶೈಕ್ಷಣಿಕ ಹಾಗೂ ಸಾಂಸ್ಕ್ರತಿಕ ಸಂಸ್ಥೆ ಭಾಗಿಯಾಗುತ್ತದೆ. ಗೋಕರ್ಣ ಶ್ರೀ ಮಹಾಬಲೇಶ್ವರ ದೇವಸ್ಥಾನವನ್ನು ನಿರ್ವಣೆಗಾಗಿ ರಾಜ್ಯ ಸರಕಾರ ಆದೇಶ ಹೊರಡಿಸಿರುವುದು ಇಡೀ ಹವ್ಯಕ ಸಮುದಾಯಕ್ಕೆ ಹೆಮ್ಮೆಯ ವಿಷಯವಾಗಿದೆ. ಈ ಸಂತಸದ ಸುದ್ದಿ ತಿಳಿದ ತಕ್ಷಣ ನಮ್ಮ ಸಂಸ್ಠೆ ಪತ್ರಿಕಾ ಹೇಳಿಕೆ ನೀಡಿ ಸ್ವಾಗತಿಸಿದೆ. ಈ ಕುರಿತು ಸರ್ವಾನುಮತದ ನಿರ್ಣಯವನ್ನೂ ಅಂಗೀಕರಿಸಲಾಗಿದೆ. ಈ ಕುರಿತ ಹೇಳಿಕೆ ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ವಿಜಯ ಕರ್ನಾಟಕದ ಆಗಸ್ಟ್ ೧೭ ರ ಸಂಚಿಕೆಯ ಮೂರನೇ ಪುಟದಲ್ಲಿ ಪ್ರಕಟವಾಗಿದೆ.

ಶ್ರೀ ರಾಮಚಂದ್ರಾಪುರದ ಯಾವುದೇ ಚಟುವಟಿಕೆಗಳಲ್ಲಿ ನಮ್ಮ ಸಂಸ್ಠೆ ಸದಾ ಭಾಗಿಯಾಗಿ ಎಲ್ಲ ರೀತಿಯ ಬೆಂಬಲ ಹಾಗೂ ನೆರವನ್ನು ನೀಡಲು ಕಟಿಬದ್ಧವಾಗಿದೆ. ಗೋಕರ್ಣ ಭಾರತದ ಕೋಟ್ಯಂತರ ಭಕ್ತರ ಉಪಾಸನೆಯ ತಾಣವಾಗಿದ್ದು ಈ ಕ್ಷೇತ್ರವನ್ನು ಶ್ರೀ ಮಠ ವಹಿಸಿಕೊಂಡಿರುವುದರಿಂದ ಗೋಕರ್ಣ ಕ್ಷೇತ್ರಕ್ಕೆ ಹೊಸ ಕಾಯಕಲ್ಪ ದೊರೆಯುತ್ತದೆ ಎನ್ನುವುದು ನಮ್ಮೆಲ್ಲರ ಬಲವಾದ ನಂಬಿಗೆಯಾಗಿದೆ. ಬರುವ ದಿನಗಳಲ್ಲಿಯೂ ನಮ್ಮ ಸಂಸ್ಥೆ ಶ್ರೀ ಮಠಕ್ಕೆ ಎಲ್ಲ ರೀತಿಯ ನೆರವನ್ನು ನೀಡಲು ಸಿದ್ಧವಿದೆ. ಗೋ ಸಂರಕ್ಷಣೆ, ಪುರಾಣ ಪರಂಪರೆಯ ವೃದ್ಧಿ ಹಾಗು ಜನತೆಯಲ್ಲಿ ಆಧ್ಯಾತ್ಮಿಕ ಮನೋಭಾವನೆ ಮೂಡಿಸುತ್ತಿರುವ ಶ್ರೀ ರಾಮಚಂದ್ರಾಪುರ ಮಠ ಹಾಗೂ ಶ್ರೀ ರಾಘವೇಶ್ವರ ಭಾರತಿ ಶ್ರೀಗಳು ಶ್ರೀ ಕ್ಷೇತ್ರ ಗೋಕರ್ಣವನ್ನು ಇನ್ನಷ್ಟು ಸಮರ್ಥವಾಗಿ ನಿರ್ವಹಿಸುವಲ್ಲಿಯೂ ವ್ಯಾಪಕ ಜನಮನ್ನಣೆ ಗಳಿಸಿದ್ದಾರೆ. ದೇವಸ್ಥಾನದಲ್ಲಿ ಅನೂಚಾನವಾಗಿ ನದೆಯುವ ಕಾರ್ಯಕ್ರಮಗಳು ಇನ್ನಷ್ಟು ಸಾಂಗವಾಗಿ ನಡೆಯಲಿದೆ. ನಮ್ಮ ಸಂಸ್ಥೆ ಮುಂದೆಯೂ ಇದೇ ರೀತಿಯ ಬೆಂಬಲವನ್ನು ನೀಡುತ್ತದೆ.

ಅಂತರ ಜಾಲದ ಆವೃತ್ತಿ ನಿರಂತರವಾಗಿ ಮುನ್ನಡೆದು ಎಲ್ಲರಿಗೂ ಮಾರ್ಗದರ್ಶನ ಮಾಡುವಂತಾಗಲಿ ಎಂದು ಹಾರೈಸುತ್ತೇವೆ. ಅಂತರ ಜಾಲದ ಆವೃತ್ತಿ ಇನ್ನಷ್ಟು ಮಾಹಿತಿಗಳನ್ನು ಒದಗಿಸಿ ಅತ್ಯುತ್ತಮ ಮಾಹಿತಿ ಜಾಲವಾಗಿ ಹೊರಹೊಮ್ಮಲಿ.


-ಡಿ. ಎನ್. ಭಟ್, ಗೌರವ ಕಾರ್ಯದರ್ಶಿ ಮತ್ತು ಅರುಣಕುಮಾರ ಹಬ್ಬು, ಖಜಾಂಚಿ, ಹವ್ಯಕ ಶೈಕ್ಷಣಿಕ ಸಂಸ್ಥೆ, ಹುಬ್ಬಳ್ಳಿ- ಧಾರವಾಡ.

*ಗೋ ವಿಶ್ವಕ್ಕೆ ವರ್ಷದ ಸಂಭ್ರಮ*

ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮಿಗಳ ಮಹತ್ವಾಕಾಂಕ್ಷಿ ಭಾರತಿಯ ಗೋತಳಿಗಳ ಸಂರಕ್ಷಣಾ ಅಭಿಯಾನ 'ಕಾಮಧುಘಾ'ಕ್ಕೆ ಪೂರಕವಾಗಿ ಪ್ರಾರಂಭವಾದ ಅಂತರ್ಜಾಲ ಪತ್ರಿಕೆ 'ಗೋವಿಶ್ವ' ತನ್ನ ಪ್ರಥಮ ವರ್ಷಾಚರಣೆಯನ್ನು ಸದ್ದಿಲ್ಲದೆ ಆಚರಿಸಿಕೊಳ್ಳುತ್ತಿದೆ. ಕಳೆದ ಚಾತುರ್ಮಾಸದಲ್ಲಿ ಒಂದಿಷ್ಟು ಟೆಕ್ಕಿಗಳು ತಮ್ಮ ವೀಕೆಂಡ್ ವಿಶ್ರಾಂತಿಯನ್ನು ತೊರೆದು ಶ್ರೀಗಳ ಇಚ್ಚೆಯಂತೆ ಗೋಸಂರಕ್ಷಣ ಅಭಿಯಾನದಲ್ಲಿ ತಾವೂ ಕೈಜೊಡಿಸಲು ನಿರ್ಧರಿಸಿದಾಗ ಹುಟ್ಟಿಕೊಂಡಿದ್ದು IT4COW (ಗೋವಿಗಾಗಿ ತಂತ್ರಜ್ನರು)ಸಂಸ್ಥೆ. ಟೆಕ್ಕಿಗಳು ತಮ್ಮ ಯಾವತ್ತೂ 'ಬ್ಯೂಸಿ ಜೀವನದ ಮಧ್ಯೆಯೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೆಕೆಂಬ ಶ್ರೀ ಗಳ ಸದಿಚ್ಛೆಯನ್ನು ಅನುಷ್ಟಾನಗೊಳಿಸಲು ಪ್ರಾರಂಭಗೊಂಡ IT4COW, ತನ್ನ ಪ್ರಥಮ ಹೆಜ್ಜೆಯಾಗಿ ಅಂತರ್ಜಾಲ ಪತ್ರಿಕೆಯೋಂದನ್ನು ಹೊರತರಲು ಸಂಯೋಜಿಸಿತು.ಗೋವಿನ ಕುರಿತಾದ ಈ ಪ್ರಥಮ ಇ-ಪತ್ರಿಕೆಯನ್ನು ಕನ್ನಡ ಹಾಗೂ ಇಂಗ್ಲೀಶ್‍ನಲ್ಲೆರೆಡರ್ಲೂ ತರಲು ನಿರ್ಧರಿಸಿ,ಕನ್ನಡ ಅವತರಣಿಕೆಗೆ ಅಂತರ್ಜಾಲದಲ್ಲಿ ಪ್ರಥಮವಾಗಿ ಕನ್ನಡ ಪರಿಚಯಿಸಿದ ಖ್ಯಾತಿಯ ಡಾಪವನಜ ಸಂಪಾದಕರಾಗಿ ಹೊಣೆಹೊತ್ತರೆ, ಆಂಗ್ಲ ಅವತರಣಿಕೆಯ ಜವಾಬ್ದಾರಿ ಅಜಿತ್ ರಾಘವೇಂದ್ರ ತೆಗೆದುಕೊಂಡರು. ಗಿರಿನಗರ ಗೋಸಂಧ್ಯದಲ್ಲಿ ಪೇಜಾವರ ಶ್ರೀಗಳು ಲೊಕಾರ್ಪಣಗೋಳಿಸಿದರು.ಅಂದಿನಿಂದ ಪ್ರತಿ ತಿಂಗಳ ಮೊದಲನೆ ತಾರಿಖಿನಂದು ಅಂತರ್ಜಾಲದಲ್ಲಿ ಲಭ್ಯವಾಗುವ ಈ ಇ-ಪತ್ರಿಕೆಗಳು ಪ್ರಾರಂಭವಾಗಿ ಈ ಅಕ್ಟೋಬರ್‍ಗೆ ಒಂದು ವರ್ಷ.

'ಗೋ ವಿಶ್ವ ' ಪ್ರತಿ ತಿಂಗಳೂ ಭಾರತೀಯ ಗೊ ತಳಿಯೋಂದನ್ನು ಕೇಂದ್ರಿತವಾಗಿಟ್ಟುಕೊಂಡು 'ಮಾಸದ ಗೋವು', ಅದರೊಟ್ಟಿಗೆ ತಜ್ನರ ಲೇಖನಗಳು, ಪ್ರಶ್ನೋತ್ತರಗಳು, ನುಡಿಚಿತ್ರಗಳೂ, ಗೋವಿನ ಕುರಿತಾದ ಸೃಜನಶೀಲ ಸಾಹಿತ್ಯ ಒಳಗೊಂಡು ಆಕರ್ಷಕವಾಗಿ ಮೂಡಿ ಬರುತ್ತಿದೆ. 'ಪತ್ರಿಕೆಯ ಮುಖ್ಯಗುರಿ ಸಮಾಜದ 'ಭುದ್ದಿವಂತ'ರಾದುದರಿಂದ ಭಾವನಾತ್ಮಕ ವಿಚಾರಗಳಿಗಿಂತ ವಿಷಯಾಧಾರಿತ ಲೇಖನಗಳಿಗೇ ಹೆಚ್ಚು ಒತ್ತು ನೀಡಲಾಗುತ್ತಿದೆ. ಇದರಿಂದ ಭಾರತೀಯ ಗೋವುಗಳ ಅರ್ಥಿಕ ಸಾಮಾಜಿಕ ಪ್ರಾಮುಖ್ಯತೆ ತಿಳಿದು ಹೆಚ್ಚು ಹೆಚ್ಚು ಜನರು ಆಕರ್ಷಿತರಾಗುತ್ತಿದ್ದಾರೆ' ಎನ್ನುತ್ತಾರೆ ಸಂಪಾದಕ ಪವನಜ.

ಇ-ಪತ್ರಿಕೆಯಲ್ಲದೆ IT4COW ಉದ್ಯೋಗಾಕಂಕ್ಶಿಗಳಿಗೆ ಅನೇಕ ಕಾರ್ಯಾಗಾರಗಳನ್ನು ನಡೆಸುತ್ತಿದೆ. ಪತ್ರಿಕೆ http://vishwagou.org/e-paper.htm ತಾಣದಲ್ಲಿ ಉಚಿತವಾಗಿ ಲಭ್ಯವಿದೆ.ಅಲ್ಲದೆ http://groups.yahoo.com/group/IT4COW/ಗೆ *ಸದಸ್ಯರಾಗುವ ಮೂಲಕ ನೇರವಾಗಿ ಪ್ರತಿತಿಂಗಳು ನಮ್ಮ ಮೈಲ್ ಬಾಕ್ಸ್'ಗೇ ತರಿಸಿಕೊಳ್ಳಬಹುದು.ಪತ್ರಿಕೆ ಉತ್ತಮ ಲೇಖನಗಳನ್ನೂ, ರಚನಾತ್ಮಕ ವಿಮರ್ಷ್ಯೆಯನ್ನೂ ಅಪೇಕ್ಷಿಸುತ್ತಿದೆ.

-ಮಧು ದೊಡ್ಡೇರಿ

ಚಾತುರ್ಮಾಸ್ಯ ಮತ್ತು ಸಂಘಟನೆ

!!ಹರೇ ರಾಮ!!

ಶ್ರೀಗಳ ಕಳೆದ ವರುಷದ ಚಾತುರ್ಮಾಸ್ಯ ದಿಂದ ಶ್ರೀಮಠದ ಬೆಂಗಳೂರು ಸೀಮೆಯ ಭಕ್ತರು ಸಂಘಟಿತರಾಗಲು ತುಂಬ ಸಹಾಯ ಮಾಡಿದೆ ಎಂದರೆ ತಪ್ಪಾಗಲಾರದು. ಅದರಲ್ಲೂ ಯುವಕರು ತುಂಬ ಸಂಘಟಿತರಾಗಿದ್ದು ಶ್ರೀಗಳ ಕನಸುಗಳನ್ನು ನನಸಾಗಿಸಲು ತಮ್ಮದೇ ರೀತಿಯಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸುತ್ತಾ ಇದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ ಮೊನ್ನೆ ಒಬ್ಬ ಬೆಂಗಳೂರಿನಲ್ಲಿ ವಾಸಿಸುತಿರುವ ಸಿರಸಿ ಬಳಿಯ ವ್ಯಕ್ತಿಯೊಬ್ಬರಿಗೆ ತುಂಬ ತುರ್ತ್ತಾಗಿ A- ರಕ್ತದ ಅವಶ್ಯಕತೆ ಇತ್ತು. ಮಠದ ಸೇವಾಶಾಖೆಯನ್ನು ಮಧ್ಯಾಹ್ನ ಸುಮಾರು 2.30ರ ಹೊತ್ತಿಗೆ ಸಂಪರ್ಕಿಸಿ ವಿಷಯವನ್ನು ಕುಟುಂಬದವರು ತಿಳಿಸಿದರು. ತಕ್ಷಣ ಕಾರ್ಯಪ್ರವರ್ತವಾದ ಯುವ ಪಡೆ ಕೇವಲ ಸುಮಾರು ಒಂದು ಘಂಟೆ ಅಂದರೆ 3.30ರ ಸಮಯಕ್ಕೆ A- ಹೊಂದಿದ 3 ಜನರನ್ನು ಹುಡುಕಿ ಅವರನ್ನು ಸಂಪರ್ಕಿಸಿ ರಕ್ತದ ವ್ಯವಸ್ಥೆಯನ್ನು ಮಾಡಲಾಯಿತು. ಶ್ರೀಗಳ ಮೇಲಿನ ಗೌರವಕ್ಕೆ ನಮ್ಮ ಕರೆಗೆ ಓಗೊಟ್ಟು ದೂರದ ಹೊಸಕೋಟೆ ಯಿಂದ ತಮ್ಮೆಲ್ಲ ಕೆಲಸ ಕಾರ್ಯಗಳನ್ನು ಬಿಟ್ಟು ಬೆಂಗಳೂರಿನ ಮಲ್ಯ ಆಸ್ಪತ್ರೆಗೆ ಬಂದು ರಕ್ತಧಾನ ಮಾಡಿದ ಶ್ರೀ. ಪ್ರದೀಪ್ ಕುಮಾರ ಅವರಿಗೆ ಶ್ರೀ ಮಠದ ಸೇವಶಾಖೆ ಯಿಂದ ಹ್ರದಯಪೂರ್ವಕ ಧನ್ಯವಾದಗಳು.

-ನವೀನ ಹೆಗಡೆ

Saturday, October 11, 2008

ಸ್ವಾಮೀಜಿಗಳೇ ನೀವು ಎಂಥವರನ್ನು ಬೆಂಬಲಿಸುತ್ತಿದ್ದೀರಿ ?

ಗೋಕರ್ಣದಲ್ಲಿ ಕ್ರಿಮಿನಲ್ಗಳದ್ದೇ ಸಾಮ್ರಾಜ್ಯ ಸ್ಥಾಪನೆಯಾಗಿದೆ ಎಂಬುದು ಹೊಸ ಸಂಗತಿಯೇನಲ್ಲ. ಶ್ರೀ ರಾಮಚಂದ್ರಾಪುರ ಮಠಕ್ಕೆ ಮಹಾಬಲೇಶ್ವರ ದೇಗುಲವನ್ನು ವಹಿಸಿಕೊಟ್ಟಿರುವುದಕ್ಕೆ ತೀವ್ರ ಪ್ರತಿರೋಧ ಒಡ್ಡುತ್ತಿರುವವರೂ ಇವರೇ. ತಮ್ಮ ದಂಧೆಗಳಿಗೆ ಇನ್ನು ಅವಕಾಶವಾಗುವುದಿಲ್ಲ ಎಂಬುದೇ ಇಂಥ ಆಕ್ರೋಶಕ್ಕೆ ಕಾರಣ ಎಂಬುದೂ ಗುಟ್ಟಾಗಿ ಉಳಿದಿಲ್ಲ.


ಕಳೆದ ಗುರುವಾರ ನಡೆದ ಘಟನೆಯೊಂದು ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಒದಗಿಸುತ್ತದೆ. ಮಾತ್ರವಲ್ಲ ವಿದ್ರೋಹಿಗಳ ಅಂಥ ಮನೋಭಾವ, ಹತಾಶೆ ಯಾವ ಮಟ್ಟಕ್ಕೂ ಇಳಿಯಲು ಪ್ರೇರೇಪಿಸುತ್ತಿದೆ ಎಂಬುದು ಸಮಾಜವನ್ನು ವಿಭ್ರಮೆಗೆ ದೂಡುತ್ತದೆ. ಅಂದು ಗೋಕರ್ಣದಲ್ಲಿ ಮರುದಿನದ (ಶುಕ್ರವಾರ) ‘ಸಾವಿರದ ಗೋದಾನ’ ಕಾರ್ಯಕ್ರಮಕ್ಕೆ ಸಿದ್ಧತೆಗಳು ನಡೆಯುತ್ತಿದ್ದವು. ಎಲ್ಲವೂ ತಣ್ಣಗಾಗಿದೆ, ಸುಸೂತ್ರವಾಗಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ದೊರೆಯುತ್ತಿದೆ. ಗೋಕರ್ಣ ಕೊನೆಗೂ ತನ್ನ ಐತಿಹಾಸಿಕ ಪಾವಿತ್ರ್ಯಕ್ಕೆ ಮರಳುತ್ತಿದೆ ಎಂದು ನಾಡಿನ ಜನತೆ ನಿಟ್ಟುಸಿರು ಬಿಡುತ್ತಿರುವಾಗಲೇ ನಡೆಯಬಾರದ್ದು ನಡದು ಹೋಗುತ್ತಿತ್ತು. ಅಂದು ಶ್ರೀ ರಾಮಚಂದ್ರಾಪುರ ಮಠದ ಕಾರ್ಯಕರ್ತರೊಬ್ಬರ ಮೇಲೆ ಪೆಟ್ರೋಲ್ ಸುರಿದು ಕೊಲೆ ಯತ್ನಿಸಿದರು, ಅದೂ ಭದ್ರಕಾಳಿ ಅಮ್ಮನವರ ದೇಗುಲದೆದುರೇ ಎಂದರೆ ವಿರೋದಿಗಳ ಆಂತರ್ಯದಲ್ಲಿ ಅಡಗಿರುವ ಪೈಶಾಚಿಕ ತನ ಎಂಥದ್ದೆಂಬುದನ್ನು ಊಹಿಸಬಹುದು.


ಶ್ರೀ ಕ್ಷೇತ್ರ ಗೋಕರ್ಣ ದೇವಸ್ಥಾನವನ್ನು ರಾಮಚಂದ್ರಾಪುರ ಮಠಕ್ಕೆ ವಹಿಸಿಕೊಟ್ಟಿರುವುದನ್ನು ಸಹಿಸಲಾಗದ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಪ್ರತಿಭಟನೆಯ ಹೆಸರಿನಲ್ಲಿ ಇಂತಹ ಕೃತ್ಯಕ್ಕೆ ಕೈ ಹಾಕಿರುವುದು ಉತ್ತರ ಕನ್ನಡ ಜಿಲ್ಲೆ ಸಭ್ಯ ಜನತೆ ತಲೆ ತಗ್ಗಿಸುವಂತೆ ಮಾಡಿದೆ. ಇಂಥ ದೌರ್ಜನ್ಯ ಇದೇ ಮೊದಲಲ್ಲ. ಎಲ್ಲ ರೀತಿಯ ಅಸ್ತ್ರಗಳನ್ನೂ ಪ್ರಯೋಗಿಸಿ ಏನಾದರೂ ಮಾಡಿ ಮಠದ ಮಂದಿಯಬನ್ನು ಕೆರಳಿಸಬೇಕು, ಅವರ ತಾಳ್ಮೆಯ ಕಟ್ಟೆ ಒಡೆಯುವಂತೆ ಮಾಡಬೇಕು. ಮಠದ ಶಿಷ್ಯರು ಪ್ರತಿದಾಳಿಗಿಳಿಯಬೇಕೆಂಬ ಹುನ್ನಾರದಲ್ಲಿ ಯುದ್ಧಾಹ್ವಾನ ಆರಂಭದ ದಿನದಿಂದಲೂ ಬರುತ್ತಲೇ ಇದೆ.


ದೇಗುಲ ಹಸ್ತಾಂತರದ ದಿನವೇ, ಶ್ರೀ ಮಠದ ಅತ್ಯಂತ ಗೌರವಾರ್ಹ ಮೂವರು ವ್ಯಕ್ತಿಗಳ ಮೇಲೆ ‘ಸೋ ಕಾಲ್ಡ್ ಪಂಡಿತರು’ ಎನಿಸಿಕೊಂಡವರು ಹಲ್ಲೆ ನಡೆಸಿದ್ದು, ಆ ಮೂಲಕ ತಮ್ಮ ಚಾರಿತ್ರ್ಯ ಪ್ರದರ್ಶಿಸಿದ್ದು ಗೊತ್ತೇ ಇದೆ. ಅಂದು ಗರ್ಭ ಗುಡಿಯಲ್ಲೇ ನಿಂತು ಎಂಥೆಂಥಾ ಭಾಷೆ ಬಳಸಲಾಯಿತು ಎಂದರೆ ಬಹುಶಃ ಅಸ್ತಿತ್ವದಲ್ಲಿರುವ ಯಾವ ನಿಘಂಟಿನಲ್ಲೂ ಅದಕ್ಕೆ ಅರ್ಥ ಹುಡುಕಲು ಸಾಧ್ಯವಿಲ್ಲ. ಮಾತ್ರವಲ್ಲ ಅವರೆಲ್ಲರೂ ಯಾವ ಸ್ಥಿತಿಯಲ್ಲಿದ್ದರು, ಮಹಾಬಲೇಶ್ವರನ ಪೂಜೆ ಮಾಡುತ್ತಿರುವ ಆ ಮಂದಿಯ ಬಾಯಿಯಿಂದ ಎಂಥ ‘ಕಮಟು ವಾಸನೆ’ ಹೊರಹೊಮ್ಮುತ್ತಿತ್ತು ಎಂಬುದು ತಿಳಿದರೆ ಈ ನಾಡಿನ ಸಮಸ್ತ ಜನ ಕೋಟಿಯೇ ಅವರನ್ನು ಬೆನ್ನತ್ತಿಕೊಂಡು ಹೋಗಿ ಗಡಿಪಾರು ಮಾಡಿ ಬರುತ್ತಾರೆ. ಆನಂತರವೂ ಅಶ್ಲೀಲ ವಾಗ್ದಾಳಿ ನಡೆಯುತ್ತಲೇ ಇದೆ. ಇದು ಕೇವಲ ಮಠದ ಶಿಷ್ಯರ ಮೇಲಷ್ಟೇ ಅಲ್ಲ. ಸ್ವತಃ ಪೂಜ್ಯ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರನ್ನು ಅವರ ಸ್ಥಾನ ಗೌರವ ಮರೆತು ವಿರೋ ಗುಂಪಿನ ‘ಪಂಡಿತ ವರ್ಗ’ ಅತ್ಯಂತ ಕೆಳಮಟ್ಟದಲ್ಲಿ ಟೀಕಿಸಿದೆ, ಟೀಕಿಸುತ್ತಿದೆ ಎಂದರೆ ಅವರ ಸಂಸ್ಕೃತಿ ಯಾವ ಮಟ್ಟದ್ದೆಂಬುದನ್ನು ಊಹಿಸಬಹುದು. ಇದೇನೂ ವಿಶೇಷವಲ್ಲ ಬಿಡಿ, ಅವರ ಬೆಂಬಲಕ್ಕೆ ನಿಂತಿರುವ, ಸ್ವತಃ ಮಾರ್ಗದರ್ಶನ ಮಾಡುತ್ತಿರುವ ಒಬ್ಬರು ಯತಿಗಳೇ ರಾಘವೇಶ್ವರರನ್ನು ‘ಕಲಿ’ ಎಂದು ಸಂಬೋಸಿದ್ದರೆ, ಅದೇ ವೇದಿಕೆಯಲ್ಲಿದ್ದ ಇನ್ನೊಬ್ಬ ‘ಯತಿವರೇಣ್ಯ’ ರಾವಣೇಶ್ವರ ಎಂದು ಮೂದಲಿಸಿಲ್ಲವೇ ? ಗುರುವಿನಂತೆ ಶಿಷ್ಯರು...!


ಆದರೆ ಹಲ್ಲೆ ನಡೆಸಿ, ಜೀವಂತ ದಹನಕ್ಕೂ ಮುಂದಾಗುತ್ತಾರೆ ಎಂಬ ನಿರೀಕ್ಷೆಯನ್ನು ಬಹುಶಃ ನಾಡಿನ ಪ್ರಜ್ಞಾವಂತರಾರೂ ಮಾಡಿರಲಿಕ್ಕಿಲ್ಲ. ವಿರೋಧ ಮಾಡಲಿ.ಅದಕ್ಕೊಂದು ವೇದಿಕೆ, ಮಾರ್ಗ, ರೀತಿ, ರಿವಾಜುಗಳಿವೆ. ಪ್ರಜಾಪ್ರಭುತ್ವ ದೇಶವೊಂದರಲ್ಲಿ ಪ್ರಶ್ನಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಕಾನೂನು, ನ್ಯಾಯಾಲಯಗಳು ಅದಕ್ಕೆಂದೇ ಇವೆ. ಈಗಾಗಲೇ ಅದರ ಮೊರೆಯನ್ನೂ ವಿರೋಧಿಗಳು ಹೊಕ್ಕಾಗಿದೆ. ಆದರೆ ನ್ಯಾಯ ತಮ್ಮ ಪರ ಇರಲು ಸಾಧ್ಯವೇ ಇಲ್ಲವೆಂಬುದನ್ನು ಚೆನ್ನಾಗಿ ಮನಗಂಡಿರುವ, ಮಾತ್ರವಲ್ಲ ಹೇಗೆ ಮಾಡಿದರೂ ಗೋಕರ್ಣದಲ್ಲಿನ್ನು ಅಭಿವೃದ್ಧಿಯನ್ನು ತಡೆಯಲು ಸಾಧ್ಯವಾಗುವುದಿಲ್ಲ. ತಮ್ಮ ಅಕ್ರಮಗಳನ್ನು ಇನ್ನು ಬಹಳಷ್ಟು ದಿನ ನಡೆಸಲು ಸಾಧ್ಯವಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡಿರುವ ಮಂದಿ, ಮುಗ್ಧ ಕಾರ್ಯಕರ್ತರೊಬ್ಬರ ಕೊಲೆ ಯತ್ನಕ್ಕೆ ಮುಂದಾಗಿದ್ದು ಸ್ಪಷ್ಟ.


ಮಠದ ಪರ ಜನಸಂಘಟನೆ ಬಲಗೊಳ್ಳುತ್ತಿದ್ದಂತೇ ವಿಚಲಿತವಾದ ಈ ಗುಂಪು ಇಂತಹ ಕೃತ್ಯಕ್ಕೆ ಕೈ ಹಾಕಿ ಅಸ್ತಿತ್ವ ಉಳಿಸಿಕೊಳ್ಳಲು ಮುಂದಾಗಿದೆ. ಆದರೆ ಇದಕ್ಕೆ ಕಡಿವಾಣ ಹಾಕಲು ಜನ ಮತ್ತಷ್ಟು ಸಂಘಟಿತರಾಗಿದ್ದಾರೆ. ಈ ಕುಕೃತ್ಯ ಖಂಡಿಸಿ ಗುರುವಾರ ಸಂಜೆ ಸ್ಥಳೀಯ ಪೊಲೀಸ್ ಠಾಣೆ ಎದುರು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿ ಬಲ ಪ್ರದರ್ಶನ ನಡೆಸಿದ್ದಾರೆ. ಘಟನೆಗೆ ಸಂಬಂಸಿದಂತೆ ಈಗಾಗಲೇ ಪೊಲೀಸ್ ಮೊಕದ್ದಮೆ ದಾಖಲಾಗಿದೆ. ವಿರೋಧಿ ಗುಂಪಿನ ನಾಯಕ ರಾಜಗೋಪಾಲ ಎಂ. ಅಡಿ ಅವರನ್ನು ಪೊಲೀಸರು ಬಂಸಿದ್ದಾರೆ. ಹಲ್ಲೆಯ ಪ್ರಮುಖ ಆರೋಪಿಗಳಾದ ರವಿ ಎಂ. ಅಡಿ, ಮನು ನಾವಡ ಹಾಗೂ ಇನ್ನಿತರರ ಬಂಧನಕ್ಕೆ ಶೋಧ ಕಾರ್ಯ ಮುಂದುವರಿದಿದೆ.


ವಿಷಯ ಅದಷ್ಟೇ ಅಲ್ಲ. ಗೋಕರ್ಣದ ಕೇವಲದಲ್ಲಿ ಕೇವಲರೆನಿಸಿಕೊಂಡವರು ಇಂಥ ಕೃತ್ಯಗಳನ್ನು ನಡೆಸುವುದು ವಿಶೇಷವೇ ಅಲ್ಲ. ದಿನ ಬೆಳಗಾದರೆ, ಗಾಂಜಾ, ಅಫೀಮುಗಳ ಕಳ್ಳಸಾಗಣೆ, ಹೆಂಡ ಸಾರಾಯಿಗಳ ಸಹವಾಸದಲ್ಲೇ ಮುಳುಗಿರುವ, ವಿದೇಶಿ ಹಿಪ್ಪಿಗಳ ನಡುವೆಯೇ ಒಡನಾಡುವ, ಅಲ್ಲಿನ ಪ್ರವಾಸಿಗರಿಗೆ ’ಎಲ್ಲವನ್ನೂ ’ ಪೂರೈಸಲೆಂದೇ ನಿಂತಿರುವ, ಆ ಮೂಲಕ ದೇವರ ಸನ್ನಿಯಲ್ಲಿ ಲಕ್ಷಾಂತರ ರೂ.ಗಳನ್ನು ಕೊಳ್ಳೆಹೊಡೆಯುತ್ತಿರುವ ಈ ಮಂದಿಯನ್ನೇ ತಲೆ ಮೇಲೆ ಹೊತ್ತುಕೊಂಡು ಮೆರೆಯುತ್ತಿರುವ ತಮ್ಮ ಪ್ರತಿಷ್ಠೆ, ಮಾತ್ಸರ್ಯಗಳಿಗೆ ಅವರನ್ನು ಬಳಸಿಕೊಳ್ಳುತ್ತಿರುವ ಪೂಜ್ಯ ಶೃಂಗೇರಿ ಶ್ರೀಗಳೇ, ಮಾನನೀಯ ಸ್ವರ್ಣವಲ್ಲೀ ಶ್ರೀಗಳೇ, ನಿಮ್ಮ ಸ್ಥಾನಕ್ಕೆ ಇದು ಎಂತಾದರೂ ಗೌರವ ತಂದುಕೊಟ್ಟೀತೆ ? ಈ ಕ್ಷಣದಲ್ಲಾದರೂ ಇಂಥ ವಿದ್ರೋಹಿಗಳನ್ನು ಕಟ್ಟಿಕೊಂಡು ಸಮರ ನಡೆಸುತ್ತೇವೆ ಎಂಬ ಭ್ರಮೆಗಳನ್ನು ತೊರೆಯಿರಿ. ಹಾಗಾದರೂ ಭಾರತೀಯ ಸತ್ಪರಂಪರೆಯ ಧರ್ಮ ಪೀಠಗಳ ಪೂಜನೀಯತೆಯನ್ನು ಮತ್ತೊಮ್ಮೆ ಎತ್ತಿ ಹಿಡಿಯಿರಿ. ಅದಿಲ್ಲದಿದ್ದರೆ ಅವರ ಮಟ್ಟಕ್ಕೆ ತಮ್ಮನ್ನೂ ಇಳಿಸಿಬಿಡಲು ಇನ್ನು ಹೆಚ್ಚು ಕಾಲವಿಲ್ಲ. ಇದು ಎಲ್ಲ ಧರ್ಮ ಪೀಠಗಳೆದುರು ನನ್ನ ಕಳಕಳಿಯ, ಅಷ್ಟೇ ಪ್ರಾಮಾಣಿಕ ವಿನಂತಿ.


-ಶ್ರೀ ವತ್ಸ

ಕಿಡಿಗೇಡಿಗಳ ಕೃತ್ಯಕ್ಕೆ ವ್ಯಾಪಕ ಖಂಡನೆ

ಶ್ರೀ ಕ್ಷೇತ್ರ ಗೋಕರ್ಣದ ಅಭಿವೃದ್ಧಿ ಸಹಿಸದ ಕೆಲ ಕಿಡಿಗೇಡಿಗಳು ತಮ್ಮ ಸ್ವಂತ ಹಿತಾಸಕ್ತಿಗೆ ಹೆಜ್ಜೆಹೆಜ್ಜೆಗೂ ತೊಂದರೆ ನೀಡುತ್ತಿರುವುದಕ್ಕೆ ಎಲ್ಲೆಡೆಯಿಂದ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.

ಏತನ್ಮಧ್ಯೆ ತಾಪಂ ಸದಸ್ಯ ಆನಂದು ಕವರಿ, ಅರುಣ ನಾಯ್ಕ, ಪ್ರದೀಪ ನಾಯಕ, ನಾಗರಾಜ ಹಿತ್ತಲಮಕ್ಕಿ ಅವರ ನೇತೃತ್ವದಲ್ಲಿ ಸ್ಥಳೀಯ ಸಾವಿರಾರು ನಾಗರಿಕರು ಹಾಗೂ ಶ್ರೀ ರಾಮಚಂದ್ರಾಪುರ ಮಠದ ಕಾರ್ಯಕರ್ತರು ಗುರುವಾರವೇ ರಥಬೀದಿಯಿಂದ ಕಡಲತೀರದವರೆಗೆ ಮೆರವಣಿಗೆ ನಡೆಸಿ ಆರೋಪಿಗಳನ್ನು ಬಂದಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿದರು.

ಶ್ರೀ ಮಠದ ಕಾರ್ಯಕರ್ತನೊಬ್ಬನ ಮೇಲೆ ಈಗ ಹಲ್ಲೆ ನಡೆಸಲಾಗಿದ್ದು, ಸಜೀವ ದಹನದ ಯತ್ನ ಮಾಡಿರುವುದು ಹೇಯ ಕೃತ್ಯ ಎಂದು ಸ್ಥಳೀಯ ಪಂಚಾಯಿತಿ ಸದಸ್ಯ ಶೇಖರ ನಾಯಕ ಹಾಗೂ ಎಂ. ಕೆ.ಹೆಗಡೆ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಗುರುವಾರ ಅವರು ಮಾತನಾಡಿ, ಹೇಳಿದ್ದಿಷ್ಟು: ಬುಧವಾರ ಸಂಜೆ ಕೆಲವರು ದೇವಾಲಯದ ಆಡಳಿತ ಕಚೇರಿ ಎದುರು ಧರಣಿ ನಡೆಸಿದ್ದಾರೆ. ದೀರ್ಘ ಕಾಲದಿಂದ ಪರಿಷ್ಕರಣೆ ಹಾಗೂ ನವೀಕರಣವಾಗದ ಉಪಾವಂತಿಕೆ ಕುರಿತು ವಿವರ ಸಲ್ಲಿಸುವಂತೆ ಕೋರಲಾಗಿತ್ತು. ಈ ಬಗ್ಗೆ ಅನೇಕರು ಅರ್ಜಿ ಸಲ್ಲಿಸಿದ್ದಾರೆ. ಆದರೆ ಕೆಲವರು ವಿಷಯಕ್ಕೆ ಸಂಬಂಧವೇ ಇಲ್ಲದ ವಿಚಾರಗಳನ್ನು ನಮೂದಿಸಿ ಅರ್ಜಿ ನೀಡಿದ್ದಾರೆ. ಇಂತಹ ವೇಳೆಯಲ್ಲಿ ಈ ಕುರಿತು ಸ್ವೀಕೃತಿ ಪತ್ರ ನೀಡಲು ಒತ್ತಾಯಿಸಿ ದಾಂಧಲೆ ನಡೆಸಿರುವುದು ವಿಷಾದನೀಯ.

ಕಾರ್ಯಕರ್ತರಲ್ಲಿ ಜೀವ ಭಯ:
ತೀವ್ರ ಗತಿಯಲ್ಲಿ ದೇವಾಲಯದ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಇದರಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಯ ಮೇಲೆ ನಡೆಸಿರುವ ಹಲ್ಲೆಯಿಂದ ಸಹಜವಾಗಿಯೇ ಕಾರ್ಯಕರ್ತರು ಜೀವ ಭಯಕ್ಕೊಳಗಾಗಿದ್ದಾರೆ. ಈ ಕುರಿತು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಸ್ಥಳೀಯ ಪೊಲೀಸ್ ಅಕಾರಿಗಳಿಗೆ ಕೋರಲಾಗಿದೆ. ಶ್ರೀ ಮಠದ ಆಡಳಿತಕ್ಕೆ ದೇವಾಲಯ ಒಳಪಟ್ಟ ದಿನದಿಂದ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಕಂಡು ಸಹಿಸಲಾಗದ ಕೆಲವೇ ವ್ಯಕ್ತಿಗಳು ಇಂಥ ಹತಾಶ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಅವರು ಹೇಳಿದರು.

ಪಂಚಾಯಿತಿ ಉಪಾಧ್ಯಕ್ಷೆ ಭಾರತಿ ದೇವತೆ, ಸದಸ್ಯ ಮಹೇಶ ಶೆಟ್ಟಿ, ಉಪಾವಂತ ಮಂಡಳಿ ಅಧ್ಯಕ್ಷ ಗಣೇಶ ಹಿರೇಗಂಗೆ, ಅರುಣ ನಾಯಕ, ಭಾಸ್ಕರ ನಾಯಕ, ಶೇಖರ ನಾಯಕ, ಹರಿಹರ ಮೂಡಂಗಿ, ಪ್ರಕಾಶ ಮೂಡಂಗಿ, ರಾಜನ್ ಕುರ್ಲೆ, ಗೋವಿಂದ ಗೌಡ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಗೋವುಗಳಿಂದ ಗೋಕರ್ಣ ಸಮೃದ್ಧ :ರಾಘವೇಶ್ವರ ಶ್ರೀ ಆಶಯ


ಗೋಕರ್ಣ: ಶ್ರೀಕ್ಷೇತ್ರದ ಇತಿಹಾಸದಲ್ಲಿ ಈ ದಿನ ಮಹಾಸುದಿನವಾಗಿದೆ. ಕ್ಷೇತ್ರದಿಂದ ಜನಹಿತ ಕಾರ್ಯಕ್ರಮಗಳು ಇಂದಿನಿಂದ ಆರಂಭಗೊಂಡಿವೆ ಎಂದು ರಾಮಚಂದ್ರಾಪುರ ಮಠಾಶ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ನುಡಿದರು.

ಶ್ರೀ ಮಹಾಬಲೇಶ್ವರ ದೇವಾಲಯ ಬಳಿಯ ಸಮುದ್ರ ತೀರದ ಬೃಹತ್ ಸಭಾ ಭವನದಲ್ಲಿ ನೂರು ಗೋವುಗಳನ್ನು ಗೋಕರ್ಣ ಸುತ್ತಲಿನ ಗ್ರಾಮಸ್ಥರಿಗೆ ಶುಕ್ರವಾರ ವಿತರಿಸಿ ಅವರು ಆಶೀರ್ವಚನ ನೀಡಿದರು.

ಇಂದಿನ ನೂರು ಗೋವುಗಳ ವಿತರಣೆ ಕಾರ್ಯಕ್ರಮ ಸಾವಿರ ಗೋದಾನ ಸಮಾರಂಭದ ಪೂರ್ವಭಾವಿಯಾಗಿದೆ. ಒಂದು ತಿಂಗಳಿನಲ್ಲಿ ಸಾವಿರ ಗೋವು ಗಳನ್ನು ಸುತ್ತಮುತ್ತಲಿನ ಜನರಿಗೆ ನೀಡಲಾಗುವುದು. ಗೋವುಗಳನ್ನು ಸಾಕುವ ಆಸಕ್ತರಿದ್ದಲ್ಲಿ ಒಂದು ವರ್ಷದಲ್ಲಿ ೧೦ ಸಾವಿರ ಗೋವುಗಳನ್ನು ವಿತರಿಸುವ ಹಂಬಲ ಕೂಡ ಇದೆ ಎಂದರು.

ಗೋವುಗಳಿಂದಾಗಿ ಗೋಕರ್ಣ ಇನ್ನೂ ಸಮೃದ್ಧವಾಗಬೇಕು, ಆ ಮೂಲಕ ಸಾಮಾಜಿಕ, ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕೆಂಬುದು ತಮ್ಮ ಆಶಯ ಎಂದರು.
ನಾವು ಗೋವುಗಳನ್ನು ಸಾಕುತ್ತೇವೆ ಎಂಬುದು ಸುಳ್ಳು. ಗೋವುಗಳು ನಮ್ಮನ್ನು ಸಾಕುತ್ತವೆ ಎಂಬುದು ಸತ್ಯ. ಗೋವು ನೀಡುವ ಮೂತ್ರ, ಗೋಮಯ ಸಂಗ್ರಹ ದಿಂದ ಗೋವು ಉದ್ಯಮ ಬೆಳೆದು ಬಡವರು ಹಾಗೂ ರೈತರಿಗೆ ಉದ್ಯೋಗಾವ ಕಾಶವಾಗಲಿ ಎಂದು ಶ್ರೀಗಳು ಹಾರೈಸಿದರು.

ದೇವಾಲಯವನ್ನು ಸರಕಾರ ಶ್ರೀ ಮಠಕ್ಕೆ ಹಸ್ತಾಂತರ ಮಾಡುವ ಪೂರ್ವ ದಿಂದಲೂ ಗೋಕರ್ಣದ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ಆಗಿರಲಿಲ್ಲ. ನಮಗೆ ಹಸ್ತಾಂತರಿಸಿದ ಮೇಲೂ ದೇವಾಲಯದಿಂದ ಸಮಾಜದ ಕಾರ್ಯಗಳು ನಡೆ ದಿರಲಿಲ್ಲ. ವಿಜಯ ದಶಮಿಯ ಸುಮುಹೂರ್ತದಲ್ಲಿ ಈ ಕಾರ್ಯ ಆರಂಭ ವಾಗಿದೆ. ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗಾಗಿ ‘ಅಮೃತಾನ್ನ ಭೋಜನ’ ಆರಂಭಿಸಲಾಗಿದೆ ಎಂದು ಶ್ರೀಗಳು ನುಡಿದರು.

ರಾಜ್ಯ ಇಂಧನ ಸಚಿವ ಈಶ್ವರಪ್ಪ ಮಾತನಾಡಿ, ಶ್ರೀಗಳು ದೇವಾಲಯದಿಂದ ಉತ್ತಮ ಕಾರ್ಯವನ್ನು ನಡೆಸುತ್ತಿದ್ದಾರೆ. ಇಂದಿನ ಸಮಾಜದಲ್ಲಿ ಜಾತಿಗೆ ತುಂಬ ಪ್ರಾಮುಖ್ಯತೆ ನೀಡಲಾಗುತ್ತಿದೆ. ಜಾತಿ ವ್ಯವಸ್ಥೆಯಿಂದ ಸಮಾಜ ಸ್ವಾಸ್ಥ್ಯ ಕಳೆದುಕೊಳ್ಳುತ್ತಿದೆ. ಆದರೆ ರಾಘವೇಶ್ವರ ಭಾರತಿ ಶ್ರೀಗಳು ಜಾತಿ ವ್ಯವಸ್ಥೆ ಮೀರಿ ಎಲ್ಲರಿಗೂ ಗೋವು ಸಂಪತ್ತನ್ನು ವಿತರಿಸುವ ಮೂಲಕ ಎಲ್ಲರನ್ನು ಜಾತ್ಯತೀತ ವಾಗಿ ಕಂಡಿದ್ದಾರೆ. ಈ ಜವಾಬ್ದಾರಿ ಅರಿತು ಸರಕಾರ ಶ್ರೀಗಳಿಗೆ ದೇವಾಲಯ ವನ್ನು ಹಸ್ತಾಂತರ ಮಾಡಿದೆ. ಅದಕ್ಕೆ ಪಕ್ಷ ಭೇದ ಮರೆತು ನಾವೆಲ್ಲ ಬೆಂಬಲಿಸುತ್ತೇವೆ ಎಂದರು. ಅಭಿವೃದ್ಧಿ ಕಾರ್ಯದಲ್ಲಿ ಎಂಥ ಅಡ್ಡಿ ಆತಂಕ ಬಂದರೂ ಯಾರೂ ವಿಚಲಿತರಾಗ ಬಾರದು. ಶ್ರೀಗಳ ಹೆಜ್ಜೆ ದಿಟ್ಟ ಹಾಗೂ ಆದರಣೀಯವಾಗಿದೆ. ಈಗ ವಿರೋಧ ವ್ಯಕ್ತಪಡಿಸುತ್ತಿರುವ ಜನರಿಗೂ ಮುಂದೆ ಇದರ ಪೂರ್ಣ ಅರಿವು ಆಗಲಿದೆ ಎಂದು ಅವರು ಹೇಳಿದರು.

ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಶ್ರೀಗಳಿಗೆ ಸರ ಕಾರ ದೇವಸ್ಥಾನ ಹಸ್ತಾಂತರಿಸಿದ ದಿನದಿಂದ ಈವರೆಗೆ ಕೆಲ ಕಿಡಿಗೇಡಿಗಳು ಹಾಗೂ ಕೆಲ ಮಾಧ್ಯಮಗಳಿಂದ ತೊಂದರೆ ಉಂಟಾಗಿರಬಹುದು. ಆದರೆ ಶ್ರೀಗಳ ಜನಹಿತ ಯೋಜನೆಗಳು ನೆರವೇರುವುದು ಶತಸಿದ್ಧ ಎಂದು ಹೇಳಿದರು.

ವಿಧಾನ ಪರಿಷತ್ ಸಭಾಪತಿ ವೀರಣ್ಣ ಮತ್ತಿಗಟ್ಟಿ, ಶಾಸಕರಾದ ದಿನಕರ ಶೆಟ್ಟಿ, ಸುನೀಲ ಹೆಗಡೆ, ಗೋಕರ್ಣ ಗ್ರಾಪಂ ಉಪಾಧ್ಯಕ್ಷೆ ಭಾರತಿ ದೇವತೆ ಮಾತನಾಡಿದರು.

ಆರ್. ಎಸ್. ಭಾಗ್ವತ, ವಿನೋದ ಪ್ರಭು, ಉಪಾವಂತ ಮಂಡಳದ ಅಧ್ಯಕ್ಷ ಗಣೇಶ ಹಿರೇಗಂಗೆ, ಕಾರ್ಯದರ್ಶಿ ಬಾಲಕೃಷ್ಣ ಜಂಬೆ ಇನ್ನಿತರರು ವೇದಿಕೆಯ ಲ್ಲಿದ್ದರು.

Friday, October 10, 2008

Gou vishwa - e-paper

!!Hare Rama!!

Dear All,
Please find the links for the September issues of Kannada and English e-paper "gO vishva". Request you all to read the e-paper and send us your comments and suggestions. We are also in need of articles for the e-paper. If anyone interested request to contact on following mail Id.

Reply to: Editor gO vishva < govishva@gmail.com >

Kannda Paper 'Gou Vishwa' :
http://www.vishwagou.org/images/go-vishva-knd-12.pdf

English Paper 'Cow Universe' :
http://www.vishwagou.org/images/CowUniverse_Sep.pdf

And if you are interested for all the issues, both Kannada & English.
March ahead : http://www.vishwagou.org/e-paper.htm

Kamadugha is planing to buy 100 cows of Deoni bread


Our Kamadugha project is planing to buy 100 Deoni cows from NDRI Audigodi which is going to be auctioning within this month.Its our prime intension that these Gou mathas should not go to slaghter house at any coast.The estimated coast will be around Rs 2.5 lakhs.You can also contribute your money to kamadughas account number : 16119 ,Karnataka bank,Srinagar,Bangalore.
Once you donate please send an email to gou@srimath.org.

Tuesday, October 7, 2008

Mahatma's dream: Realizing under Kamadugha..!
Gou Matha is considered as Kamadhenu and moving temple by people of India. It is life companion of farmers. That's why they worship Cow also during festival season of Navarathri and Deepavali. Mahatma Gandhi, father of the nation also propagated the protection of cows. But slaughtering of cows continued in India even after 60 years of Independence. Shree Raghaveshwara Bharathi Swamiji rightly said that the Movement for Cow Protection 'Kamadugha' is Second war of Independence.

Entire World praises him today for his teachings of non-violence and Satyagraha. United Nations Organization declared his birthday as International Day of Non-violence. About 150 nations including Great Briton in the world brought commemorative stamps on him. Nobel Committee which gives prestigious Nobel Awards expressed its deep regrets for its failure in giving him its prestigious Nobel Award. He is Mohandas Karam Chand Gandhi, whom the entire world knows as 'Mahatma Gandhi.


He is Father of the Nation to the people of India. He dreamt of strong self relevant Villages in India after gaining independence. He thought that Cow is the main source of Indian Agriculture and it should be protected from slaughter and he propagated the ban on Cow slaughter.


Mahatma Gandhi said 'She (cow) speaks to us through her eyes 'you are not appointed over us to kill us or to ill treat us but to be our friend and guardian.'


Entire world remembers today Mahatma during his birthday and forgets what he told. That is why more than one lakh Farmers in India committed suicide and still committing suicides apart from thousands and thousands of cows are butchered in Indian slaughter houses.


We call Cow or Gou as Kamadhenu- gratifier of wishes. What have we given her back?


Cow in India is accorded a special status as she enriches both material and spiritual existence of humanity. She is a loving mother who feeds us with her nectar like milk, a life companion to farmers, a healer and a moving temple worthy of worship and veneration. A look, a touch, her mere presence purifies our body, mind and soul. Yet what have we given her back?


Only disgrace, destruction and death.


Even after the historic judgment of the seven judge constitutional bench of Supreme Court of India headed by Chief R.C. Lohoti, upholding the ban on cow slaughter (on 26 October 2005), butchering of cows, calves and bullocks is continuing in the whole nation without any restrictions.


Why should we save the desi cattle?


In the course of evolution through ages, Indian cows have developed characteristics which are acclaimed all over the world.


Indian Cows are sturdy, disease resistant, and adaptable to different climates and countries. They are easy and economical to maintain. They have oily smooth skin, absorb energy from the sunrays through a solar pulse on their back, and hence yield high quality milk which has less cholesterol.


Panchgavya, made out of Desi Cow (milk, ghee, curds, urine and dung) has many medicinal properties used in Gavya Chikitsa to cure ailments like cancer, arthritis stomach disorders and skin diseases. Moreover only desi bullocks can be used in agriculture and transport. There is no need of mentioning about the best organic manure produced out of cow dung and cow urine and fuel in the form of gobar gas. In other words Cow is the nerve of rural economy of India.


That's why Mahatma Gandhi propagated to protect Cows.


But such a treasure house of wealth has reached the verge of extinction due to human greed, ignorance and neglect.


Pained at this condition of Cows, Shree Raghaveshwara Bharathi Swamiji of Shree Ramachandrapura Math Hosanagara launched project Kamadugha for conservation, and rejuvenation of Desi cattle which are drastically dwindling in numbers.


Under this noble project Kamdugha, Math has established several Amruthadhara Goushalas in various places of India including Karnataka, Kerala and Maharastra. It searched and located about 27 verities of Indian Breeds in Karnataka, Maharastra, Kerala, Tamilnadu, Andhra Pradesh and North India and arranged to protect and conserve these breeds in these Goushalas.


Apart from establishing Amritadhara Goushalas, Matha has started Gavya Hospitals in various places, launched Gou Yathras to spread the truth far and wide and to awaken people on the noble cause of Cow Protection. It has organized Vishwa Gou Sammelana, Gou Sandhyas and Koti Neerajana, Deepa Gopura programmes to create awareness on cow protection in the society.


Ramachandrapura Matha also supported several attempts of value additions to Cow Urine and Cow Dung. Project Kamadugha also subscribes to the ancient truth that milk production is not the primary goal of cattle rearing. The economic viability of cattle rearing is due to the full and proper utilization of cow urine and dung. Hence it supported extensive research works on application of cow urine and cow dung. As result of such research works many medicines, tablets, shampoo, tooth powder, bath soap, ointment, dhoopa, pesticides and cosmetics have been produced and gaining popularity among people due to its effectiveness and cheap rates. Latest addition to such attempt is production of floor cleaner by making use of cow urine.


Inspired by such activities of Swamiji and his affection towards cows’ two boys Anup Krishna Bhat Nethrakere and Madhu Bhat Purlupady created a small video on Swamiji with Cows. They imagined cow as Devi 'Nandini' and set the devotional song to the video where they clubbed several pictures of Swamiji and Indian breeds of cows being protected under Kamadugha Project.


View it here, enjoy and please generously donate to Kamadugha Project, so that Cows will be protected and in the process our farmers will be saved from wrath of globalization.

-Nethrakere Udaya Shankara


Saturday, October 4, 2008

ತದಡಿ ಜನಸಂಪರ್ಕ ಸಭೆಯಲ್ಲಿ ಜನಸಮೂಹ.


ತದಡಿ ಜನಸಂಪರ್ಕ ಸಭೆಯಲ್ಲಿ ಜನಸಮೂಹ.

ಒಬ್ಬೊಬ್ಬರು ಒಂದೊಂದು ಜವಾಬ್ದಾರಿ ಹೊರಬೇಕು


ಗೋಕರ್ಣ, ಅ.೧ - ಕ್ಷೇತ್ರದ ಉನ್ನತೀಕರಣಕ್ಕೆ ಒಂದೊಂದು ಸಮಾಜದವರು ಒಂದೊಂದು ಜವಾಬ್ದಾರಿಯನ್ನು ಹೊರಬೇಕು ಎಂದು ರಾಘವೇಶ್ವರ ಶ್ರೀಗಳು ಹೇಳಿದರು.

ನವರಾತ್ರಿ ಎರಡನೇ ದಿನವಾದ ಇಂದು ಅಂಬಿಗ, ಹರಿಕಂತ್ರ, ಗಾಬಿಗ ಮತ್ತು ಖಾರ್ವಿ ಸಮಾಜ ಬಾಂಧವರು ಒಟ್ಟಾಗಿ ಆತ್ಮಲಿಂಗಾರ್ಚನೆ ಹಾಗೂ ನಾಗಾಭರಣ ಪೂಜೆ ನೆರವೇರಿಸಿದರು.

ಆ ಸಂದರ್ಭದಲ್ಲಿ ಅನುಗ್ರಹ ಸಂದೇಶವನ್ನಿತ್ತ ಶ್ರೀಗಳು ನೆರೆದವರೆಲ್ಲರೂ ಕಡಲಿನ ಮಕ್ಕಳು. ದೇವರಿಗೂ ಗುರುಗಳಿಗೂ ಯಾವುದೇ ವ್ಯತ್ಯಾಸವಿಲ್ಲ. ಈ ಭಾವನೆ ಅಂತೆಯೇ ಮುಂದುವರೆಯಲಿ ಎಂದು ಹಾರೈಸಿದರು.

ನಾಲ್ಕೂ ಸಮಾಜದ ಸುಮಾರು ೫೦೦ ಮಂದಿ ಭಾಗವಹಿಸಿದ್ದರು. ಮುಖಂಡರಾದ ಸದಾನಂದ ಹರಿಕಂತ್ರ, ಸುಬ್ರಾಯ ಹರಿಕಂತ್ರ, ಡಿ.ಎಸ್. ಜೋಡಣಕರ್, ಲಕ್ಷ್ಮಣ ಅಂಬಿಗ, ವಸಂತ ಖಾರ್ವಿ ಮೊದಲಾದವರು ಮನದಾಳದ ಮಾತುಗಳನ್ನು ಬಿಚ್ಚಿಟ್ಟರು.
ಕಡತೋಕ ಶಂಭು ಭಟ್ಟರು ಸಭೆಯನ್ನು ನಿರ್ವಹಿಸಿದರು.

ಮಗು ಮನೆಗೆ ಬರುವುದಕ್ಕೆ ಆಕ್ಷೇಪ ಸಲ್ಲ

ಗೋಕರ್ಣ, ಅ.೧ - ಮಗುವಾದ ಶ್ರೀರಾಮಚಂದ್ರಾಪುರಮಠ ತಾಯಿಯಾದ ಗೊಕರ್ಣಕ್ಕೆ ಮರಳುತ್ತಿರುವುದು ಆಕ್ಷೇಪಿಸಬಹುದಾದ ಸಂಗತಿಯೇ ಅಲ್ಲ ಎಂದು ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಹೇಳಿದರು.

ಹಿರೇಗುತ್ತಿಯ ಗ್ರಾಮ ಸಂಕರ್ಪ ಸಭೆಯಲ್ಲಿ ಮಾತನಾಡುತ್ತಿದ್ದ ಶ್ರೀಗಳು ಮಗು ತನಗೆ ಸಂಬಂಧಪಡದ ಮನೆಗೆ ಹೋದರೆ ಆಕ್ಷೇಪಣೆ ಎತ್ತಬಹುದು. ಇಂದು ಹಾಗಾಗಿಲ್ಲ. ಅಪರಿಹಾರ್ಯ ಕಾರಣಗಳಿಂದ ಕೆಲವು ಕಾಲ ಶ್ರೀಮಠದ ಕೇಂದ್ರ ಹೊಸನಗರವಾಗಿತ್ತು. ಆ ಸಂದರ್ಭದಲ್ಲಿ ಕ್ಷೇತ್ರದ ಆಡಳಿತ ನಿರ್ವಹಣೆಯಲ್ಲಿ ನ್ಯೂನತೆ ಉಂಟಾಗಿದ್ದು ನಿಜ.

ಇನ್ನು ಹಾಗಾಗುವುದಿಲ್ಲ. ಕ್ಷೇತ್ರ ದುರವಸ್ಥೆಯಿಂದ ಮೇಲೆ ಬರುತ್ತಿದೆ. ಕ್ಷೇತ್ರ ಅಭಿವೃದ್ಧಿಯಾಗಬೇಕು ಮತ್ತು ಸುತ್ತಮುತ್ತಲ ಪ್ರದೇಶಗಳೂ ಅದರ ಫಲವನ್ನು ಹೊಂದಬೇಕು ಎಂದು ಹೇಳಿದರು. ಉದಾಹರಣೆಯೆಂಬತೆ ಶ್ರೀಗಳು ಪೀಠಾಧಿಪತಿಗಳಾಗುವ ಮೊದಲು ಹೊಸನಗರ ಮಠದಲ್ಲಿದ್ದ ದುಸ್ಥಿತಿ ಮತ್ತು ಅಪರಿಚಿತತೆ ಹಾಗೂ ಇಂದಿರುವ ಖ್ಯಾತಿಯನ್ನು ಉಲ್ಲೇಖಿಸಿದರು.

ಇದಕ್ಕೂ ಮುನ್ನ ಪೂರ್ಣಕುಂಭ, ವಾದ್ಯಗಳೊಂದಿಗೆ ಶ್ರೀಗಳನ್ನು ಬರಮಾಡಿಕೊಳ್ಳಲಾಯಿತು. ರಾಮು ಕೆಂಚನ್, ಮಾರುತಿ ಹಮ್ಮಣ್ಣ ನಾಯಕ, ಉದಯ ನಾಯಕ, ಅತುಲ ನಾಯಕ, ಆರ್.ವಿ. ನಾಯಕ, ಎಚ್.ಎಸ್. ನಾಯಕ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಅವರೆಲ್ಲರೂ ದೇವಾಲಯದ ನವೀಕರಣ ಮೊದಲಾದ ಕಾರ್ಯಗಳಿಗೆ ತಮ್ಮ ಸಹಕಾರದ ವಾಗ್ದಾನವನ್ನು ಮಾಡಿದರು.
ಮೋಹನ ಭಾಸ್ಕರ ಹೆಗಡೆಯವರು ಕಾರ್ಯಕ್ರಮವನ್ನು ನಿರೂಪಿಸಿದರು.

ಗೋಕರ್ಣದ ಅಭಿವೃದ್ಧಿ ಮಂತ್ರ ಪಠಿಸಿದ ರಾಘವೇಶ್ವರ ಶ್ರೀ


ಗೋಕರ್ಣ, ಸೆ.೩೦ - ಇಡೀ ಗೋಕರ್ಣ ಕ್ಷೇತ್ರದ ಪುನರುತ್ಥಾನವೇ ಶ್ರೀರಾಮಚಂದ್ರಾಪುರಮಠದ ಮುಂದಿರುವ ಗುರಿ ಎಂದು ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಹೇಳಿದರು.

ಇಲ್ಲಿನ ಗಂಗಾವಳಿಯ ಶ್ರೀ ಗಂಗಾಮಾತಾ ದೇವಾಲಯದಲ್ಲಿ ಆಯೋಜಿಸಲಾಗಿದ್ದ ಗ್ರಾಮ ಸಂಪರ್ಕ ಸಭೆಯಲ್ಲಿ ಮಾತನಾಡುತ್ತಾ ಶ್ರೀಗಳು ನಾಡಿನ ಇನ್ನಿತರ ಕ್ಷೇತ್ರಗಳಿಗೆ ಹೋಲಿಸಿದಾಗ ಗೋಕರ್ಣ ತೀರಾ ಹಿಂದುಳಿದಿದೆ ಎಂದರು.
ಆದ್ದರಿಂದ ಕ್ಷೇತ್ರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ಸರ್ವತೋಮುಖ ಅಭಿವೃದ್ಧಿಗೆ ಯೋಗ್ಯ ಫಲಾನುಭವಿಗಳನ್ನು ಗುರುತಿಸಿ ೧೦೦೦ ಹಸುಗಳನ್ನು ಶ್ರೀಮಠದ ವತಿಯಿಂದ ನೀಡಲಾಗುವುದು ಮತ್ತು ಅದರ ಗೋಮೂತ್ರ, ಗೋಮಯಗಳನ್ನು ಖರೀದಿಸಿ ಗವ್ಯೋದ್ಯಮದಲ್ಲಿ ಬಳಸಿಕೊಳ್ಳಲಾಗುವುದು ಎಂದು ಹೇಳಿದರು.

ಗೋಕರ್ಣವನ್ನು ಎಲ್ಲರೂ ತಮ್ಮದೆಂಬಂತೆ ಭಾವಿಸಲು ಕರೆ ನೀಡಿದರಲ್ಲದೇ ಶೀಘ್ರದಲ್ಲಿಯೇ ದೇವಾಲಯದಲ್ಲಿ ಅನ್ನದಾನ ಸೇವೆಯನ್ನು ಪ್ರಾರಂಭಿಸಲಾಗುವುದು ಎಂದು ಘೋಷಿಸಿದರು.

ಸಭೆಯಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಗೋಕರ್ಣ ದೇವಾಲಯ ಸಮಸ್ತರ ಸ್ವತ್ತು : ರಾಘವೇಶ್ವರ ಶ್ರೀ

ಗೋಕರ್ಣ, ಸೆ.೩೦ - ಸರ್ಕಾರ ಶ್ರೀರಾಮಚಂದ್ರಾಪುರಮಠಕ್ಕೆ ಹಸ್ತಾಂತರಿಸಿದ ದೇವಾಲಯ ಸಮಸ್ತರ ಸ್ವತ್ತು. ಆದ್ದರಿಂದ ಇದನ್ನು ಸಮಸ್ತರಿಗೂ ಸಲ್ಲುವಂತೆ ಸಮರ್ಪಿಸುತ್ತಿದ್ದೇವೆ ಎಂದು ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಹೇಳಿದರು.

ಹಾಲಕ್ಕಿ ಮತ್ತು ಪಡಸಾಲಿ ಸಮಾಜದ ಸಮಸ್ತರೂ ಆತ್ಮಲಿಂಗಕ್ಕೆ ವಿಶೇಷ ಪೂಜಾಸೇವೆಯನ್ನು ನೆರವೇರಿಸಿದ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ವಿಶೇಷ ಸಭೆಯಲ್ಲಿ ಶ್ರೀ ಸ್ವಾಮೀಜಿ ಮಾತನಾಡುತ್ತಿದ್ದರು.

ಗೋಕರ್ಣದ ಇತಿಹಾಸದಲ್ಲಿಯೇ ಇಂತಹದ್ದೊಂದು ಸಂಗತಿ ಹೊಸತು. ಗೋಕರ್ಣದ ಸುತ್ತಮುತ್ತಲಿನ ೩೦ಕ್ಕೂ ಹೆಚ್ಚು ಸಮುದಾಯಗಳವರು ದೇವಾಲಯಕ್ಕೆ ನಡೆದುಕೊಳ್ಳುತ್ತಿದ್ದಾರೆ. ಅವರಲ್ಲಿ ಸುಮಾರು ೩೫ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿರುವ ಹಾಲಕ್ಕಿ ಮತ್ತು ಪಡಸಾಲಿ ಸಮಾಜದವರು ಸೇವೆ ಕೈಗೊಂಡದ್ದು ತಮಗೆ ಬಹಳ ಸಂತೋಷವನ್ನು ಉಂಟುಮಾಡಿದೆ ಎಂದರು.

ಹಾಲಕ್ಕಿ ಸಮಾಜದ ನಾಗಪ್ಪ ಗೌಡ ಮತ್ತು ಪಡಸಾಲಿ ಸಮಾಜದ ಪದ್ಮನಾಭ ತಮ್ಮ ತಮ್ಮ ಸಮುದಾಯಗಳ ಸ್ಥಿತಿಗತಿಗಳನ್ನು ಶ್ರೀ ಸ್ವಾಮೀಜಿಯವರಲ್ಲಿ ಅರಿಕೆ ಮಾಡಿಕೊಂಡರು.

ಅಭಿವೃದ್ಧಿಯ ಫಲ ಕೊಟ್ಟಕೊನೆಯವನಿಗೂ ಸಿಗುವಂತಾದರೆ ಸಾರ್ಥಕ


ಗೋಕರ್ಣ, ಅ.೨ - ಅಭಿವೃದ್ಧಿ ಎಂದರೆ ಸಮಾಜದ ಎಲ್ಲ ಸ್ತರಗಳ ಸರ್ವತೋಮುಖ ಉನ್ನತಿ. ಅದರ ಫಲ ಸಮಾಜದ ಕೊಟ್ಟಕೊನೆಯವನಿಗೂ ಸಿಗುವಂತಾದರೆ ಸಾರ್ಥಕ ಎಂದು ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಹೇಳಿದರು.

ಬಿಜ್ಜೂರಿನ ಗ್ರಾಮ ಸಂಪರ್ಕ ಸಭೆಯಲ್ಲಿ ಶ್ರೀಗಳು ಸಾಮಾಜಿಕ ಕಾರ್ಯಗಳ ಫಲ ಕೆಲವೇ ಕೆಲವು ಮಂದಿಗೆ ಸೀಮಿತವಾಗದೇ ಎಲ್ಲರಿಗೂ ಹಂಚಿಕೆಯಾಗುವಂತೆ ಆಗಬೇಕು ಎಂಬುದು ಗಾಂಧೀಜಿಯವರ ಕನಸಾಗಿತ್ತು ಎಂದರು.

ಇಲ್ಲಿನ ಹಾಲಕ್ಕಿ ಸಮುದಾಯ ಗೋ ಸದೃಶವಾದದ್ದು. ವಂಚನೆ, ಕಪಟ, ಮೋಸ ಯಾವೊಂದನ್ನೂ ಅರಿಯದ ಮುಗ್ಧ ಜನ ಹಾಲಕ್ಕಿಗಳು. ಆರ್ಥಿಕವಾಗಿಯೂ ತೀರಾ ಹಿಂದುಳಿದಿದ್ದಾರೆ. ಇದರ ಬಗೆಗೆ ಅವರಲ್ಲಿ ಕೀಳರಿಮೆ ಉಂಟಾಗದಂತೆ ಎಚ್ಚರವಹಿಸಿ ಸಮಾಜದ ಮುಖ್ಯವಾಹಿನಿಗೆ ಸೇರಿಸುವ ಕೆಲಸ ಆಗಬೇಕಿದೆ. ಅದಕ್ಕಾಗಿ, ಶ್ರೀ ಮಹಾಬಲೇಶ್ವರ ದೇವಾಲಯದ ವತಿಯಿಂದ ಅವರಿಗೆ ೧೦೦೦ ಹಸುಗಳನ್ನು ದಾನವಾಗಿ ಕೊಡಮಾಡಲಾಗುವುದು ಎಂದು ಘೋಷಿಸಿದರು ಮತ್ತು ಫಲಾನುಭವಿಗಳನ್ನು ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದರು.

ಮಥನವಾಗದೇ ಬೆಣ್ಣೆ ಬರುವುದಿಲ್ಲ. ದೇವಾಲಯ ಹಸ್ತಾಂತರವಾದಾಗ ಪರ-ವಿರೋಧ ನಿಲುವುಗಳ ವ್ಯಕ್ತವಾದವು. ಅದರಿಂದ ಇಂದು ವಾಸ್ತವದ ಅಮೃತ ಸದೃಶ ಬೆಣ್ಣೆ ಮೂಡುತ್ತಿದೆ. ಇನ್ನೈದು ವರ್ಷಗಳಲ್ಲಿ ಗೋಕರ್ಣದ ಚಹರೆಯೇ ಬದಲಾಗಲಿದೆ ಎಂದು ಹೇಳಿದರು.

ಹೊಸಾಡ ಗೋಬ್ಯಾಂಕಿನ ಅಧ್ಯಕ್ಷ ಮುರಳೀಧರ ಪ್ರಭು ಗೋ ಸಾಕಾಣಿಕೆಯ ಮಹತ್ವದ ಕುರಿತಾಗಿ ನಾಲ್ಕು ಮಾತುಗಳನ್ನಾಡಿದರು. ತಾಳಸು ಗೌಡ, ಗೋವಿಂದ ಮ. ಗೌಡ, ಮಾಸ್ತಿ ಅಗೇರ, ಜಯ ಗೌಡ, ಗಂಗೆ ಬೋಳು ಗೌಡ ಮೊದಲಾ ಪುರ ಪ್ರಮುಖರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಗೋವಿಂದ ಮಂಕಾಳ ಗೌಡ ಸ್ವಾಗತಿಸಿದ ಸಭೆಯನ್ನು ಮಂಜುನಾಥ ಜಿ. ಭಟ್ಟರು ನಿರ್ವಹಿಸಿದರು.

ದೇವಾಲಯದ ಹಸ್ತಾಂತರ ಹುಟ್ಟುಹಾಕಿದ ಶಂಕೆಗಳಿಗೆ ಕೃತಿಯೇ ಉತ್ತರ

ಗೋಕರ್ಣ, ಅ.೨ - ದೇವಾಲಯದ ಹಸ್ತಾಂತರವಾದಾಗ ಮುಕ್ತ ಪೂಜೆಯ ಮುಂದುವರಿಕೆ ಸೇರಿದಂತೆ ಹಲವಾರು ವಿಷಯಗಳಲ್ಲಿ ಶಂಕಿಸಲಾಗಿತ್ತು. ಪ್ರಸ್ತುತ, ಎಲ್ಲ ಸಮಾಜದವರೂ ಮುಕ್ತವಾಗಿ ನೆರವೇರಿಸುತ್ತಿರುವ ಸೇವೆಯೇ ಎಲ್ಲ ಶಂಕೆಗಳಿಗೆ ತೆರೆ ಎಳೆಯಲು ಮುನ್ನುಡಿಯಾಗಲಿದೆ ಎಂದು ರಾಘವೇಶ್ವರ ಶ್ರೀಗಳು ಅಭಿಪ್ರಾಯಪಟ್ಟರು.

ಗೋಕರ್ಣದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಸುತ್ತಮುತ್ತಿಲಿನ ಪ್ರದೇಶದ ಎಲ್ಲ ಸಮಾಜದವರೂ ಆತ್ಮಲಿಂಗ ಪೂಜಾಸೇವೆ ಕೈಗೊಳ್ಳಲು ಮುಂದೆ ಬಂದಿದ್ದಾರೆ. ಬೆಳಗ್ಗೆ ಭಂಡಾರಿ, ದೇಶಭಂಡಾರಿ, ದೇವಡಿಗ, ಗಾರುಡಿಗ ಹಾಗೂ ಗುಡಿಗಾರ ಸಮಾಜದವರ ಸೇವೆಯ ನಂತರದ ಅನುಗ್ರಹ ಸಂದೇಶ ಸಭೆಯಲ್ಲಿ ಶ್ರೀಗಳು ಮಾತನಾಡುತ್ತಿದ್ದರು.


ಭರತನಂತೆ ಸೇವಾಕಾರ್ಯಗಳಲ್ಲಿ ತೊಡಗಿಕೊಳ್ಳಲು ಶ್ರೀಗಳು ಕರೆ ನೀಡಿದರು. ತಾಯಿ ಎಂದೆಂದಿಗೂ ತಾರತಮ್ಯ ಮಾಡುವುದಿಲ್ಲ ಎಂದೂ ಹೇಳಿದರು. ಸದ್ಯ ಸುತ್ತಮುತ್ತಲಿನ ಅರ್ಹ ಫಲಾನುಭವಿಗಳಿಗೆ ಶ್ರೀಮಠವು ಕೊಡಮಾಡಲಿರುವ ೧೦೦೦ ಗೋವುಗಳ ದಾನದ ಬಗೆಗೆ ಪ್ರಸ್ತಾಪಿಸಿದರು.
ಪಾಲ್ಗೊಂಡಿದ್ದ ಶಾಸಕ ದಿನಕರ ಶೆಟ್ಟಿಯವರು ಶ್ರೀಗುರುಪೀಠ ಎಂದೂ, ಯಾರಲ್ಲಿಯೂ ತಾರತಮ್ಯವನ್ನು ಮಾಡಿದ್ದಿಲ್ಲ. ದೇಗುಲ ಹಸ್ತಾಂತರ ಸಂದರ್ಭದಿಂದಲೂ ಉಪಸ್ಥಿತರಿದ್ದ ತಾವು ದೇವಾಲಯದ ಅಭಿವೃದ್ಧಿಯನ್ನು ನಿರೀಕ್ಷಿಸಿದ್ದೇವೆ ಎಂದು ಹೇಳಿದರು.


ಕೃಷ್ಣ ಭಂಡಾರಿ, ಸುಬ್ರಾಯ ಭಂಡಾರಿ, ವಿ.ಎಂ. ದೇಶಭಂಡಾರಿ, ನಾಗೇಶ ದೇವಡಿಗ, ಆರ್.ವಿ. ಗಾವಡಿ, ದಯಾನಂದ ಶೇಟ್ ಮೊದಲಾದ ಮುಖಂಡರು ಪಾಲ್ಗೊಂಡಿದ್ದರು. ಒಂದು ಸಾವಿರಕ್ಕೂ ಅಧಿಕ ಮಂದಿ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆ ಬಹಳ ಯಶಸ್ವಿಯಾಗಿ ಸಂಪನ್ನಗೊಂಡಿತು.