ಗೋಕರ್ಣ, ಸೆ.೩೦ - ಇಡೀ ಗೋಕರ್ಣ ಕ್ಷೇತ್ರದ ಪುನರುತ್ಥಾನವೇ ಶ್ರೀರಾಮಚಂದ್ರಾಪುರಮಠದ ಮುಂದಿರುವ ಗುರಿ ಎಂದು ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಹೇಳಿದರು.
ಇಲ್ಲಿನ ಗಂಗಾವಳಿಯ ಶ್ರೀ ಗಂಗಾಮಾತಾ ದೇವಾಲಯದಲ್ಲಿ ಆಯೋಜಿಸಲಾಗಿದ್ದ ಗ್ರಾಮ ಸಂಪರ್ಕ ಸಭೆಯಲ್ಲಿ ಮಾತನಾಡುತ್ತಾ ಶ್ರೀಗಳು ನಾಡಿನ ಇನ್ನಿತರ ಕ್ಷೇತ್ರಗಳಿಗೆ ಹೋಲಿಸಿದಾಗ ಗೋಕರ್ಣ ತೀರಾ ಹಿಂದುಳಿದಿದೆ ಎಂದರು.
ಆದ್ದರಿಂದ ಕ್ಷೇತ್ರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ಸರ್ವತೋಮುಖ ಅಭಿವೃದ್ಧಿಗೆ ಯೋಗ್ಯ ಫಲಾನುಭವಿಗಳನ್ನು ಗುರುತಿಸಿ ೧೦೦೦ ಹಸುಗಳನ್ನು ಶ್ರೀಮಠದ ವತಿಯಿಂದ ನೀಡಲಾಗುವುದು ಮತ್ತು ಅದರ ಗೋಮೂತ್ರ, ಗೋಮಯಗಳನ್ನು ಖರೀದಿಸಿ ಗವ್ಯೋದ್ಯಮದಲ್ಲಿ ಬಳಸಿಕೊಳ್ಳಲಾಗುವುದು ಎಂದು ಹೇಳಿದರು.
ಗೋಕರ್ಣವನ್ನು ಎಲ್ಲರೂ ತಮ್ಮದೆಂಬಂತೆ ಭಾವಿಸಲು ಕರೆ ನೀಡಿದರಲ್ಲದೇ ಶೀಘ್ರದಲ್ಲಿಯೇ ದೇವಾಲಯದಲ್ಲಿ ಅನ್ನದಾನ ಸೇವೆಯನ್ನು ಪ್ರಾರಂಭಿಸಲಾಗುವುದು ಎಂದು ಘೋಷಿಸಿದರು.
ಸಭೆಯಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.
No comments:
Post a Comment