Monday, September 15, 2008

ಸ್ವಚ್ಚ ಊಟ ಸ್ವಚ್ಚ ಪರಿಸರ ನಮ್ಮೆಲ್ಲರ ನೀತಿಯಾಗಲಿ




ಊಟದ ವ್ಯವಸ್ಥೆ ಯಿರುವ ಸಭೆ ಸಮಾರಂಭಗಳಲ್ಲಿ ಸಾರ್ವಜನಿಕರು ಊಟ ಮಾಡಿದಷ್ಟೇ ಅನ್ನ ಚರಂಡಿ ಪಾಲಾಗಿ ಹೋಗುತ್ತದೆ. ಜನರು ಅರ್ದಂಬರ್ದ ಊಟ ಮಾಡಿಯೋ ಅಥವಾ ಹೆಚ್ಚು ಅನ್ನ ಹಾಕಿಸಿಕೊಂಡು ತಟ್ಟೆಯಲ್ಲಿಯೇ ಉಳಿಸಿ ಚೆಲ್ಲಿಬಿಡುತ್ತಾರೆ. ಆದರೆ ಇಲ್ಲಿನ ಸಮಾರಂಭದಲ್ಲಿ ಹಾಗಲ್ಲ ಹೆಚ್ಚಿನ ಊಟವನ್ನು ಕೈ ತೊಳೆಯುವ ಜಾಗದಲ್ಲಿ ಪ್ರತ್ಯೇಕವಾಗಿಟ್ಟ ದೊಡ್ದ ಬಟ್ಟಲಿನಲ್ಲಿ ಹಾಕಿಟ್ಟು ನಂತರ ಅದನ್ನು ಸಮರ್ಪಕವಾಗಿ ವಿಲೆವಾರಿ ಮಾಡಲಾಗುತ್ತದೆ. ಹೀಗೆ ಮಾಡದಿದ್ದಲ್ಲಿ ಸಮಾರಂಭದ ಮಾರನೇ ದಿನ ಆ ಜಾಗ ಪರಿಸರ ಗಬ್ಬೆದ್ದು ಹೋಗುತ್ತದೆ. ಇಪ್ಪತ್ತು ಸಾವಿರ ಜನರು ಊಟಮಾಡುವ ಜಾಗವನ್ನು ಹೀಗೆ ಸಣ್ಣದೊಂದು ಉಪಾಯದ ಮೂಲಕ ಪರಿಸರದ ಶುಚಿತ್ವ ಕಾಪಾಡಬಲ್ಲದು. ಇದು ಶ್ರೀ ರಾಮಚಂದ್ರಾಪುರ ಮಠದ ಗೋಕರ್ಣದ ಸಮಾರಂಭದಲ್ಲಿ ಮಾಡಿದ ಸುಲಭೋಪಾಯ. ನಿರ್ವಾಹಕರ ಕ್ರಮ ಜನಮನ್ನಣೆ ಗಳಿಸಿತು.
ನುಡಿಚಿತ್ರ: ಪಿ . ಭಾರತೀಶ ಮೀಡಿಯಾ ಸೆಂಟರ್ ಬೆಂಗಳೂರು.
ನೀವೂ ಈ ಬ್ಲಾಗಿಗೆ ಬರೆಯಬಹುದು, ಅವಾಚ್ಯ ಶಬ್ಧವಿಲ್ಲದಿದ್ದರೆ ಎಲ್ಲವೂ ಪ್ರಕಟನಾಯೋಗ್ಯ......-ನಿರ್ವಾಹಕ media4cow

No comments: