Friday, September 26, 2008

ಇಷ್ಟಕ್ಕೂ ಅವರೇಕೆ ತಮ್ಮಲ್ಲಿರುವ ದಾಖಲೆಗಳನ್ನು ತೋರಿಸುತ್ತಿಲ್ಲ?!

ಪತ್ರೆಮನೆ ಅವರ ಬರಹಕ್ಕೆ ಇದು ಪ್ರತಿಕ್ರಿಯೆ
ಅಗಸ್ಟ೧೨ ,೨೦೦೮ರವರೆಗೂ ಗೋಕರ್ಣ ಅಂದರೆ ಅನುಪಯುಕ್ತ ವಸ್ತುವಾಗಿತ್ತು. ಅದೇ ಅ.೧೩ರಂದು ಕರ್ನಾಟಕ ಸರಕಾರ ಶ್ರೀರಾಮಚಂದ್ರಾಪುರ ಮಠಕ್ಕೆ ವಹಿಸಿಕೊಟ್ಟ ಮೇಲೆ ಗೋಕರ್ಣ ಈಗ ಎಲ್ಲರಿಗೂ ಬೇಕಾದ “ಕಲ್ಪಧೇನು”ವಾಗಿ ಬಿಟ್ಟಿದೆ!!.

ಎಲ್ಲ ಜಾತಿ ಜನಾಂಗ ಭಕ್ತಿ ಇಟ್ಟುಕೊಂಡಿರುವ,,ಪುರಾತನ ಐತಿಹಾಸಿಕ ಎನ್ನುವ ದೇವಸ್ಥಾನದ ಇಂದಿನ ಪರಿಸ್ಥಿತಿ ನೋಡಿದರೆ ಮನ ಮರುಗದೆ ಇರದು. ಅಭಿವೃದ್ಧಿ ಮಾಡಲು ದುಡ್ಡಿಲ್ಲವಾಗಿತ್ತ ಅಂದರೆ ಅದೂ ಇತ್ತು.ಆದರೆ ಮಾಡುವ ಮನಸ್ಸು ಮಾತ್ರ ಇಲ್ಲವಾಗಿತ್ತು. “ದುಡ್ಡಿನ” ಮದ ದಿಂದ ಬಂದ ದುಡ್ಡನ್ನು ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ೬ ತಲೆಮಾರಿನವರೆಗೂ ಕೂಡಿಟ್ಟರೆ ಅಭಿವ್ರದ್ಧಿಯಾದರೂ ಹೇಗೆ ಸಾಧ್ಯ?


ಅದು ಅಲ್ಲದೇ ಸರಕಾರದ ಅಧೀನ ಇದ್ದಿದ್ದರಿಂದ ಸರಕಾರದ ಅಭಿವೃದ್ಧಿ ಹೇಗೆ ಅಂಥ ಎಲ್ಲರಿಗೂ ಗೋತ್ತು.ಕೇವಲ ಸಾಮಾನ್ಯ ಜನರು ಮಾತ್ರವಲ್ಲದೆ, ಗಣ್ಯರು, ಮಠಾಧೀಶರೂ ಸಮಾಜದ ಎಲ್ಲರೂ ಗೋಕರ್ಣಕ್ಕೆ ಚಿತ್ತೈಸಿ, ಶ್ರೀ ಮಹಾಬಲನ ದರ್ಶನ ಪಡೆದವರೆ. ಆದರೂ ಇಷ್ಟು ವರ್ಷ ಗೋಕರ್ಣ ತನ್ನ ಪರಿಸರವನ್ನು ಕಲ್ಮಶ ಮಾಡಿಕೊಂಡಿದೆ. ಅಭಿವೃದ್ಧಿಯ ಗಂಧ ಗಾಳಿಯನ್ನೇ ಮರೆತು ಎಷ್ಟು ವರ್ಷವಾಯಿತೋ?.


ಹೀಗೆ ಇರುವಾಗ.....:ಹೀಗೆ ಅನಾಥವಾಗಿ ಬಿದ್ದಿದ್ದ ಗೋಕರ್ಣ ರಾತ್ರೋರಾತ್ರಿ ಇಡೀ ಜಗತ್ತಿಗೆ ಪ್ರಸಿದ್ಧಿಯಾಯಿತು. ಯಾವಾಗ ಅದು ಶ್ರೀರಾಮಚಂದ್ರಾಪುರ ಮಠದ ಆಸ್ತಿ ಎಂದು ಸರಕಾರ ಘೋಷಿಸಿ ಅದನ್ನು ಶ್ರೀಮಠಕ್ಕೆ ಹಸ್ತಾಂತರಿಸಿತೋ ಅಷ್ಟು ದಿನ ಮಲಗಿದ್ದ “ಹುಲಿ” ಗಳು ಮೈಕೊಡವಿ ಎಚ್ಚೆತ್ತುಕೊಂಡರು. ಸರಕಾರವೇನೋ ಸದ್ದು ಗದ್ದಲವಿಲ್ಲದೇ ಹಸ್ತಾಂತರಿಸಿತು ನಿಜ. ಆದರೆ ಗ್ರಾಮ ಪಂಚಾಯತ ಮಟ್ಟದಲ್ಲಿ ಠರಾವು ಮಾಡಿ ಅದನ್ನು ಸರಕಾರಕ್ಕೆ ಕಳುಹಿಸಲಾಗಿದೆ.ಅದೇನು ಕದ್ದು ಮುಚ್ಚಿ ಮಾಡಿದ್ದ? ಆಗ ಯಾರು ಯಾಕೆ ಧ್ವನಿ ಎತ್ತದೆ ಸುಮ್ಮನಿದ್ದಿದ್ದು?


ಆಮೇಲೆ ನಡೆದ ಘಟನೆ ಎಲ್ಲರಿಗೂ ಗೋತ್ತಿದೆ. ನಂತರ ಈ ಘಟನೆಗೆ ತಿರುವು ಬಂದಿದ್ದು ಅದೇ ಸಮುದಾಯಕ್ಕೆ ಸೇರಿದ ಮತ್ತೊಂದು ಮಠ ಸ್ವರ್ಣವಲ್ಲಿ ಮಠ ಇದನ್ನು ವಿರೋಧಿಸಿ ಸಭೆ ಕರೆದು ಸ್ಪಷ್ಟ ವಿರೋಧವನ್ನು ವ್ಯಕ್ತಪಡಿಸಿದ್ದು.(ಇದರ ಘಟನಾವಳಿಗೆ www.bimbapratibimba.blogspot.com , www.media4cow.blogspot.com ನೋಡಬಹುದು). ಪೂಜ್ಯ ಸ್ವರ್ಣವಲ್ಲಿ ಶ್ರೀಗಳ ಅನಿಸಿಕೆಯೇ ಅಸ್ಪಷ್ಟ. ‘ ಗೋಕರ್ಣವನ್ನು ಮಠಾಧೀಶರ ಸಮಿತಿಗೆ ಒಪ್ಪಿಸಬೇಕು. ಶೃಂಗೇರಿಯ ಶ್ರೀಗಳ ಮಾರ್ಗದರ್ಶನದಲ್ಲಿ ಸಲಹೆ ಪಡೆಯಬೇಕು. ನಂತರ ಆ ಸಮಿತಿ ಗೋಕರ್ಣದ ಉಸ್ತುವಾರಿಯನ್ನು ನೋಡಿಕೊಳ್ಳುತ್ತದೆ... ಹೀಗೆ ಅವರ ಮಾತು ಮುಂದುವರೆಯುತ್ತದೆ.


ಅಷ್ಟಕ್ಕೂ ಶೃಂಗೇರಿಯ ಸ್ವಾಮಿಗಳು ಹಿರಿಯರು ಹೇಳಿ ಒಂದೇ ಕಾರಣಕ್ಕೆ ಗೋಕರ್ಣಕ್ಕೆ ಸಂಭಂಧಿಸದ ಅವರ ಮಾರ್ಗದರ್ಶನ ಇವರಿಗೆ ಬೇಕ? ಅವರ ಮಾರ್ಗದರ್ಶನ ಇಲ್ಲದೇ ಕೆಲಸವಾಗದ? ರಾಮಚಂದ್ರಾಪುರ ಮಠಕ್ಕೆ ದೇವಸ್ಥಾನ ಹಸ್ತಾಂತg ವಾಗುವ ಮೊದಲು ನಿಜವಾಗಿಯೂ ಅಭಿವೃದ್ಧಿ ಮಾಡುವ ಮನಸ್ಸಿದ್ದರೆ ಈ ಕಾರ್ಯವನ್ನು ಆವಗಲೇ ಮಾಡಿ ತಾವೊಬ್ಬ “ಮಾದರಿ” ಸ್ವಾಮಿ ಎಂದು ತೋರಿಸಬಹುದಿತ್ತು. ಎಲ್ಲದೂ ಬೇರೆಯವರು ಮಾಡಲು ಹೋರಟ ಮೇಲೆ ಇತರರೂ ಯಾಕೆ ಮಾಡಲು ಹೋಗಬೇಕು?


ಎಲ್ಲ ಮಾಧ್ಯಮಗಳ ತೀವ್ರ ವಿರೋಧ, ಹಾಗೂ ಇತರ ಕಡೆಗಳಿಂದಲೂ ಟೀಕೆಗಳ ದಾಳಿ ರಾಮಚಂದ್ರಾಪುರ ಮಠದ ಮೇಲೆ ಆಗುತ್ತಿರುವಾಗ, ಅದಕ್ಕೆ ಬೆಂಬಲಿಸದೇ ಇರುವುದು ಗೋಕರ್ಣ ಅಭಿವೃದ್ಧಿಯನ್ನು ವಿರೋಧಿಸಿದಂತೆ ಅಲ್ಲವೆ?


ಅವರಲ್ಲಿ ಇಲ್ಲ ಎನ್ನುವವರ ಬಳಿ ಇದೆಯೆ ದಾಖಲೆ:
ಇಷ್ಟಕ್ಕೂ ಸ್ವರ್ಣವಲ್ಲಿ ಶ್ರೀಗಳು ರಾಮಚಂದ್ರಾಪುರ ಮಠ ಸಲ್ಲಿಸಿರುವ ಗೋಕರ್ಣ ತನ್ನದು ಎನ್ನುವ ದಾಖಲೆ ಗಟ್ಟಿಯಾಗಿಲ್ಲ, ಅದು ರಾಮಚಂದ್ರಾಪುರ ಮಠದ್ದು ಅಲ್ಲಎನ್ನುವ ಅವರು ಅದಕ್ಕೆ ಏನಾದರೂ ದಾಖಲೆಗಳಿದ್ದರೆ ಬಿಡುಗಡೆ ಮಾಡಬಹುದಿತ್ತಲ್ಲ. ಅಥವಾ ಹೇಳ ಬಹುದಿತ್ತಲ್ಲ.ಸ್ವರ್ಣವಲ್ಲಿಯವರು ಒಂದೇ ಅಲ್ಲ, ಅದನ್ನು ವಿರೋಧಿಸುವವರು ಮಠದ ದಾಖಲೆ ಕೇಳುವ ಬದಲು ತಮ್ಮಲ್ಲಿರುವ ದಾಖಲೆಗಳನ್ನು ಕೊಡಬಹುದಲ್ಲ. ಕೇವಲ ಮಠಕ್ಕೆ ಬರುವ ಮೊದಲು ಟ್ರಸ್ಟನ ಉಸ್ತುವಾರಿಯಲ್ಲಿತ್ತು ಹೇಳುವುದು ಮತ್ತು ಅಲ್ಲಿನ ಅರ್ಚಕರ ಒಡೆತನದಲ್ಲಿತ್ತು ಎನ್ನುವುದು ದಾಖಲೆಯೆ? ಅಷ್ಟಕ್ಕೂ ಅವರೂ ದಾಖಲೆ ಬಿಡುಗಡೆ ಮಾಡಿದ್ದರೆ ಜನರಲ್ಲಿ ಸಮಸ್ಯೆಯೇ ಇರುತ್ತಿರಲಿಲ್ಲ. ರಾಮಚಂದ್ರಾಪುರ ಮಠಕ್ಕೆ ಇನ್ನಷ್ಟು ಗಟ್ಟಿಯಾದ ದಾಖಲೆಗಳನ್ನು ಸಲ್ಲಿಸಲು ಅವಕಾಶ ಆಗುತ್ತಿತ್ತೇನೋ??!!!
“ಇಬ್ಬರ ಜಗಳ ಮೂರನೆಯವರಿಗೆ ಲಾಭ” ಎನ್ನುವ ಗಾದೆ ಎಲ್ಲರಿಗೂ ಚಿರಪರಿಚಿತ. ನಮ್ಮ ಸಂಸ್ಕೃತಿಯ ಸಂಕೇತವಾಗಿರುವ ದೇವಸ್ಥಾನವನ್ನು ಮೂರನೇಯವರೆಗೆ ಕೊಳ್ಳೆಹೊಡೆಯಲು ಬಿಡದೆ ರಕ್ಷಿಸೋಣ. ಏನನ್ನುತ್ತಿರಿ?

-ನಿತಿನ್ ಮುತ್ತಿಗೆ
nitinmuttige@gmail.com

1 comment:

Unknown said...

ಶ್ರೀಯುತ ನಿತಿನ್ ಮುತ್ತಿಗೆ ಅವರಿಗೆ ನಮಸ್ಕಾರ...
ಇಷ್ಟುದಿನವಾದರು ತಮ್ಮ ಲೇಖನ ಯಾಕೆ ಇಲ್ಲ ಅಂತ ಯೋಚಿಸುತ್ತಿದ್ದೆ... ಅಂತು ಬೆಂಕಿಯಂತೆ, ಸವಾಲಿಗೆ ಸವಾಲಿಗೆ ಸವಾಲು ಎಸಿಯುವ ನಿಮ್ಮ ಶೈಲಿ ಇಷ್ಟವಾಯಿತು..
ನಿಮ್ಮ ಪ್ರಶ್ನೆಗಳಿಗೆ ಉತ್ತರ ಬರುತ್ತದೆ ಅಂಥಾ ನಂಬಿಕೆ ನನಗಿಲ್ಲ..!!!