ಆತ್ಮಿಯ ಶಾಸ್ತ್ರೀ ಅವರೇ ಮತ್ತು ಓದುಗರೇ,
ಶ್ರೀ ಸಂಸ್ಥಾನ ಗೋಕರ್ಣ ದೇವಾಲಯದ ನೋಂದಣಿ ಶ್ರೀ ಮಹಾಬಲೇಶ್ವರ ದೇವರ ಹೆಸರಿನಲ್ಲೇ ಇದ್ದು, ಯಾರಿಗೂ ಬದಲಾಗಿಲ್ಲ ಎಂದು ಶ್ರೀರಾಮಚಂದ್ರಾಪುರಮಠ ಸ್ಪಷ್ಟಪಡಿಸಿದೆ ಎಂದು ನಿನ್ನೆಯ ಬಹಳಷ್ಟು ಪತ್ರಿಕೆಯಲ್ಲಿ ಬಂದಿದೆ ಅದನ್ನು ತಾವು ಗಮನಿಸಿಲ್ಲ ಎಂದು ಕಾಣಿಸುತ್ತದೆ. ದೇವಾಲಯ ಹಾಗೂ ಅದರ ಆಸ್ತಿ ಮಠಾಧೀಶ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರ ಹೆಸರಿಗೆ ಬದಲಾಗಿದೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾದ ವರದಿ ಸತ್ಯಕ್ಕೆ ದೂರವಾದದ್ದು, ದೇಗುಲ ಮೊದಲಿನಂತೆಯೇ ‘ಶ್ರೀ ಮಹಾಬಲೇಶ್ವರ ದೇವ’ ಎಂಬ ಹೆಸರಿನಲ್ಲಿಯೇ ಇದೆ.

ದೇವಾಲಯದ ನಿರ್ವಹಣೆ, ಕೊನೆಯ ಟ್ರಸ್ಟಿ ವಿ.ಡಿ. ದೀಕ್ಷಿತರ ಹೆಸರಿನಲ್ಲಿತ್ತು. ಅವರು ತೀರಿಕೊಂಡ ಅನಂತರವೂ ಅದು ಬದಲಾಗಿರಲಿಲ್ಲ. ಇದೀಗ ಮರು ಅಧಿಸೂಚನೆಯ ಮೂಲಕ ಗೋಕರ್ಣ ದೇವಾಲಯವನ್ನು ಶ್ರೀರಾಮಚಂದ್ರಾಪುರಮಠಕ್ಕೆ ಹಸ್ತಾಂತರಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿ.ಡಿ. ದೀಕ್ಷಿತರ ಹೆಸರಿದ್ದ ಜಾಗದಲ್ಲಿ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರ ಹೆಸರು ಸಹಜವಾಗಿ ಬದಲಾಗಿದೆ ಎಂದು ಮಾಧ್ಯಮದಲ್ಲಿ ಸ್ಪಷ್ಟಪಡಿಸಲಾಗಿದೆ.
ಹಸ್ತಾಂತರವನ್ನು ವಿರೋಧಿಸುತ್ತಿರುವ ಕೆಲ ಶಕ್ತಿಗಳು ಕೆಲವೊದ್ದು ಪತ್ರಿಕೆಗಳ ಜೊತೆ ಸೇರಿ ದುರುದ್ದೇಶಪೂರ್ವಕ ಇಂಥ ತಪ್ಪು ಮಾಹಿತಿಗಳನ್ನು ಹಬ್ಬಿಸುವ ಮೂಲಕ ಗೋಕರ್ಣದಲ್ಲಿ ಅನಪೇಕ್ಷಿತ ಬೆಳವಣಿಗೆಗಳಾಗುತ್ತಿವೆ ಎಂಬಂರ್ಥದಲ್ಲಿ ವದಂತಿಗಳ ವೈಭವೀಕರಣದಲ್ಲಿ ತೊಡಗಿವೆ. ಸ್ವಾರ್ಥ ಸಾಧನೆಗಾಗಿ ವಿಘ್ನ ಸಂತೋಷಿಗಳು ನಡೆಸುತ್ತಿರುವ ಇಂಥ ಕೃತ್ಯಕ್ಕೆ ಕಿವಿಗೊಡಬಾರದು.
ಈಗಾಗಲೇ ಕ್ಷೇತ್ರದ ಪುನರುತ್ಥಾನಕ್ಕೆ ಸಹಸ್ರಾರು ಮಂದಿ ಮಹಾಸಂಕಲ್ಪ ಕೈಗೊಂಡಿದ್ದು, ದೇವಾಲಯದ ಸಮಗ್ರ ಅಭಿವೃದ್ಧಿಗೆ ಚಾಲನೆ ದೊರೆತಿದೆ. ಇಂಥ ಸನ್ನಿವೇಶದಲ್ಲಿ ಹತಾಶ ಮನಸ್ಸುಗಳು ಅನಗತ್ಯ ವದಂತಿಗಳ ಮೂಲಕ ಅಭಿವೃದ್ಧಿಗೆ ಅಡ್ಡಿ ಮಾಡುವ ಪ್ರಯತ್ನಕ್ಕೆ ಮುಂದಾಗಿದ್ದು, ಯಾವುದೇ ಬೆದರಿಕೆಗಳಿಗೆ ಮಣಿಯದೇ ಕ್ಷೇತ್ರದಲ್ಲಿ ವ್ಯವಸ್ಥೆಯೊಂದರ ಸ್ಥಾಪನೆಗೆ ಶ್ರೀಮಠ ಬದ್ಧವಾಗಿರುತ್ತದೆ ಮತ್ತು ನಾಡಿನ ಜನರ ನಿರೀಕ್ಷೆಗಳು ಖಂಡಿತಾ ಈಡೇರುತ್ತವೆ ಎಂದು ನನ್ನ ಸ್ಪಟ್ಟ ಭಾವನೆ.
ಧನ್ಯವಾದಗಳೊಂದಿಗೆ,
ನವೀನ್ ಹೆಗಡೆ.
ನವೀನ್ ಹೆಗಡೆ.
No comments:
Post a Comment