ಬೆಂಗಳೂರು/ಗೋಕರ್ಣ, ಸೆ.೩೦ - ಗೋಕರ್ಣ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯೇ ಪ್ರಧಾನ. ಅದು ಯಾರಿಂದ ಆಗುತ್ತಿದೆ ಎಂಬೆಲ್ಲ ಸಂಗತಿಗಳು ಗೌಣ ಎಂದು ಕೆ.ಪಿ.ಸಿ.ಸಿ.ಯ ನೂತನ ಅಧ್ಯಕ್ಷ ಆರ್.ವಿ. ದೇಶಪಾಂಡೆ ಹೇಳಿದರು.
ಬೆಳಗ್ಗೆ ಗೋಕರ್ಣ ಮಹಾಬಲೇಶ್ವರ ದೇವಾಲಯಕ್ಕೆ ಭೇಟಿಯಿತ್ತಿದ್ದ ಅವರು ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರೊಂದಿಗೆ ಸಮಾಲೋಚನೆ ನಡೆಸಿದರು. ಧಾರ್ಮಿಕ ಕೇಂದ್ರಗಳ ಅಭಿವೃದ್ಧಿ ಏನಿದ್ದರೂ ಮಠಗಳಿಂದಲೇ ಸಾಧ್ಯ. ಪ್ರಸ್ತುತ, ಮಹಾಬಲೇಶ್ವರ ದೇವಾಲಯದ ಆಡಳಿತ ನಿರ್ವಹಣೆಯ ಜವಾಬ್ದಾರಿ ಶ್ರೀರಾಮಚಂದ್ರಾಪುರಮಠಕ್ಕೆ ಬಂದಿರುವುದು ಸ್ವಾಗತಾರ್ಹ ಎಂದರು.
ಹಲವಾರು ಸಮಾಜಮುಖೀ ಕಾರ್ಯಗಳಲ್ಲಿ ತೊಡಗಿಸಿಕೊಂಡ ಶ್ರೀಮಠ ಪ್ರಥಮ ಹಂತದಲ್ಲಿಯೇ ದೇವಾಲಯದ ಸ್ವಚ್ಛತಾ ಕಾರ್ಯ ಕೈಗೊಂಡು, ಕುಡಿಯುವ ನೀರು ಮೊದಲಾದ ವ್ಯವಸ್ಥೆಗಳನ್ನು ಮಾಡಿದ್ದನ್ನು ಶ್ಲಾಘಿಸಿದರು.
ಮಧ್ಯದಲ್ಲೊಮ್ಮೆ, ಎಸ್.ಎಂ. ಕೃಷ್ಣರವರು ಗೋಕರ್ಣ ಕ್ಷೇತ್ರಕ್ಕೆ ಭೇಟಿಯಿತ್ತದ್ದ ಸಂದರ್ಭವನ್ನು ನೆನಪಿಸಿಕೊಂಡರು. ಭೇಟಿಯ ಸಂದರ್ಭದಲ್ಲಿ ಪುರಾಣ ಪ್ರಸಿದ್ಧ ಕ್ಷೇತ್ರ ಗೋಕರ್ಣ ದೇವಾಲಯದ ಆಡಳಿತ ನಿರ್ವಹಣೆಯ ಕುರಿತಾಗಿ ವಿಷಾದ ವ್ಯಕ್ತಪಡಿಸಿದ್ದನ್ನು ಮುಕ್ತವಾಗಿ ಹಂಚಿಕೊಂಡರು.
ಹಳೆಯದನ್ನು ಮತ್ತೆ ಮತ್ತೆ ಕೆದಕುವುದರ ಬದಲು ಹೊಸದಾಗಿ ಬಂದಿರುವ ಆಡಳಿತ ವ್ಯವಸ್ಥೆಗೆ ಸಂಪೂರ್ಣ ಬೆಂಬಲ ನೀಡೋಣ ಎಂದರು.
ಈ ಸಂದರ್ಭದಲ್ಲಿ ಗೋಕರ್ಣ ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ಭಾರತೀ ದೇವತೆ, ಪ್ರಾಕ್ತನ ಅಧ್ಯಕ್ಷ ನಾಗರಾಜ ಹಿತ್ತಲಮಕ್ಕಿ, ಕುಮಟಾದ ಉದ್ಯಮಿ ಮುರಳೀಧರ ಪ್ರಭು ಉಪಸ್ಥಿತರಿದ್ದರು.
3 comments:
modalu ee rajakiyadavara hinde beeluva sampradayavannu bittu adhatmada kadege yochisi.Avaru yendiddaru nimage hesaru halumaduthare
raajakiiya shakti aadhyaatmika shaktiya munde talebaagide anta tiLidukollabeku. Ellaa raajakiiya shaktigaLu olleyadannu bembalisuvante maaduvude aagabekiruva/kaanuttiruva Parivartane.
ಬೆಲ್ಲ ಇರುವ ಕಡೆ ಇರುವೆ ಇರತ್ತೆ ಕಣಪ್ಪ.
ಜೀವನದಲ್ಲಿ ಬರಿ ದುಡ್ಡು ಮುಖ್ಯ ಅಲ್ಲ. ಯಾರಲ್ಲಿ ಜನ ಬೆಂಬಲ ಇರತ್ತೆ ಅವರ ಹತ್ತಿರ ರಾಜಕಾರಣಿಗಳು, ಮಾಧ್ಯಮದವರು ಬರ್ತಾರೆ. ಶ್ರೀಮಠ ಯಾರನ್ನು ಕಾಲಿಗೆ ಬಿದ್ದು ಬಾ ಅನ್ನೋಲ್ಲ. ಅವರಾಗೇ ಬರ್ತಾರೆ.
ಅವರು ಬಂದರೆ ನಿಮಗ್ಯಾಕೆ ಉರಿಯತ್ತೆ ಸ್ವಾಮಿ. ನಿಮ್ಮ ಈ ಜನ್ಮದಲ್ಲಿ ಶ್ರೀಮಠ ಮಾಡಿದ ಸಂಘಟನೆ ಮಾಡೋಕೆ ಆಗತ್ತಾ ಅಂತ ನೋಡಿ.
Post a Comment