Monday, September 15, 2008

G0ಕರ್ಣ COME ಮಠ





  • ಗೋಕರ್ಣದಲ್ಲಿ ಇಂದಿನ ಬೆಳಗು ಎಂದಿನಂತಿರಲಿಲ್ಲ. ಇಲ್ಲಿ ಸ್ಥಾಪಿತವಾಗಿದ್ದ ಶಂಕರಾಚಾರ್ಯ ಪೀಠದ ನಿತ್ಯ ದರ್ಶನದ
    ಮಹಾಬಲೇಶ್ವರ ದೇವಸನ್ನಿಧಿ ಬಹುದೀರ್ಘಕಾಲಾನಂತರ ಶ್ರೀ ಮಠದ ಸುಪರ್ದಿಗೆ ಬಂದು ಶ್ರೀ ರಾಘವೇಶ್ವರ ಮಹಾಸ್ವಾಮಿಗಳ ಕ್ಷೇತ್ರ ಪುನರುತ್ಥಾನದ ಮಹಾಸಂಕಲ್ಪದ ಗಳಿಗೆಗಾಗಿ ಜನ ಸಾಗರ ಕಾತರದಿಂದ ಕಾಯುತ್ತಿತ್ತು.
    ರಥಬೀದಿ ತಳಿರು ತೋರಣಗಳಿಂದ, ವಿದ್ಯುತ್ ದೀಪಾಲಂಕಾರಗಳಿಂದ ಸಡಗರಗೊಂಡಿತ್ತು. ಬೀದಿಯ ಮನೆಮನೆಯವರು ತಮ್ಮ ನಾಮಾಂಕಿತಗೊಂಡ ಮಹಾಸಂಕಲ್ಪದ ಕಾರ್ಯಕ್ಕಾಗಿ ಆಗಮಿಸುತ್ತಿರುವ ಶ್ರೀಗಳ ಸ್ವಾಗತ ಕಮಾನು ರಚಿಸಿ ಸರ್ಕಾರದ ಹಸ್ತಾಂತರ ನಿರ್ಧಾರವನ್ನು ಪುಷ್ಠಿಕರಿಸಿದಂತಿತ್ತು. ಇವರ ಅಮಿತ ಉತ್ಸಾಹದಲ್ಲಿ ಹಸ್ತಾಂತರದ ಮೊದಲ ದಿನದಲ್ಲಿ ಕಂಡ ಅತೃಪ್ತರ ದನಿ ಮಾಯವಾಗಿತ್ತು. ಪ್ರತ್ಯೇಕ ವೇದಿಕೆಯಲ್ಲಿ ವಿರೋಧಿ ಸಮಾವೇಶ ನಡೆಸಿ ಶ್ರೀ ರಾಮಚಂದ್ರಾಪುರ ಮಠಕ್ಕೆ ಮಹಾಬಲೇಶ್ವರ ದೇವಸ್ಥಾನವನ್ನು ಹಸ್ತಾಂತರಿಸಿದ ಸರ್ಕಾರದ ನಿರ್ಧಾರವನ್ನು ಚೂರು ಚೂರುಗೊಳಿಸುವ ಕೆಚ್ಚೆದೆಯ ಮಾತನ್ನಾಡಿದ್ದ ಉತ್ತರಕುಮಾರರು ಗೋಕರ್ಣದ ಪರಿಧಿಯಿಂದಲೇ ಪಲಾಯನಗೈದಿದ್ದು ಸ್ಥಳೀಯರ ಮೂದಲಿಕೆಯ ಮಾತುಗಳಿಗೆ ಅವಕಾಶ ಒದಗಿಸಿತ್ತು.
    ಬೌದಾಯನೀಯರ ನಿತ್ಯಸಂಕಲ್ಪದ ಗೋಕರ್ಣಮಂಡಲ ಗೋರಾಷ್ಟ್ರ ದೇಶದ ಸಹಸ್ರ ಸಹಸ್ರ ಹೆಜ್ಜೆಗಳು ಮಹಾ ಸಂಕಲ್ಪದ ದಿವ್ಯ ಧ್ವನಿಗೆ ದನಿಗೂಡಿಸಲು ಪುನರುತ್ಥಾನದ ಸಂಕಲ್ಪದ ಸಿದ್ಧಿಗೆ ಕರ ಜೋಡಿಸಲು ಗೋಕರ್ಣದತ್ತ ಪಯಣಿಸಿ ಮಧ್ಯಾಹ್ನದ ಹೊತ್ತಿಗೆ ಜನ ಸಂದಣಿಯಾಗಿದ್ದವು.
    ನುಡಿಚಿತ್ರ: ಕಲಗಾರು ಲಕ್ಷ್ಮೀನಾರಾಯಣ ಹೆಗಡೆ.
    ಈ ಬ್ಲಾಗಿಗೆ ನೀವೂ ಬರೆಯಬೇಕೆ..? ತಕ್ಷಣ ಬರಹ ಯೂನಿಕೋಡ ನಲ್ಲಿ ವರ್ಡಪ್ಯಾಡ್ ನಲ್ಲಿ ಟೈಪ್ ಮಾಡಿ ಕಳುಹಿಸಿ. media4cow@gmail.com

No comments: