ಸೆ.೧೫: ಗೋಕರ್ಣ: ಪರಶಿವನ ಆತ್ಮಲಿಂಗದ ದಿವ್ಯ ಸನ್ನಿಧಾನದ ಪಾವನ ಕ್ಷೇತ್ರ, ಗಜಾನನನ ದಿವ್ಯ ಲೀಲಾವಿಭೂತಿಯ ಆಡುಂಬೊಲ, ಜಗನ್ಮಾತೆ ಪಾರ್ವತಿಯು ದುಷ್ಟನಾಶಕಳಾಗಿ ಭದ್ರಕಾಳಿಯಾದ, ಶಿಷ್ಟ ಪರಿಪಾಲಕಳಾಗಿ ತಾಮ್ರಗೌರಿಯಾದ, ಶಾಂಟ ರೌದ್ರ ಶಕ್ತಿ ಪರಮ್ಯದ ಅದ್ಭುತ ಕ್ಷೇತ್ರ, ದೇವಾನುದೇವತೆಗಳೆಲ್ಲರಿಗೆ ಆಲಯಗಳನ್ನೊದಗಿಸಿದ ಜಗತ್ತಿನ ಏಕೈಕ ದೇವಾಲಯಗಳ ನಗರಿ, ಸುತ್ತ ವಿಶಾಲವಾಗಿ ಹರಡಿರುವ ಸಹ್ಯಪರ್ವತದ ಪ್ರತಿ ನೀರ ಹನಿಯಲ್ಲೂ ಕೋಟಿ ಕೋಟಿ ತೀರ್ಥಗಳನ್ನು ಸಮ್ಮಿಳಿತಗೊಳಿಸಿಕೊಂಡ ವಾಸ್ತವ ತೀರ್ಥಕ್ಷೇತ್ರ, ಸಮುದ್ರರಾಜನ ಓಂಕಾರ ಧ್ವನಿಯನ್ನು ಭೌತಿಕವಾಗಿಯೂ ಅನಾವರಣಗೊಳಿಸಿಕೊಂಡ ವಿಶ್ವದೊಂದು ಅಚ್ಚರಿಯ ತಾಣ, ಸಹಸ್ರಸಹಸ್ರ ಸಂವತ್ಸರಗಳಿಂದ ಸನಾತನ ಭಾರತದ ಸರ್ವವಿದ್ಯೆಕಲೆಗಳಾ ನರ್ತನ ಭೂಮಿ, ಲೆಕ್ಕವಿರಿಸಲಾಗದಷ್ಟು ಶತಮಾನಗಳ ಕಾಲದಿಂದ ಅನುಸ್ಯೂತವಾಗಿ ವೇದದುಂದುಭಿ ಮೊಳಗಿದ; ಮೊಳಗುತ್ತಿರುವ; ಮೊಳಗುತ್ತಲೇ ಇರುವ ವೇದ ಮಂಗಲ ಭೂಮಿ, ಪರಶಿವಮ ಪರಮಾವತಾರ ಶ್ರೀಶಂಕರಭಗವತ್ಪಾದರ ಪಾದಸ್ಪರ್ಶದಿಂದ ಪುನೀತಗೊಂಡ, ಪಾವನ ಪೀಠವೊಂದರ ಆರಂಭ ಮಂಗಳಕ್ಕೂ ಎಡೆಯಾದ ಪೂತಭೂಮಿ, ದಿವಿಯ ಗಂಗೆ ಭುವಿಯ ಗಂಗೆಯಾಗಲು ಭುವಿಯ ಗಂಗೆ ಭವಿಗಳ ಭವವನ್ನು ನಾಶಮಾಡುವಂತಾಗಲು ಹಿನ್ನಲೆಯಾದ ರಾಜಭಗೀರಥನ ಭಗೀರಥ ತಪಸ್ಸಿಗೆ ಒಡಲಿತ್ತ ತಾಣ, ಮಾನವ ಜನಾಂಗದ ತ್ರಿಕಾಲಾಬಾಧಿತ ಆದರ್ಶವನ್ನು ಭುವಿಗಿಳಿಸಲೆಂದೇ ನಡೆದಂತಿರುವ ರಾಮಾಯಣದ ಪರಮಾದರ್ಶಮೂರ್ತಿ ಪರಮೇಶ್ವರನ ಇನ್ನೊಂದು ಅವತಾರ ಆಂಜನೇಯನ ಜನ್ಮಭೂಮಿ. ಶ್ರೀ ಕ್ಷೇತ್ರ ಗೋಕರ್ಣದಲ್ಲಿ ನೆಲೆನಿಂತ ಮಹಾಬಲ ಪರಶಿವನ ಜಗನ್ಮಂಗಲಕರವಾದ ಪರಮಾದ್ಭುತ ಮಹಿಮೆಯನ್ನು ವಿಶ್ವದ ಚರಾಚರಗಳೆಲ್ಲದರ ಒಳಿತಿಗಾಗಿ, ಪಸರಿಸುವದಕ್ಕಾಗಿ ಪರಿಶುದ್ಧ ಪರಮಸುಂದರ ಪರಮಾಪ್ತರೂಪದಲ್ಲಿ ಶ್ರೀಕ್ಷೇತ್ರ ಗೋಕರ್ಣದ ಪರಿಪೂರ್ಣ ಅಭ್ಯುತ್ಥಾನಕ್ಕಾಗಿ ಮಹಾಸಂಕಲ್ಪಕ್ಕೆ ಬದ್ಧನಾಗುತ್ತೇನೆ.
ಲಕ್ಷ್ಮೀನಾರಾಯಣ ಹೆಗಡೆ ಕಲಗಾರು
ನಾವು ಹಿಂದೂಗಳು ಗೋಮಾಂಸ ಭಕ್ಷಕರು
15 years ago
No comments:
Post a Comment