Saturday, October 4, 2008

ದೇವಾಲಯದ ಹಸ್ತಾಂತರ ಹುಟ್ಟುಹಾಕಿದ ಶಂಕೆಗಳಿಗೆ ಕೃತಿಯೇ ಉತ್ತರ

ಗೋಕರ್ಣ, ಅ.೨ - ದೇವಾಲಯದ ಹಸ್ತಾಂತರವಾದಾಗ ಮುಕ್ತ ಪೂಜೆಯ ಮುಂದುವರಿಕೆ ಸೇರಿದಂತೆ ಹಲವಾರು ವಿಷಯಗಳಲ್ಲಿ ಶಂಕಿಸಲಾಗಿತ್ತು. ಪ್ರಸ್ತುತ, ಎಲ್ಲ ಸಮಾಜದವರೂ ಮುಕ್ತವಾಗಿ ನೆರವೇರಿಸುತ್ತಿರುವ ಸೇವೆಯೇ ಎಲ್ಲ ಶಂಕೆಗಳಿಗೆ ತೆರೆ ಎಳೆಯಲು ಮುನ್ನುಡಿಯಾಗಲಿದೆ ಎಂದು ರಾಘವೇಶ್ವರ ಶ್ರೀಗಳು ಅಭಿಪ್ರಾಯಪಟ್ಟರು.

ಗೋಕರ್ಣದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಸುತ್ತಮುತ್ತಿಲಿನ ಪ್ರದೇಶದ ಎಲ್ಲ ಸಮಾಜದವರೂ ಆತ್ಮಲಿಂಗ ಪೂಜಾಸೇವೆ ಕೈಗೊಳ್ಳಲು ಮುಂದೆ ಬಂದಿದ್ದಾರೆ. ಬೆಳಗ್ಗೆ ಭಂಡಾರಿ, ದೇಶಭಂಡಾರಿ, ದೇವಡಿಗ, ಗಾರುಡಿಗ ಹಾಗೂ ಗುಡಿಗಾರ ಸಮಾಜದವರ ಸೇವೆಯ ನಂತರದ ಅನುಗ್ರಹ ಸಂದೇಶ ಸಭೆಯಲ್ಲಿ ಶ್ರೀಗಳು ಮಾತನಾಡುತ್ತಿದ್ದರು.


ಭರತನಂತೆ ಸೇವಾಕಾರ್ಯಗಳಲ್ಲಿ ತೊಡಗಿಕೊಳ್ಳಲು ಶ್ರೀಗಳು ಕರೆ ನೀಡಿದರು. ತಾಯಿ ಎಂದೆಂದಿಗೂ ತಾರತಮ್ಯ ಮಾಡುವುದಿಲ್ಲ ಎಂದೂ ಹೇಳಿದರು. ಸದ್ಯ ಸುತ್ತಮುತ್ತಲಿನ ಅರ್ಹ ಫಲಾನುಭವಿಗಳಿಗೆ ಶ್ರೀಮಠವು ಕೊಡಮಾಡಲಿರುವ ೧೦೦೦ ಗೋವುಗಳ ದಾನದ ಬಗೆಗೆ ಪ್ರಸ್ತಾಪಿಸಿದರು.
ಪಾಲ್ಗೊಂಡಿದ್ದ ಶಾಸಕ ದಿನಕರ ಶೆಟ್ಟಿಯವರು ಶ್ರೀಗುರುಪೀಠ ಎಂದೂ, ಯಾರಲ್ಲಿಯೂ ತಾರತಮ್ಯವನ್ನು ಮಾಡಿದ್ದಿಲ್ಲ. ದೇಗುಲ ಹಸ್ತಾಂತರ ಸಂದರ್ಭದಿಂದಲೂ ಉಪಸ್ಥಿತರಿದ್ದ ತಾವು ದೇವಾಲಯದ ಅಭಿವೃದ್ಧಿಯನ್ನು ನಿರೀಕ್ಷಿಸಿದ್ದೇವೆ ಎಂದು ಹೇಳಿದರು.


ಕೃಷ್ಣ ಭಂಡಾರಿ, ಸುಬ್ರಾಯ ಭಂಡಾರಿ, ವಿ.ಎಂ. ದೇಶಭಂಡಾರಿ, ನಾಗೇಶ ದೇವಡಿಗ, ಆರ್.ವಿ. ಗಾವಡಿ, ದಯಾನಂದ ಶೇಟ್ ಮೊದಲಾದ ಮುಖಂಡರು ಪಾಲ್ಗೊಂಡಿದ್ದರು. ಒಂದು ಸಾವಿರಕ್ಕೂ ಅಧಿಕ ಮಂದಿ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆ ಬಹಳ ಯಶಸ್ವಿಯಾಗಿ ಸಂಪನ್ನಗೊಂಡಿತು.

No comments: