Tuesday, October 28, 2008

ಮಹಾಬಲೇಶ್ವರನ ಸನ್ನಿಧಾನದಲ್ಲಿ ಅನ್ನದಾನ ಆರಂಭ

ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಗೋಕರ್ಣದಲ್ಲಿ ಎಲ್ಲರ ಅನೇಕ ದಿನದ ಕನಸು ನನಸಾಗುವ ದಿನ ಬಂದಿದೆ.
ಕೇವಲ ಮೋಜು ಮಸ್ತಿಗೆ ಹೆಸರುವಾಸಿ ಯಾಗಿ ಧಾರ್ಮಿಕತೆ ಮಾಯವಾಗುತ್ತಿರುವಾಗ ದೇವರ ದರ್ಶನಕ್ಕೆ ಬಂದವರಿಗೆ ಅಲ್ಲಿ ಧಾರ್ಮಿಕತೆಯ ಸೊಗಡೆ ಇಲ್ಲದೇ,ಇತರ ಧಾರ್ಮಿಕ ಕ್ಷೇತ್ರಗಳಲ್ಲಿದ್ದಂತೆ ಅನ್ನ ಪ್ರಸಾದ ಇಲ್ಲದೇ ಖೇದದಿಂದ ಮರಳುತ್ತಿರುವವರು ಅದೇಷ್ಟೋ?.

ಗೋಕರ್ಣ ಕ್ಷೇತ್ರದ ಆಡಳಿತವನ್ನು ಶ್ರೀರಾಮಚಂದ್ರಾಪುರ ಮಠಕ್ಕೆ ಸರಕಾರ ವಹಿಸಿಕೊಟ್ಟ ಮೇಲೆ ಅಲ್ಲಿನ ವಾತಾವರಣವೇ ಬದಲಾಗಿದೆ.ದರ್ಶನಕ್ಕೆ ಬರುವ ಭಕ್ತರಿಗೆ “ಧಾರ್ಮಿಕ ಸೊಗಡಿನ” ವಾತಾವರಣವನ್ನು ಉಣಬಡಿಸಲಾಗುತ್ತಿರುವುದು “ಗೋಕರ್ಣದ ಅಭಿವೃಧ್ದಿ” ಯ ದ್ಯೋತಕ.

ದೇವರ ದರ್ಶನಕ್ಕೆ ಬರುವ ಪ್ರವಾಸಿಗರಲ್ಲಿ ದೇವರ ದರ್ಶನವಾದ ಮೇಲೆ “ಹೋಟೆಲ್” ನಲ್ಲಿ ಊಟ ಮಾಡುವುದು ಧಾರ್ಮಿಕ ಕ್ಷೇತ್ರದಲ್ಲಿ ತರವಲ್ಲ.ಆದ್ದರಿಂದಲೇ ಶ್ರೀರಾಮಚಂದ್ರಾಪುರ ಮಠ ಗೋಕರ್ಣದಲ್ಲಿ “ಅನ್ನದಾನ” ಆರಂಭಿಸಿದೆ.

ಉದ್ಘಾಟನೆಯೇ ಭಿನ್ನ!!:
ಶ್ರೀರಾಘವೇಶ್ವರ ಭಾರತೀ ಶ್ರೀಗಳು ತಮ್ಮ ಚಾತುರ್ಮಾಸ್ಯ ವೃತವನ್ನು ಸಂಪನ್ನಗೊಳಿಸಿ ಗೋಕರ್ಣಕ್ಕೆ ಚಿತ್ತೈಸಿದಾಗ ಅನ್ನದಾನಕ್ಕೆ ಚಾಲನೆ ನೀಡಿದರು.ಚಾಲನೆ ನೀಡುವುದರಲ್ಲೂ ಭಿನ್ನತೆ ಮೆರೆದ ಶ್ರೀಗಳು, ಸ್ವತ: ಅವರೇ ಬಾಳೆ ಎಲೆಯನ್ನು ಹಾಕಿ,ಭಕ್ತರ ಬಹುದಿನದ ಕನಸನ್ನು ನನಸು ಮಾಡಿದರು. ಈಗಾಗಲೇ ದೇವಸ್ಥಾನ ಸ್ವಚ್ಚತೆ,ನೀರಿನ ವ್ಯವಸ್ಥೆ ಮುಂತಾದ ಕಾರ್ಯಕ್ರಮದ ಜೊತೆ ಅನ್ನದಾನ ಆರಂಬಿಸಿದ್ದು ಭಕ್ತರಿಂದ ಉತ್ತಮ ಪ್ರತಿಕ್ರೀಯೆ ಬರುತ್ತಿರುವುದು “ಗೋಕರ್ಣದ ನವೋಲ್ಲಾಸಕ್ಕೆ” ಹಿಡಿದ ಕನ್ನಡಿಯಾಗಿದೆ.

ಈಗ ದಿನವೂ 300-400 ಜನ ಮಧ್ಯಾಹ್ನದ ಊಟವನ್ನು ಸೇವಿಸುತ್ತಿದ್ದು, ಗೋಕರ್ಣದಲ್ಲಿ ಈ ಎಲ್ಲ ಕಾರ್ಯಕ್ರಮದಿಂದ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.ಅನ್ನದಾನವನ್ನು ಎಲ್ಲ ಜಾತಿ,ಪಂಗಡ,ಸಮಾಜವನ್ನು ಮರೆತು ಒಗ್ಗಟ್ಟಿನಿಂದ ಸೌಹಾರ್ಧಯುತವಾಗಿ ಸೇವೆಯನ್ನು ನಡೆಸಿಕೊಡಿತ್ತಿರುವುದು ವಿಶೇಷ. ಇದು ಭಕ್ತರ ಜೊತೆ “ಗೋಕರ್ಣದ ಸ್ಥಳಿಯರಲ್ಲೂ” ಕೂಡ ವಿಶೇಷ ಗಮನ ಸೆಳೆದಿದೆ.


ನಿತಿನ್ ಮುತ್ತಿಗೆ
nitinmuttige@gmail.com

No comments: