Friday, October 17, 2008

*ಗೋ ವಿಶ್ವಕ್ಕೆ ವರ್ಷದ ಸಂಭ್ರಮ*

ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮಿಗಳ ಮಹತ್ವಾಕಾಂಕ್ಷಿ ಭಾರತಿಯ ಗೋತಳಿಗಳ ಸಂರಕ್ಷಣಾ ಅಭಿಯಾನ 'ಕಾಮಧುಘಾ'ಕ್ಕೆ ಪೂರಕವಾಗಿ ಪ್ರಾರಂಭವಾದ ಅಂತರ್ಜಾಲ ಪತ್ರಿಕೆ 'ಗೋವಿಶ್ವ' ತನ್ನ ಪ್ರಥಮ ವರ್ಷಾಚರಣೆಯನ್ನು ಸದ್ದಿಲ್ಲದೆ ಆಚರಿಸಿಕೊಳ್ಳುತ್ತಿದೆ. ಕಳೆದ ಚಾತುರ್ಮಾಸದಲ್ಲಿ ಒಂದಿಷ್ಟು ಟೆಕ್ಕಿಗಳು ತಮ್ಮ ವೀಕೆಂಡ್ ವಿಶ್ರಾಂತಿಯನ್ನು ತೊರೆದು ಶ್ರೀಗಳ ಇಚ್ಚೆಯಂತೆ ಗೋಸಂರಕ್ಷಣ ಅಭಿಯಾನದಲ್ಲಿ ತಾವೂ ಕೈಜೊಡಿಸಲು ನಿರ್ಧರಿಸಿದಾಗ ಹುಟ್ಟಿಕೊಂಡಿದ್ದು IT4COW (ಗೋವಿಗಾಗಿ ತಂತ್ರಜ್ನರು)ಸಂಸ್ಥೆ. ಟೆಕ್ಕಿಗಳು ತಮ್ಮ ಯಾವತ್ತೂ 'ಬ್ಯೂಸಿ ಜೀವನದ ಮಧ್ಯೆಯೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೆಕೆಂಬ ಶ್ರೀ ಗಳ ಸದಿಚ್ಛೆಯನ್ನು ಅನುಷ್ಟಾನಗೊಳಿಸಲು ಪ್ರಾರಂಭಗೊಂಡ IT4COW, ತನ್ನ ಪ್ರಥಮ ಹೆಜ್ಜೆಯಾಗಿ ಅಂತರ್ಜಾಲ ಪತ್ರಿಕೆಯೋಂದನ್ನು ಹೊರತರಲು ಸಂಯೋಜಿಸಿತು.ಗೋವಿನ ಕುರಿತಾದ ಈ ಪ್ರಥಮ ಇ-ಪತ್ರಿಕೆಯನ್ನು ಕನ್ನಡ ಹಾಗೂ ಇಂಗ್ಲೀಶ್‍ನಲ್ಲೆರೆಡರ್ಲೂ ತರಲು ನಿರ್ಧರಿಸಿ,ಕನ್ನಡ ಅವತರಣಿಕೆಗೆ ಅಂತರ್ಜಾಲದಲ್ಲಿ ಪ್ರಥಮವಾಗಿ ಕನ್ನಡ ಪರಿಚಯಿಸಿದ ಖ್ಯಾತಿಯ ಡಾಪವನಜ ಸಂಪಾದಕರಾಗಿ ಹೊಣೆಹೊತ್ತರೆ, ಆಂಗ್ಲ ಅವತರಣಿಕೆಯ ಜವಾಬ್ದಾರಿ ಅಜಿತ್ ರಾಘವೇಂದ್ರ ತೆಗೆದುಕೊಂಡರು. ಗಿರಿನಗರ ಗೋಸಂಧ್ಯದಲ್ಲಿ ಪೇಜಾವರ ಶ್ರೀಗಳು ಲೊಕಾರ್ಪಣಗೋಳಿಸಿದರು.ಅಂದಿನಿಂದ ಪ್ರತಿ ತಿಂಗಳ ಮೊದಲನೆ ತಾರಿಖಿನಂದು ಅಂತರ್ಜಾಲದಲ್ಲಿ ಲಭ್ಯವಾಗುವ ಈ ಇ-ಪತ್ರಿಕೆಗಳು ಪ್ರಾರಂಭವಾಗಿ ಈ ಅಕ್ಟೋಬರ್‍ಗೆ ಒಂದು ವರ್ಷ.

'ಗೋ ವಿಶ್ವ ' ಪ್ರತಿ ತಿಂಗಳೂ ಭಾರತೀಯ ಗೊ ತಳಿಯೋಂದನ್ನು ಕೇಂದ್ರಿತವಾಗಿಟ್ಟುಕೊಂಡು 'ಮಾಸದ ಗೋವು', ಅದರೊಟ್ಟಿಗೆ ತಜ್ನರ ಲೇಖನಗಳು, ಪ್ರಶ್ನೋತ್ತರಗಳು, ನುಡಿಚಿತ್ರಗಳೂ, ಗೋವಿನ ಕುರಿತಾದ ಸೃಜನಶೀಲ ಸಾಹಿತ್ಯ ಒಳಗೊಂಡು ಆಕರ್ಷಕವಾಗಿ ಮೂಡಿ ಬರುತ್ತಿದೆ. 'ಪತ್ರಿಕೆಯ ಮುಖ್ಯಗುರಿ ಸಮಾಜದ 'ಭುದ್ದಿವಂತ'ರಾದುದರಿಂದ ಭಾವನಾತ್ಮಕ ವಿಚಾರಗಳಿಗಿಂತ ವಿಷಯಾಧಾರಿತ ಲೇಖನಗಳಿಗೇ ಹೆಚ್ಚು ಒತ್ತು ನೀಡಲಾಗುತ್ತಿದೆ. ಇದರಿಂದ ಭಾರತೀಯ ಗೋವುಗಳ ಅರ್ಥಿಕ ಸಾಮಾಜಿಕ ಪ್ರಾಮುಖ್ಯತೆ ತಿಳಿದು ಹೆಚ್ಚು ಹೆಚ್ಚು ಜನರು ಆಕರ್ಷಿತರಾಗುತ್ತಿದ್ದಾರೆ' ಎನ್ನುತ್ತಾರೆ ಸಂಪಾದಕ ಪವನಜ.

ಇ-ಪತ್ರಿಕೆಯಲ್ಲದೆ IT4COW ಉದ್ಯೋಗಾಕಂಕ್ಶಿಗಳಿಗೆ ಅನೇಕ ಕಾರ್ಯಾಗಾರಗಳನ್ನು ನಡೆಸುತ್ತಿದೆ. ಪತ್ರಿಕೆ http://vishwagou.org/e-paper.htm ತಾಣದಲ್ಲಿ ಉಚಿತವಾಗಿ ಲಭ್ಯವಿದೆ.ಅಲ್ಲದೆ http://groups.yahoo.com/group/IT4COW/ಗೆ *ಸದಸ್ಯರಾಗುವ ಮೂಲಕ ನೇರವಾಗಿ ಪ್ರತಿತಿಂಗಳು ನಮ್ಮ ಮೈಲ್ ಬಾಕ್ಸ್'ಗೇ ತರಿಸಿಕೊಳ್ಳಬಹುದು.ಪತ್ರಿಕೆ ಉತ್ತಮ ಲೇಖನಗಳನ್ನೂ, ರಚನಾತ್ಮಕ ವಿಮರ್ಷ್ಯೆಯನ್ನೂ ಅಪೇಕ್ಷಿಸುತ್ತಿದೆ.

-ಮಧು ದೊಡ್ಡೇರಿ

No comments: