Saturday, October 4, 2008

ಮಗು ಮನೆಗೆ ಬರುವುದಕ್ಕೆ ಆಕ್ಷೇಪ ಸಲ್ಲ

ಗೋಕರ್ಣ, ಅ.೧ - ಮಗುವಾದ ಶ್ರೀರಾಮಚಂದ್ರಾಪುರಮಠ ತಾಯಿಯಾದ ಗೊಕರ್ಣಕ್ಕೆ ಮರಳುತ್ತಿರುವುದು ಆಕ್ಷೇಪಿಸಬಹುದಾದ ಸಂಗತಿಯೇ ಅಲ್ಲ ಎಂದು ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಹೇಳಿದರು.

ಹಿರೇಗುತ್ತಿಯ ಗ್ರಾಮ ಸಂಕರ್ಪ ಸಭೆಯಲ್ಲಿ ಮಾತನಾಡುತ್ತಿದ್ದ ಶ್ರೀಗಳು ಮಗು ತನಗೆ ಸಂಬಂಧಪಡದ ಮನೆಗೆ ಹೋದರೆ ಆಕ್ಷೇಪಣೆ ಎತ್ತಬಹುದು. ಇಂದು ಹಾಗಾಗಿಲ್ಲ. ಅಪರಿಹಾರ್ಯ ಕಾರಣಗಳಿಂದ ಕೆಲವು ಕಾಲ ಶ್ರೀಮಠದ ಕೇಂದ್ರ ಹೊಸನಗರವಾಗಿತ್ತು. ಆ ಸಂದರ್ಭದಲ್ಲಿ ಕ್ಷೇತ್ರದ ಆಡಳಿತ ನಿರ್ವಹಣೆಯಲ್ಲಿ ನ್ಯೂನತೆ ಉಂಟಾಗಿದ್ದು ನಿಜ.

ಇನ್ನು ಹಾಗಾಗುವುದಿಲ್ಲ. ಕ್ಷೇತ್ರ ದುರವಸ್ಥೆಯಿಂದ ಮೇಲೆ ಬರುತ್ತಿದೆ. ಕ್ಷೇತ್ರ ಅಭಿವೃದ್ಧಿಯಾಗಬೇಕು ಮತ್ತು ಸುತ್ತಮುತ್ತಲ ಪ್ರದೇಶಗಳೂ ಅದರ ಫಲವನ್ನು ಹೊಂದಬೇಕು ಎಂದು ಹೇಳಿದರು. ಉದಾಹರಣೆಯೆಂಬತೆ ಶ್ರೀಗಳು ಪೀಠಾಧಿಪತಿಗಳಾಗುವ ಮೊದಲು ಹೊಸನಗರ ಮಠದಲ್ಲಿದ್ದ ದುಸ್ಥಿತಿ ಮತ್ತು ಅಪರಿಚಿತತೆ ಹಾಗೂ ಇಂದಿರುವ ಖ್ಯಾತಿಯನ್ನು ಉಲ್ಲೇಖಿಸಿದರು.

ಇದಕ್ಕೂ ಮುನ್ನ ಪೂರ್ಣಕುಂಭ, ವಾದ್ಯಗಳೊಂದಿಗೆ ಶ್ರೀಗಳನ್ನು ಬರಮಾಡಿಕೊಳ್ಳಲಾಯಿತು. ರಾಮು ಕೆಂಚನ್, ಮಾರುತಿ ಹಮ್ಮಣ್ಣ ನಾಯಕ, ಉದಯ ನಾಯಕ, ಅತುಲ ನಾಯಕ, ಆರ್.ವಿ. ನಾಯಕ, ಎಚ್.ಎಸ್. ನಾಯಕ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಅವರೆಲ್ಲರೂ ದೇವಾಲಯದ ನವೀಕರಣ ಮೊದಲಾದ ಕಾರ್ಯಗಳಿಗೆ ತಮ್ಮ ಸಹಕಾರದ ವಾಗ್ದಾನವನ್ನು ಮಾಡಿದರು.
ಮೋಹನ ಭಾಸ್ಕರ ಹೆಗಡೆಯವರು ಕಾರ್ಯಕ್ರಮವನ್ನು ನಿರೂಪಿಸಿದರು.

No comments: