Friday, October 17, 2008

ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಗಳ ಸನ್ನಿಧಾನಕ್ಕೆ

ಹವ್ಯಕ ಮತ್ತು ಶೈಕ್ಷಣಿಕ ಹಾಗೂ ಸಾಂಸ್ಕ್ರತಿಕ ಸಂಸ್ಥೆ ಹುಬ್ಬಳ್ಳಿ-ಧಾರವಾಡ ಅನಂತಾನಂತ ಪ್ರಣಾಮಗಳು.
ಹವ್ಯಕ ಸಮುದಾಯದ ಶ್ರೇಯೋಭಿವ್ರಧಿಗಾಗಿ ತಾವು ಕೈಗೊಂಡಿರುವ ಅನೇಕ ಕಾರ್ಯಕ್ರಮಗಳು ಇಡೀ ನಾಡಿನ ಜನಮನನ ಗೆದ್ದಿವೆ.

ಈಗ ಅತ್ಯಾಧುನಿಕ ತಂತ್ರಜ್ನಾನ ಬಳಸಿ ಮಠದ ವಿವಿಧ ಅಭಿವೃದ್ದಿ ಕಾರ್ಯಕ್ರಮಗಳ ಕುರಿತಂತೆ ಅಂತರ ಜಾಲದ ಮೂಲಕ ನಾಡಿನ ಅಷ್ಟೇ ಏಕೆ ಇಡೀ ವಿಶ್ವಕ್ಕೇ ಸಾಧನೆಯ ಮಾಹಿತಿ ನೀಡಿ ಮಾರ್ಗದರ್ಶನ ಮಾಡುತ್ತಿರುವುದು ಇನ್ನೊಂದು ಮಹತ್ವದ ಹೆಜ್ಜೆಯಾಗಿದೆ.

ಈ ಎಲ್ಲ ಕಾರ್ಯಗಳಲ್ಲಿ ಹವ್ಯಕ ಶೈಕ್ಷಣಿಕ ಹಾಗೂ ಸಾಂಸ್ಕ್ರತಿಕ ಸಂಸ್ಥೆ ಭಾಗಿಯಾಗುತ್ತದೆ. ಗೋಕರ್ಣ ಶ್ರೀ ಮಹಾಬಲೇಶ್ವರ ದೇವಸ್ಥಾನವನ್ನು ನಿರ್ವಣೆಗಾಗಿ ರಾಜ್ಯ ಸರಕಾರ ಆದೇಶ ಹೊರಡಿಸಿರುವುದು ಇಡೀ ಹವ್ಯಕ ಸಮುದಾಯಕ್ಕೆ ಹೆಮ್ಮೆಯ ವಿಷಯವಾಗಿದೆ. ಈ ಸಂತಸದ ಸುದ್ದಿ ತಿಳಿದ ತಕ್ಷಣ ನಮ್ಮ ಸಂಸ್ಠೆ ಪತ್ರಿಕಾ ಹೇಳಿಕೆ ನೀಡಿ ಸ್ವಾಗತಿಸಿದೆ. ಈ ಕುರಿತು ಸರ್ವಾನುಮತದ ನಿರ್ಣಯವನ್ನೂ ಅಂಗೀಕರಿಸಲಾಗಿದೆ. ಈ ಕುರಿತ ಹೇಳಿಕೆ ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ವಿಜಯ ಕರ್ನಾಟಕದ ಆಗಸ್ಟ್ ೧೭ ರ ಸಂಚಿಕೆಯ ಮೂರನೇ ಪುಟದಲ್ಲಿ ಪ್ರಕಟವಾಗಿದೆ.

ಶ್ರೀ ರಾಮಚಂದ್ರಾಪುರದ ಯಾವುದೇ ಚಟುವಟಿಕೆಗಳಲ್ಲಿ ನಮ್ಮ ಸಂಸ್ಠೆ ಸದಾ ಭಾಗಿಯಾಗಿ ಎಲ್ಲ ರೀತಿಯ ಬೆಂಬಲ ಹಾಗೂ ನೆರವನ್ನು ನೀಡಲು ಕಟಿಬದ್ಧವಾಗಿದೆ. ಗೋಕರ್ಣ ಭಾರತದ ಕೋಟ್ಯಂತರ ಭಕ್ತರ ಉಪಾಸನೆಯ ತಾಣವಾಗಿದ್ದು ಈ ಕ್ಷೇತ್ರವನ್ನು ಶ್ರೀ ಮಠ ವಹಿಸಿಕೊಂಡಿರುವುದರಿಂದ ಗೋಕರ್ಣ ಕ್ಷೇತ್ರಕ್ಕೆ ಹೊಸ ಕಾಯಕಲ್ಪ ದೊರೆಯುತ್ತದೆ ಎನ್ನುವುದು ನಮ್ಮೆಲ್ಲರ ಬಲವಾದ ನಂಬಿಗೆಯಾಗಿದೆ. ಬರುವ ದಿನಗಳಲ್ಲಿಯೂ ನಮ್ಮ ಸಂಸ್ಥೆ ಶ್ರೀ ಮಠಕ್ಕೆ ಎಲ್ಲ ರೀತಿಯ ನೆರವನ್ನು ನೀಡಲು ಸಿದ್ಧವಿದೆ. ಗೋ ಸಂರಕ್ಷಣೆ, ಪುರಾಣ ಪರಂಪರೆಯ ವೃದ್ಧಿ ಹಾಗು ಜನತೆಯಲ್ಲಿ ಆಧ್ಯಾತ್ಮಿಕ ಮನೋಭಾವನೆ ಮೂಡಿಸುತ್ತಿರುವ ಶ್ರೀ ರಾಮಚಂದ್ರಾಪುರ ಮಠ ಹಾಗೂ ಶ್ರೀ ರಾಘವೇಶ್ವರ ಭಾರತಿ ಶ್ರೀಗಳು ಶ್ರೀ ಕ್ಷೇತ್ರ ಗೋಕರ್ಣವನ್ನು ಇನ್ನಷ್ಟು ಸಮರ್ಥವಾಗಿ ನಿರ್ವಹಿಸುವಲ್ಲಿಯೂ ವ್ಯಾಪಕ ಜನಮನ್ನಣೆ ಗಳಿಸಿದ್ದಾರೆ. ದೇವಸ್ಥಾನದಲ್ಲಿ ಅನೂಚಾನವಾಗಿ ನದೆಯುವ ಕಾರ್ಯಕ್ರಮಗಳು ಇನ್ನಷ್ಟು ಸಾಂಗವಾಗಿ ನಡೆಯಲಿದೆ. ನಮ್ಮ ಸಂಸ್ಥೆ ಮುಂದೆಯೂ ಇದೇ ರೀತಿಯ ಬೆಂಬಲವನ್ನು ನೀಡುತ್ತದೆ.

ಅಂತರ ಜಾಲದ ಆವೃತ್ತಿ ನಿರಂತರವಾಗಿ ಮುನ್ನಡೆದು ಎಲ್ಲರಿಗೂ ಮಾರ್ಗದರ್ಶನ ಮಾಡುವಂತಾಗಲಿ ಎಂದು ಹಾರೈಸುತ್ತೇವೆ. ಅಂತರ ಜಾಲದ ಆವೃತ್ತಿ ಇನ್ನಷ್ಟು ಮಾಹಿತಿಗಳನ್ನು ಒದಗಿಸಿ ಅತ್ಯುತ್ತಮ ಮಾಹಿತಿ ಜಾಲವಾಗಿ ಹೊರಹೊಮ್ಮಲಿ.


-ಡಿ. ಎನ್. ಭಟ್, ಗೌರವ ಕಾರ್ಯದರ್ಶಿ ಮತ್ತು ಅರುಣಕುಮಾರ ಹಬ್ಬು, ಖಜಾಂಚಿ, ಹವ್ಯಕ ಶೈಕ್ಷಣಿಕ ಸಂಸ್ಥೆ, ಹುಬ್ಬಳ್ಳಿ- ಧಾರವಾಡ.

No comments: