Wednesday, October 29, 2008

ಗೋಕರ್ಣ ಒಂದು ಸುತ್ತು - ರಮೇಶ

ಬೀಜವನ್ನು ನೆಟ್ಟು ಮರುದಿನ ಅದು ಸಸಿಯಾಯಿತೇ ಅಂತ ನೋಡಲಿಕ್ಕೆ ಆಗುತ್ತದೆಯೇ ಅಥವಾ ಆ ಬೀಜದಿಂದ ಒಳ್ಳೆಯ ತಳಿ ಬರುತದೆಯೇ ಅಂತ ತಕ್ಷಣ ತಿಳಿಯುತದೆಯೇ? ತಿಳಿಯಲೇ ಬೇಕೆಂಬ ಮನಸ್ಥಿತಿಯಿದ್ದರೆ ಸ್ವಲ್ಪ ತಾಳ್ಮೆ ಬೇಕು. ಸ್ವಲ್ಪ ದಿನ ಕಾದು ನೋಡಬೇಕು. ಆಗ ಗೊತ್ತಾಗುತ್ತದೆ ಬೀಜದ ಶಕ್ತಿ.

ಹಾಗೆ ಇದು ಜೀವನದ ಎಲ್ಲಾ ಕ್ಷೇತ್ರಗಳಿಗೆ ಅನ್ವಯಿಸುತ್ತದೆ. ಒಬ್ಬ ವ್ಯಕ್ತಿ ಅಥವಾ ಸಮಾಜ ಉನ್ನತ ಸ್ಥಾನಕ್ಕೆ ಏರಬೇಕಾದರೆ ಸ್ವಲ್ಪ ಕಾದು ನೋಡಬೇಕು. ಕಾದು ನೋಡದೇ ಬಾಯಿ ಬಡಿದುಕೊಂಡರೆ ಬಯಲಾಗುವುದು ಅವರ ಬಣ್ಣವೇ ವಿನಹ ಬೇರೆಯವರದಲ್ಲ.

ಆತ್ಮೀಯರೇ, ಗೋಕರ್ಣ ಹೇಗಿತ್ತು, ಈಗ ಹೇಗಿದೆ ಅಂತ ಒಮ್ಮೆ ಅಲ್ಲಿ ಹೋಗಿ ನೋಡಿ.

ಗೋಕರ್ಣ ಒಂದು ಪುರಾತನ ಪುಣ್ಯ ಕ್ಷೇತ್ರ. ದಕ್ಷಿಣದ ಕಾಶಿ ಅಂತ ಹೆಸರು ಪಡೆದ ಕ್ಷೇತ್ರ. ಮಹಾಬಲನ ದರ್ಶನದಿಂದ ಸಕಲ ಪಾಪಕ್ಕೆ ಮುಕ್ತಿ ಸಿಗುತದೆ ಮತ್ತು ಶ್ರೇಯಸ್ಸು ಲಭಿಸುತ್ತದೆ ಅನ್ನುವ ಉಕ್ತಿಯೂ ಇದೆ. ಆದರೆ ನೀವು ಕೆಲವು ತಿಂಗಳು ಹಿಂದೆ ಹೋಗಿದ್ದರೆ ನಿಮ್ಮ ಮನಸ್ಸಲ್ಲಿ ಅಲ್ಲಿಂದ ಓಡಿಹೋಗಬೇಕಪ್ಪ ಅನ್ನುವ ರೀತಿಯಾಗುತ್ತಿತು. ಕಾರಣ ಅಲ್ಲಿಯ ಕೊಳಕು ಪರಿಸರ, ಟ್ರಾವೆಲ್ ಏಜೆಂಟರ ರೀತಿ ವರ್ತಿಸುವ ಪುರೋಹಿತರು ಮುಂತಾದವು. ಯಾಕೆ ಹಾಗಿತ್ತು ಗೋಕರ್ಣವೆಂದರೆ ಅಲ್ಲಿ ಯಾರೂ ಹೇಳೋರು ಕೇಳೋರು ಇರಲಿಲ್ಲ. ಜನರು ತಮ್ಮ ಮನಸ್ಸಿಗೆ ಬಂದ ಹಾಗೆ ವರ್ತಿಸುತ್ತಿದ್ದರು. ದೇವಾಲಯದ ಅರ್ಚಕರು ದೇವರಿಗೆ ಏರಿಸಿದ ಹೂಗಳನ್ನು ಎಸೆಯುತ್ತಿದ್ದ ಜಾಗ ಎಲ್ಲಿ ಗೊತ್ತೆ? ಅಲ್ಲೇ ಪಕ್ಕದಲ್ಲಿಯೇ!!!. ದೇವಾಲಯ ಒಮ್ಮೆ ಸುತ್ತು ಹಾಕಿ ಬರೋಣ ಅಂತ ಹೋಗೋದಾದರೆ ಮೂಗು ಮುಚ್ಚಿಕೊಂಡುಹೋಗುವ ಪರಿಸ್ಥಿತಿ ಅಲ್ಲಿತ್ತು. ದೇವರಿಗೆ ಅಭಿಷೇಕವಾದ ನೀರು ಹಾಗೆ ಹೊರಗೆ ಹೋಗಬೇಕು. ಆದರೆ ಅದು ಅಲ್ಲೇ ರೌಂಡು ಹೊಡೆದು ಅಲ್ಲಿ ಇದ್ದ ಇನ್ನೆರಡು ಮೂರು ದೇವರನ್ನು ಪ್ರದಕ್ಷಿಣೆ ಹಾಕಿ ಆಮೇಲೆ ಹೊರಗೆ ಹೋಗುತ್ತಿತ್ತು. ದೇವಾಲಕ್ಕೆ ಅದರದೇ ಆದ ವಾಸ್ತುವಿರುತ್ತದೆ. ದೇವರು ಎಲ್ಲಿ ಇರಬೇಕು, ಗರ್ಭಗುಡಿ ಹೇಗಿರಬೇಕು ಅಂತೆಲ್ಲಾ ಇರುತ್ತದೆ. ಆದರೆ ಗೋಕರ್ಣದಲ್ಲಿ ಹಾಗಿರಲಿಲ್ಲ. ಅರ್ಚಕರು ತಮಗಿಷ್ಟ ಬಂದ ಕಡೆ ಕೆಲವು ದೇವರುಗಳನ್ನು ಇಟ್ಟಿದ್ದರು. ಇನ್ನು ಕೆಲವು ದೇವರುಗಳು ಅಲ್ಲಾಡದ ಹಾಗೆ ಸಿಮೇಂಟು ಹಾಕಿ ಕಟ್ಟಿಹಾಕಿದ್ದರು. ದೇವರ ಪರಿಸ್ಥಿತಿ ನೋಡಿ!!! ದೇವಸ್ಥಾನದ ಮೇಲ್ವಿಚಾರಣೆಯನ್ನು ಹೊತ್ತವರಿಗೂ(?) ಮತ್ತು ಅಲ್ಲಿನ ಸುತ್ತಮುತ್ತ ಜನರಿಗೂ ಒಳ್ಳೆಯ ಸಾಮರಸ್ಯವಿರಲಿಲ್ಲ.

ಈಗ ಹೇಗಿದೆ ಅಂತ ಒಮ್ಮೆ ಹೋಗಿ ನೋಡಿ.ದೇವಾಲಯ ತುಂಬಾ ಸ್ವಚ್ಚವಾಗಿದೆ. ದೇವಾಲಯದ ಒಳಗೆ ಕುಡಿಯುವ ನೀರಿನ ವ್ಯವಸ್ಥೆಯಾಗಿದೆ. ನೀವು ಬಸ್ ಇಳಿದ ತಕ್ಷಣ ಟ್ರಾವೆಲ್ ಏಜೆಂಟರ ರೀತಿ ಯಾರೂ ಬರುವುದಿಲ್ಲ ಅಂತ ಅಲ್ಲಿಯ ಅರ್ಚಕರು ತೀರ್ಮಾನಿಸಿದ್ದಾರೆ. ಸುತ್ತಮುತ್ತ ಜಾಗದ ಜನರು ದೇವಾಲಯಕ್ಕೆ ಬಂದು ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿ ಊರಿನಲ್ಲಿ ದೇವರ ಅಭಿವೃದ್ದಿಗೆಂದು "ಶಿವಗಣ" ವೆಂಬ ಸಂಘಟನೆಗಳಾಗಿವೆ. ಬರುವ ಭಕ್ತರಿಗೆ ಉಚಿತ ಭೋಜನದ ವ್ಯವಸ್ಥೆಯಾಗಿದೆ. ದೇವಾಲಯವನ್ನು ವಾಸ್ತು ಶಾಸ್ರ್ಥಕ್ಕನುಗುಣವಾಗಿರುವಂತೆ ಮಾಡುವ ವ್ಯವಸ್ಥೆಯಾಗುತ್ತಿದೆ. ಪ್ರವೇಶ ಶುಲ್ಕವನ್ನು ರದ್ದು ಮಾಡಲಾಗಿದೆ. ಇವೆಲ್ಲಕಿಂತ ಹೆಚ್ಚಾಗಿ ಜನರಲ್ಲಿ ಒಂದು ಒಳ್ಳೆಯ ಸಾಮರಸ್ಯವೇರ್ಪಟ್ಟಿದೆ. ಜನರಲ್ಲಿ ಸಂಘಟನೆಯಾಗಿದೆ. ಅಲ್ಲಿಯ ಸುತ್ತಮುತ್ತ ಜನರಿಗೆ ಒಂದು ಸಾವಿರ ಭಾರತೀಯ ಗೋವನ್ನು ಉಚಿತವಾಗಿ ಹಂಚಲಾಗಿದೆ. ಇನ್ನು ಬಹಳಷ್ಟು ಕೆಲಸಗಳು ಆಗುತ್ತಲಿವೆ. ಈಗ ಹೇಳಿ ಶ್ರೀಮಠದ ಆಡಳಿತ ವ್ಯವಸ್ಥೆ ಹೇಗಿದೆ ಎಂದು?

ಇದು ನಾನು ಅಲ್ಲಿ ಹೋಗಿ ಕಂಡಿದ್ದು. ಇದು ನನ್ನ ವಯಕ್ತಿಕ ಅಭಿಪ್ರಾಯ
-ರಮೇಶ

No comments: