Wednesday, September 17, 2008

ಬಿಂಬ ಪ್ರತಿಬಿಂಬದಿಂದ





ಶ್ರೀರಾಮಚಂದ್ರಾಪುರ ಮಠ v/s ಸ್ವರ್ಣವಲ್ಲಿ ಮಠ

ಮತ್ತೆ ಆರಂಭವಾಗಿದೆ ಕದನ..
ಪ್ರಾಬಲ್ಯಕ್ಕೆ ಜಿದ್ದಜಿದ್ದಿ
ಬುದ್ದಿ ಹೇಳಿದ ಪೇಜಾವರರು
ಗೋಕರ್ಣ ಅಭಿವ್ರದ್ದಿಗೆ ರಾಮಚಂದ್ರಾಪುರ ಮಠ ಶ್ರೀಗಳ ಸಾರಥ್ಯ
ವಿರೋಧಿಗಳ ಗುಂಪಿಗೆ ಸ್ವರ್ಣವಲ್ಲಿ ಶ್ರೀ ಸಾರಥ್ಯ

ಕೊನೆಗೂ ಬೂದಿ ಮುಚ್ಚಿದ ಕೆಂಡ ಸ್ಪೋಟಗೊಂಡಿದೆ. ಗೋಕರ್ಣದಲ್ಲಿ ಸೆ.೧೫ ರಂದು ಅಲ್ಲಿಯ ಮಹಾಬಲೇಶ್ವರ ದೇವಾಲಯ ಶ್ರೀರಾಮಚಂದ್ರಾಪುರ ಮಠಕ್ಕೆ ಪುನ: ಬಂದಿರುವುದಕ್ಕೆ "ಮಹಾಸಂಕಲ್ಪ " ಸಭೆ ನಡೆಸುತ್ತಿದ್ದಾರೆ, ಹವ್ಯಕ ಸಮಾಜದ ಮತ್ತೊಂದು ಮಠವಾದ ಸ್ವರ್ಣವಲ್ಲಿಯಲ್ಲಿ ಇದನ್ನು ವಿರೋಧಿಸುವ ಸಭೆ ನಡೆಯುತ್ತಿತ್ತು!! ಗೋಕರ್ಣ ದೇವಾಲಯ ಶ್ರೀರಾಮಚಂದ್ರಾಪುರ ಮಠಕ್ಕೆ ಹಸ್ತಾಂತರದ ನಂತರ ಉಂಟಾಗಿರುವ ವಾದ-ವಿವಾದದ ನಂತರ ಶ್ರೀರಾಮಚಂದ್ರಾಪುರ ಮಠದ ಶ್ರೀಗಳು ಮೊದಲಬಾರಿಗೆ ಗೊಕರ್ಣ ಕ್ಕೆ ಭೇಟಿ ನೀಡಿ ಅದರ ಪುನರುತ್ಥಾನಕ್ಕೆ ಕಂಕಣ ಬದ್ಧರಾಗಿ "ಮಹಾಸಂಕಲ್ಪ" ಕ್ಕೆ ಕರೆ ನೀಡಿದ್ದರೆ ಹವ್ಯಕ ಸಮಾಜದ ಮತ್ತೊಂದು ಮಠ (ಸ್ವರ್ಣವಲ್ಲಿ ಮಠ) ಇದನ್ನು ಸ್ವಾಗತಿಸುವುದನ್ನು ಬಿಟ್ಟು ಸರಕಾರ ಗೋಕರ್ಣವನ್ನು ಹಿಂಪಡೆಯಬೇಕು ಎನ್ನುವ ವಿರೊಧಿಗಳನ್ನು ಕರೆಸಿಕೊಂಡು ಸಭೆ ನಡೆಸಿ ಇಷ್ಟುದಿನ ಮನಸ್ಸಿನೊಳಗಿದ್ದ ನೋವನ್ನು ಹೋರಹಾಕಿತು.

ಶ್ರೀರಾಮಚಂದ್ರಾಪುರ ಮಠ ಮತ್ತು ಸ್ವರ್ಣವಲ್ಲಿ ಮಠದ ನಡುವೆ ಪ್ರಾಬಲ್ಯಕ್ಕೆ ಜಿದ್ದಜಿದ್ದಿ ಮೊದಲಿನಿಂದಲೂ ಇದ್ದರೂ ಶ್ರೀರಾಮಚಂದ್ರಾಪುರ ಮಠದಷ್ಟು ಪ್ರಾಭಲ್ಯವನ್ನು ಧಕ್ಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಶ್ರೀರಾಮಚಂದ್ರಾಪುರಮಠ ಈಗಿನ ಶ್ರೀಗಳ ಮಾರ್ಗದರ್ಶನದಲ್ಲಿ ಸಾಕಷ್ಟು ಅಭಿವೃದ್ದಿ ಕಂಡರೆ ಸ್ವರ್ಣವಲ್ಲಿ ಮಠದಲ್ಲಿ ಶ್ರೀಗಳನ್ನು ಮತ್ತು ಮಠವನ್ನು ನಿಯಂತ್ರಿಸುವ "ಭಟ್ಟಂಗಿಗಳು " ಮಾತ್ರ ಅಭಿವೃದ್ಧಿಯಾದರು.
ಹವ್ಯಕ ಜನಾಂಗದ ೨ ಕಣ್ಣುಗಳು:
ರಾಮಚಂದ್ರಾಪುರ ಮಠ ಮತ್ತು ಸ್ವರ್ಣವಲ್ಳಿ ಮಠಗಳು ಹವ್ಯಕ ಸಮಾಜದ ಎರಡು ಕಣ್ಣು ಗಳು ಇದ್ದಂತೆ. ಇವು ಹವ್ಯಕ ಸಮಾಜದ ಮಠಗಳು. ರಾಮಚಂದ್ರಾಪುರ ಮಠ ಹವ್ಯಕ ಸಮುದಾಯದ ಜೊತೆ ಇತರ 18 ಜಾತಿಯನ್ನು ಒಳಗೊಂಡಿದೆ. ಆದರೆ ಸ್ವರ್ಣವಲ್ಲಿ ಮಠ ಕೇವಲ ಹವ್ಯಕರು ಅದರಲ್ಲೂ ಸೀರಸಿ ಮತ್ತು ಯಲ್ಲಾಪುರ ಭಾಗದ ಜನರು ಮಾತ್ರ ಹೆಚ್ಚಿಗೆ ನಡೆದು ಕೊಳ್ಳುತ್ತಾರೆ. ಹೆಚ್ಚಿನ ಹವ್ಯಕರು ರಾಮಚಂದ್ರಾಪುರ ಮಠಕ್ಕೆ ನಡೆದು ಕೊಳ್ಳುವುದರಿಂದ ಸ್ವರ್ಣವಲ್ಲಿಮಠ ಪ್ರಾಭಲ್ಯವನ್ನು ಸಾಧಿಸುವ ಕನಸು ಕನಸಾಗೇ ಉಳಿಯಿತು. ಕಳೆದ ವರ್ಷವಷ್ಟೇ ಒಂದೇ ವೇದಿಕೆಯಲ್ಲಿ ವೇದಿಕೆಯನ್ನು ಹಂಚಿಕೊಂಡಿದ್ದ ಉಭಯ ಶ್ರೀಗಳು ಎರಡು ಮಠಗಳು ಎರಡು ಕಣ್ಣು ಇದ್ದಂತೆ ಎಂದು ನುಡಿದಿದ್ದರು. ಆದರೆ ಅದನ್ನು ಮರೆತ ಸ್ವರ್ಣವಲ್ಲಿ ಶ್ರೀಗಳು ಸ್ವಾರ್ಥಸಾಧನೆಗೆ ಟೊಂಕಕಟ್ಟಿ ನಿಂತಿದ್ದಾರೆ, ತಾವು ಒಬ್ಬ ಹವ್ಯಕ ಮಠಾಧೀಶ ಎಂಬುದನ್ನು ಮರೆತು!
ಶ್ರೀರಾಮಚಂದ್ರಾಪುರ ಮಠ ಗೋಕರ್ಣ ದೇವಾಲಯ ಬಂದ ಮೇಲೆ ಹವ್ಯಕ ಸಮುದಾಯದ ಮಠಕ್ಕೆ ಬಂತು ಎಂದು ಖುಷಿಪಡುವ ಬದಲು ೪ ದಿನದಲ್ಲಿ ಸರಕಾರದ ಕ್ರಮವನ್ನು ವಿರೋಧಿಸಿ ರಾಮಚಂದ್ರಾಪುರ ಮಠಕ್ಕೆ ಗೋಕರ್ಣ ಕೊಡಬಾರದು ಎಂದು ಪತ್ರಿಕಾ ಹೇಳಿಕೆ ನೀಡಿದರು. ಆಮೇಲೆ ವಿರೋಧಿಗಳ ಸಭೆ ಕರೆದು ಅವರಿಗೆ ಸಹಾಯ ಹಸ್ತವನ್ನು ನೀಡಿದರು. ಆದರೆ ಸಮಸ್ಯೆಯ ಪರಿಹಾರಕ್ಕೆ ಪ್ರಯತ್ನ ಪಡಲಿಲ್ಲ. ವಿವಿಧ ಮಥಾಧೀಶರು ರಾಮಚಂದ್ರಾಪುರ ಮಠ ಕ್ಕೆ ಬೆಂಬಲ ವ್ಯಕ್ತಪಡಿಸಿದರೆ ಹವ್ಯಕ ಸಮಾಜದ ಶ್ರೀಗಳೇ ಬೆಂಬಲಿಸದೇ ಹವ್ಯಕರನ್ನು ವಿಭಾಗಿಸಲು ಕಾರ್ಯ ತಂತ್ರ ರೂಪಿಸಿದ್ದಾರೆ ಎನ್ನುವುದು ಕೇಳಿಬರುತ್ತಿರುವ ಮಾತು.
ಶ್ರೀರಾಮಚಂದ್ರಾಪುರ ಮಠ ಈಗಾಗಲೇ ಗೋಕರ್ಣ ದೇವಾಲಯ ಈ ಹಿಂದೆ ತನ್ನ ಸುಪರ್ಧಿಯಲ್ಲಿತ್ತು ಎಂದು ದಾಖಲೆಗಳನ್ನು ಸಲ್ಲಿಸಿದೆ. ಕೋರ್ಟನಲ್ಲೂ ಸಧ್ಯವೇ ವಿಚಾರಣೆಗೂ ಬರಲಿದೆ. ಒಂದು ವೇಳೆ ದಾಖಲೆಗಳು ಸರಿ ಇಲ್ಲ ಎಂದರೆ ಪುನ: ಸರಕಾರಕ್ಕೆ ದೇವಾಲಯ ಹೋಗುವುದರಲ್ಲಿ ಅನುಮಾನವಿಲ್ಲ. ಪುರಾತನ ,ಜಗದ್ವಿಖ್ಯಾತ ದೇವಸ್ಥಾನವನ್ನು ಯಾವ ಸರಕಾರವಾದರೂ ದಾಖಲೆಗಳೆ ಇಲ್ಲದೇ ಹಾಗೆ ಸುಮ್ಮನೇ ವಹಿಸಿಕೊಡುತ್ತದೆಯೇ? ಸರಕಾರ ಏನಾದರೂ ಶ್ರೀ ರಾಮಚಂದ್ರಾಪುರ ಮಠದ ಆಸ್ತಿಯೇ?.

ಸ್ವರ್ಣವಲ್ಲಿ ಶ್ರೀಗಳು ಬುದ್ದಿವಂತರಾಗಿದ್ದಾರೆ ರಾಮಚಂದ್ರಾಪುರ ಮಠಕ್ಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದ್ದರು. ಹವ್ಯಕ ಸಮಾಜ ಒಂದಾಗಿದೆ ಎಂಬ ಸಂದೇಶವನ್ನು ರವಾನಿಸುತ್ತಿದ್ದರು. ಜನರಿಗೆ ಒಳ್ಳೆಯದನ್ನು ಮಾಡಿ ಎಂದು ಉಪದೇಶಿಸುವ ಶ್ರೀಗಳೇ ಶಿಷ್ಯರಲ್ಲಿ ಮತ್ಸರದ ಭಾವನೆಗಳನ್ನು ಬಿತ್ತುತ್ತಿರುವುದು ಸಾಮಾನ್ಯ ಜನತೆಗೂ ಒಬ್ಬ ಶ್ರೀಗಳಿಗೂ ಏನು ವ್ಯತ್ಯಾಸ ವೇನೆಂದು ಪ್ರಜ್ಞಾವಂತ ಜನತೆಯೇ ಮಾತಡಿಕೊಳ್ಳುತ್ತಿದ್ದಾರೆ. ಇದೆಲ್ಲ ಬೇಕಿತ್ತ ಸ್ವರ್ಣವಲ್ಲಿ ಶ್ರೀಗಳಿಗೆ ? ಎಂಬ ಪ್ರಶ್ನೆ ಪ್ರಶ್ನೆಯಾಗೇ ಉಳಿದುಕೊಳ್ಳುತ್ತದೆ.

ಮಠದ ಆಸ್ತಿ ಮರಳಿ ಬಂದರೆ ಅದಕ್ಕೆ ಬೇರೆ ಅರ್ಥವನ್ನು ಕಲ್ಪಿಸುವುದು ಸಾಧುವಲ್ಲ. ಯಾವುದೋ ಕಾಲಘಟ್ಟದಲ್ಲಿ ಶ್ರೀಮಠದ ಕೊಂಡಿಯಿಂದ ಕಳಚಿದ್ದ ಕೆಲವು ಕೊಂಡಿಗಳು ಈಗ ಮರಳಿ ಸೇರಿದರೆ ಉಳಿದವರಿಗೆ ಸಹಿಸಲು ಸಾಧ್ಯವಾಗುವುದಾದರೂ ಹೇಗೆ??!!.
ಬುದ್ದಿ ಹೇಳಿದ ಪೇಜಾವರರು !
ಸ್ವರ್ಣವಲ್ಲಿ ಶ್ರೀಗಳ ವಿರೋಧವನ್ನು ಕೇಳಿದ ಪೇಜಾವರರು ಸ್ವರ್ಣವಲ್ಲಿ ಶ್ರೀಗಳಿಗೆ ಬುದ್ದಿವಾದವನ್ನು ಹೇಳಿದ ಪ್ರಸಂಗ ನಡೆದಿರುವುದು ಸ್ವರ್ಣವಲ್ಲಿ ಶ್ರೀಗಳ ಮೊಂಡು ಹಟಕ್ಕೊಂದು ಉದಾಹರಣೆ. "ನಿಮ್ಮ ಒಳಗಿನ ಅಸಮಾಧಾನವನ್ನು ಹೊರಗೆ ಹಾಕಬೇಡಿ.ಧಾರ್ಮಿಕ ಮುಖಂಡರಲ್ಲೇ ಒಗ್ಗಟ್ಟಿಲ್ಲದಿದ್ದರೆ ಬೇರೆಯವರು ಕವಡೆ ಕಿಮ್ಮತ್ತು ಕೊಡುವುದಿಲ್ಲ ಧಾರ್ಮಿಕ ಕ್ಷೇತ್ರದಲ್ಲಿ "ರಾಜಕೀಯ " ಮಾಡಿ "ಹಸ್ತಕ್ಷೇಪ"ವನ್ನು ಕೈ ಬಿಡುವಂತೆ ಹೇಳಿರುವುದು ಹೊಸ ಸುದ್ದಿ.
ನಿಮ್ಮ ಅಭಿಪ್ರಾಯವನ್ನೂ ಬರೆಯಬಹುದು... media4cow@gmail.com

No comments: