Thursday, September 25, 2008

ಮಠಾಧೀಶರ ಟೀಕೆ ಕೃತಘ್ನತೆಯ ಪರಮಾವಧಿ



ಮತಾಂತರ ನಿಷೇಧ ಕಾನೂನನ್ನು ರಾಜ್ಯದಲ್ಲಿ ಜಾರಿಗೊಳಿಸಬೇಕೆಂದು ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಹಾಗೂ ಶ್ರೀ ರಾಘವೇಶ್ವರ ಸ್ವಾಮೀಜಿ ನೇತೃತ್ವದ ಮಠಾಧೀಶರ ನಿಯೋಗ ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಅಪಿಸಿದ್ದಕ್ಕೆ ಪ್ರತಿಪಕ್ಷಗಳಿಂದ ವ್ಯಕ್ತವಾಗಿರುವ ಟೀಕೆಗೆ ಇಲ್ಲಿದೆ ಉತ್ತರ.

‘ಸರ್ವಸಂಗ ಪರಿತ್ಯಾಗ ಮಾಡಿದವರಿಗೆ ಇವೆಲ್ಲ ಯಾಕೆ ’ ಎಂದು ಮಠಾಧೀಶರು/ ಸನ್ಯಾಸಿಗಳನ್ನು ಪ್ರಶ್ನಿಸುವುದು ಎಷ್ಟು ಸರಿ ? ಅವರು ಅರಿಷಡ್ವರ್ಗಗಳಿಂದ ಮುಕ್ತರಾಗಲು ಸರ್ವಸಂಗ ಪರಿತ್ಯಾಗ ಮಾಡಿದ್ದಾರೆಯೇ ವಿನಾ, ದೇಶಪ್ರೇಮ ಹಾಗೂ ಧರ್ಮದ ತ್ಯಾಗ ಮಾಡಿಲ್ಲ. ಸಾಮಾಜಿಕ ಏಕತೆ, ಸಾಮರಸ್ಯ, ಸುಖ-ಶಾಂತಿ ಬಯಸುತ್ತಿರುವ ಮಠಾಶರನ್ನು ಅವಹೇಳನ ಮಾಡಿರುವುದು ಅವರಿಗೆ ಮಾತ್ರವಲ್ಲ, ಕೋಟ್ಯಂತರ ಜನರ ಮನಸ್ಸಿಗೆ ಅಪಾರ ನೋವನ್ನುಂಟುಮಾಡಿದೆ ಎನ್ನುತ್ತಾರೆ ಘನತೆವೆತ್ತ ನ್ಯಾ. ಡಾ.ಎಂ.ರಾಮಾಜೋಯಿಸ್.

ಮತಾಂತರ ಚಟುವಟಿಕೆ ಹಾಗೂ ಹಿಂದು ದೇವತೆಗಳ /ಋಷಿಮುನಿಗಳ ಅವಹೇಳನಕಾರಿ ಪ್ರಕಟಣೆಯ ವಿರುದ್ಧ ಸ್ವರ ಎತ್ತಿರುವ ಮಠಾಶರನ್ನು ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಿದ್ದಾರೆಂದು ತೆಗಳಿರುವುದು ಕೃತಘ್ನತೆಯ ಪರಮಾವ.ಶತಮಾನಗಳ ಕಾಲ ಪರಕೀಯರ ರಾಜಕೀಯ ಹಾಗೂ ಮತೀಯ ಆಕ್ರಮಣದ ನಂತರವೂ ಭಾರತವನ್ನು, ಭಾರತವಾಗಿ ಉಳಿಸಿರುವುದರ ಕೀರ್ತಿಯಲ್ಲಿ ಸಿಂಹಪಾಲು ಮಠಾಶರಿಗೆ ಹಾಗೂ ಸನ್ಯಾಸಿಗಳಿಗೆ ಸೇರುತ್ತದೆ ಎಂಬುದು ಐತಿಹಾಸಿಕ ಸತ್ಯ. ಇವರೆಲ್ಲರೂ ಪರಕೀಯ, ಮತೀಯ ಹಾಗೂ ಸಾಂಸ್ಕೃತಿಕ ಆಕ್ರಮಣಗಳ ವಿರುದ್ಧ ಭದ್ರಕೋಟೆಯಾಗಿದ್ದರು ಎಂಬುದನ್ನು ನಾವು ಮರೆಯಬಾರದು.


ಮತಾಂತರ ಒಬ್ಬ ವ್ಯಕ್ತಿಗೆ ಸಂಬಂಧಿಸಿದ ವಿಷಯ ಮಾತ್ರವಲ್ಲ. ಇದರಿಂದಾಗಿ ಸಮಾಜ, ಕುಟಂಬ ಹಾಗೂ ಸಾರ್ವಜನಿಕ ಶಾಂತಿ ನಾಶವಾಗುತ್ತದೆ. ಜತೆಗೆ, ಕೋಮುವಾರು ಭಾವನೆಯನ್ನೂ ಪ್ರಚೋದಿಸುತ್ತದೆ. ಅಂದಹಾಗೆ, ಪ್ರತಿಯೊಬ್ಬ ನಾಗರಿಕನಿಗೂ ತನ್ನ ಮತದ ಪ್ರಚಾರ ಮಾಡುವ ಹಕ್ಕನ್ನು ಸಂವಿಧಾನ ನೀಡಿದೆಯೇ ವಿನಾ, ಮತಾಂತರ ಮಾಡುವ ಹಕ್ಕು ನೀಡಿಲ್ಲ. ಈ ಹಿನ್ನೆಲೆಯಲ್ಲೇ ಮಧ್ಯ ಪ್ರದೇಶ ಮತ್ತು ಒರಿಸ್ಸಾ ಸರಕಾರ ಜಾರಿಗೊಳಿಸಿರುವ ಮತಾಂತರ ನಿಷೇಧ ಕಾನೂನು ಸಂವಿಧಾನ ಬದ್ಧ ಎಂದು ಶ್ರೇಷ್ಠ ನ್ಯಾಯಾಲಯದ ಸಂವಿಧಾನ ಪೀಠ ೧೯೭೭ರಲ್ಲಿ ತೀರ್ಪು ನೀಡಿದೆ.


ಇದೇ ರೀತಿಯ ಕಾನೂನು ಕರ್ನಾಟಕದಲ್ಲೂ ಆಗಬೇಕು ಎಂಬುದು ಮಠಾಧೀಶರ ಬೇಡಿಕೆ. ಅದು ಸಂವಿಧಾನಬದ್ಧ ಬೇಡಿಕೆಯೂ ಹೌದು. ಇದನ್ನು ರಾಜಕೀಯದಲ್ಲಿ ಹಸ್ತಕ್ಷೇಪ ಅಥವಾ ಒಂದು ರಾಜಕೀಯ ಪಕ್ಷಕ್ಕೆ ಬೆಂಬಲ ಎಂದು ಟೀಕಿಸುವುದು ಸರಿಯಲ್ಲ. ಎಲ್ಲ ಮಠಾಧೀಶರೂ ಚರ್ಚ್‌ಗಳ ಮೇಲೆ ನಡೆದ ಅಕ್ರಮಣವನ್ನು ಕಟುವಾಗಿ ಖಂಡಿಸಿದ್ದಾರೆ. ಕ್ರೈಸ್ತರು ಮತ್ತು ಹಿಂದುಗಳು ಸಾಮರಸ್ಯದಿಂದ ಬಾಳಬೇಕೇ ಹೊರತು ಕೆಲವು ಮತಾಂಧ ಕ್ರೈಸ್ತರ ಗುಂಪಿನ ಚಟುವಟಿಕೆಗಳಿಂದ ಸಮಾಜದಲ್ಲಿ ಸುಖ-ಶಾಂತಿ ಹಾಳಾಗಬಾರದು ಎನ್ನುವುದಷ್ಟೇ ಅವರ ಕಳಕಳಿ.


ನಮ್ಮ ದೇಶದ ಇತಿಹಾಸದಲ್ಲಿ ಮಠಾಧೀಶರ, ಸಾಧು-ಸನ್ಯಾಸಿಗಳ ಪಾತ್ರ ಅವಿಸ್ಮರಣೀಯ. ೧೪ನೇ ಶತಮಾನದಲ್ಲಿ ಮತೀಯ ಹಾಗೂ ರಾಜಕೀಯ ಆಕ್ರಮಣಕ್ಕೆ ತುತ್ತಾಗಿ ನಮ್ಮ ದೇಶ ಕಾರ್ಗತ್ತಲೆಯಲ್ಲಿ ಮುಳುಗಿ ತತ್ತರಿಸುತ್ತಿದ್ದಾಗ, ಶೃಂಗೇರಿ ಮಠಾಧೀಶರಾಗಿದ್ದ ವಿದ್ಯಾರಣ್ಯರು, ಹಕ್ಕ-ಬುಕ್ಕರಿಗೆ ಸೂರ್ತಿ, ಮಾರ್ಗದರ್ಶನ ನೀಡಿ ಅತ್ಯಂತ ಪ್ರಬಲವಾದ ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿದರು.


ಅದು ಮುಂದಿನ ಎರಡು ಶತಮಾನಗಳ ಕಾಲ ರಾಷ್ಟ್ರದ ರಕ್ಷಣೆ ಮಾಡಿತು. ದುರದೃಷ್ಟವಶಾತ್, ಸಾಮ್ರಾಜ್ಯ ನಾಶವಾದ ನಂತರ ಜನರು ಭಯಭೀತರಾಗಿದ್ದರು. ಅಂತಹ ಸಮಯದಲ್ಲಿ ಅತ್ಯಂತ ಬಲಿಷ್ಠವಾಗಿದ್ದ ಮೊಘಲ್ ಸಾಮ್ರಾಜ್ಯದ ವಿರುದ್ಧ ಸಾಮ್ರಾಜ್ಯವನ್ನು ಕಟ್ಟಲು ಛತ್ರಪತಿ ಶಿವಾಜಿಗೆ ಸೂರ್ತಿ, ಮಾರ್ಗದರ್ಶನ ನೀಡಿದ್ದು ಸನ್ಯಾಸಿಯಾಗಿದ್ದ ಸಮರ್ಥರಾಮದಾಸರು. ಮತಾಂತರಕ್ಕೆ ಒಪ್ಪದೆ ತಮ್ಮನ್ನೇ ರಾಷ್ಟ್ರಕ್ಕಾಗಿ ಬಲಿದಾನ ಮಾಡಿ ರಾಷ್ಟ್ರದ ಗೌರವವನ್ನು ಉಳಿಸಿದವರು ಗುರು ತೇಗ್ ಬಹದ್ದೂರ್‌ರವರು. ಅವರ ಬಲಿದಾನದಿಂದ ಸೂರ್ತಿ ಪಡೆದು ರಾಷ್ಟ್ರದ ರಕ್ಷಣೆ ಮಾಡಿದವರು ಗುರುಗೋವಿಂದ್ ಸಿಂಗ್. ಭಾರತೀಯ ಧರ್ಮ, ಸಂಸ್ಕೃತಿಗಳು ಪಾಶ್ಚಿಮಾತ್ಯರ ಆಕ್ರಮಣದಿಂದಾಗಿ ಅವಹೇಳನಕ್ಕೊಳಗಾಗಿದ್ದಾಗ ಅವುಗಳಿಗೆ ತಕ್ಕ ಉತ್ತರ ಕೊಟ್ಟವರು ಸ್ವಾಮಿ ವಿವೇಕಾನಂದರು. ಮತಾಂತರದ ಆಘಾತಕ್ಕೊಳಗಾಗಿ ತಮ್ಮ ಧರ್ಮ, ಸಂಸ್ಕೃತಿಗಳು ನಾಶವಾಗುವುದನ್ನು ತಪ್ಪಿಸಲು ಶುದ್ಧೀಕರಣದ ದೊಡ್ಡ ಚಳುವಳಿಯನ್ನು ಮಾಡಿದವರು ಸ್ವಾಮಿ ಶ್ರದ್ಧಾನಂದರು ಮತ್ತು ಸ್ವಾಮಿ ದಯಾನಂದ ಸರಸ್ವತಿಯವರು.


ನಂತರ, ಅರವಿಂದ ಘೋಷ್, ನಾರಾಯಣ ಗುರು, ರಮಣ ಮಹರ್ಷಿಗಳು...ಹೀಗೆ ಅಸಂಖ್ಯ ಸಾಧು ಸನ್ಯಾಸಿಗಳು ರಾಷ್ಟ್ರದ ರಕ್ಷಣೆಗಾಗಿ ಸರ್ವತ್ಯಾಗ ಮಾಡಿದ್ದಾರೆ. ಸಂಸತ್ತಿಗೆ ಸಂವಿಧಾನ ತಿದ್ದುಪಡಿ ಮಾಡುವ ಅಕಾರವಿದ್ದರೂ, ಸಂವಿಧಾನದ ಆಧಾರ ಶಿಲೆಯ ಚೌಕಟ್ಟನ್ನು ನಾಶಮಾಡುವ ಅಕಾರವಿಲ್ಲ ಎಂದು ಶ್ರೇಷ್ಠ ನ್ಯಾಯಾಲಯದಲ್ಲಿ ವಾದಿಸಿ, ಸಂವಿಧಾನವನ್ನು ರಕ್ಷಿಸಿದವರು ಎಡನೀರು ಮಠದ ಕೇಶವಾನಂದ ಭಾರತಿ ಸ್ವಾಮೀಜಿಯವರು. ಸಂವಿಧಾನದಲ್ಲಿ ಮದ್ಯಪಾನ ಮತ್ತು ಗೋಹತ್ಯೆ ನಿಷೇಧವಾಗಲೇಬೇಕು ಎಂದಿದ್ದರೂ, ಸಂವಿಧಾನಕ್ಕೆ ಬದ್ಧರಾಗಿರುತ್ತೇವೆಂದು ಪ್ರಮಾಣವಚನ ತೆಗೆದುಕೊಂಡ ಶಾಸಕರು, ಕರ್ತವ್ಯ ಚ್ಯುತರಾಗಿರುವುದನ್ನು ಕಂಡು ಅದರ ವಿರುದ್ಧ ಚಳುವಳಿ ನಡೆಸಿದವರು, ನಡೆಸುತ್ತಿರುವವರು ತರಳಬಾಳು ಜಗದ್ಗುರುಗಳು.
ಸಂವಿಧಾನದ ನಿರ್ದೇಶನದಂತೆ ಗೋಹತ್ಯೆ ನಿಷೇಧವಾಗಲೇಬೇಕೆಂದು ಬೃಹತ್ ಚಳುವಳಿ ನಡೆಸುತ್ತಿರುವವರು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು. ಹೀಗೆ ನಾನಾ ರೀತಿಯಲ್ಲಿ ರಾಷ್ಟ್ರವನ್ನು ರಕ್ಷಿಸುತ್ತಿರುವ ಮಠಾಧೀಶರನ್ನು ತೆಗಳುವುದು ಕೃತಘ್ನತೆಯ ಪರಮಾವಧಿ ಅಲ್ಲದೇ ಮತ್ತಿನ್ನೇನು ?.

1 comment:

ಯಜ್ಞೇಶ್ (yajnesh) said...

ಉತ್ತಮ ಲೇಖನ. ಭರತ ಖಂಡದ ಸಂಸ್ಕೃತಿಯನ್ನು ಸಂರಕ್ಷಿಸಿದ, ಸಂರಕ್ಷಿಸುತ್ತಿರುವ ಸನ್ಯಾಸಿಗಳ ಬಗ್ಗೆ ಹಗುರಾಗಿ ಮಾತನಾಡುವವರಿಗೆ ಚಾಟಿಯೇಟಿನ ಉತ್ತರ