Monday, September 15, 2008

ಮಠದಿಂದ ಹಾಲಕ್ಕಿ ಜನಾಂಗದಲ್ಲಿ ಮಂದಹಾಸ


ಗೋಕರ್ಣದ ಆಸುಪಾಸಿನ ಹಾಲಕ್ಕಿ ಜನಾಂಗದ ಮಹಿಳೆಯರಲ್ಲಿ ಸಡಗರ ಪುಟಿಯುತ್ತಿತ್ತು.ಸುತ್ತ ಹಲವು ಹಳ್ಳಿಗಳಿಂದ ಗೋಕರ್ಣಕ್ಕೆ ಬಂದ ಅವರು ತಮ್ಮ ಕುಲಗುರು ಶ್ರೀ ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು ಗೋಕರ್ಣ ಪುನರುತ್ಥಾನದ ಮಹಾ ಸಂಕಲ್ಪ ಕೈಗೊಳ್ಳಲು ಆಗಮಿಸುತ್ತಿರುವ ಗಳಿಗೆಗಾಗಿ ಅವರು ಕಾತರದಿಂದ ಬೆಳೆಗಿನಿಂದಲೇ ಕಾಯುತ್ತಿದ್ದರು. ಪುರಪ್ರವೇಶದ ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ರಂಗೋಲಿ ಹಾಕಿ ತೋರಣ ಕಟ್ಟಿ ತಮ್ಮ ಸಂತಸವನ್ನು ಹಂಚಿಕೊಳ್ಳುತ್ತಿದ್ದರು. ಈ ಗುರು ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಹಾಲಕ್ಕಿ ಹೆಂಗಸರು ತಮ್ಮ ಪಟ್ಟಾಂಗದ ಸಮಯವನ್ನು "ಭಟ್ರದಿಕ್ರು ಅವರವ್ರೊಳಗೆ ದುಡ್ಡು ತಿಂತೀರು. ಈಗ ಗುರ್ಗುಳ ಹತ್ರ ದೇತಾನ ಬಂದಿದ್ದು ಚಲೋ ಆತು" ಎಂದು ನೆಲ ಕಾಣುತ್ತಿದ್ದ ಹಾಗೂ ಕಾಣಿಸದಿದ್ದ ಹೆಣ್ಣು ಮಕ್ಕಳನ್ನು ಸುತ್ತ ಕೂರಿಸಿಕೊಂಡು ಎಪ್ಪತ್ತೈದು ವರ್ಷದ ಗಂಗಮ್ಮ ಎಂಬ ಹಾಲಕ್ಕಿ ಮಹಿಳೆ ಭಟ್ರಗಳನ್ನು ಆಡಿಕೊಳ್ಳುತ್ತಿದ್ದುದು ಸ್ವಾರಸ್ಯಕರವಾಗಿತ್ತು.
ನುಡಿ+ಚಿತ್ರ: ದತ್ತಿ ಹೆಗಡೆ
ಕಾಮೆಂಟ್ ಬರೆಯಿರಿ ಹಾಗೆಯೇ ಬ್ಲಾಗಿಗೂ ಬರೆಯಿರಿ. media4cow@gmail.com

No comments: