Wednesday, September 17, 2008

ಹೀಗೊಂದು ಸಲಹೆ
ಗೆ
Media4cow@gmail.com

ಶ್ರೀ ಮಠದಿಂದ ಹೀಗೊಂದು ಬ್ಲಾಗ್ ತೆರೆದು ಅದರಲ್ಲಿ ಸಾರ್ವಜನಿಕರಿಗೆ ಬರೆಯಲು ಆಹ್ವಾನಿಸಿದ್ದು ತುಂಬಾ ಸಂತೋಷದ ವಿಚಾರ.
ಅದೇ ರೀತಿ ಬರಹಗಳು ಶ್ರೀ ಮಠದ ಪರ ಅಥವಾ ವಿರೋದ ಎಂದು ಪರಿಗಣಿಸದೆ ಕತ್ತರಿ ಪ್ರಯೋಗ ಮಾಡದೆ ಯಥಾವತ್ತಾಗಿ ಪ್ರಕಟಿಸುವ ಕೆಲಸವೂ ಆಗಬೇಕಿದೆ. ಈ ವೇದಿಕೆ ಕೇವಲ ಶ್ರೀ ಮಠದ ಪರವಾದ ಮುಖವಾಣಿ ಆಗಬಾರದು. ಹೇಳುವವರು ಎಲ್ಲಾ ಹೇಳಲಿ ಅದಕ್ಕೆ ಮುಕ್ತ ಅವಕಾಶ ಒದಗಿಸಿಕೊಡಿ. ಅವಾಚ್ಯ ಶಭ್ದಗಳು ಇದ್ದರೆ ಮಾತ್ರಾ ಕತ್ತರಿಸಿ. ಮಠದ ಆಡಳಿತಕ್ಕೆ ಗೊತ್ತಿಲ್ಲದಂತಯೇ ತಪ್ಪುಗಳು ಸಂಭವಿಸಬಹುದು. ಅಂತಹ ತಪ್ಪುಗಳು ಅಥವಾ ಸಲಹೆಗಳು ಮಠದ ಹೊರಗೆನಿಂತು ನೋಡುವ ಭಕ್ತರಿಗೆ ಸುಲಭವಾಗಿ ಗೋಚರಿಸುತ್ತವೆ. ಅವುಗಳನ್ನು ಸರಿಪಡಿಸಲು ಸಹಾಯವಾಗುತ್ತದೆ. ಸಲಹೆಕಾರರು ಸಾವಿರಾರು ಇರುತ್ತಾರೆ ಆದೇರೀತಿ ನೈಜ ಕಳಕಳಿಯ ಸಲಹೆಕಾರರೂ ಇರುತ್ತಾರೆ . ಅವರಿಗೆ ಶ್ರೀಗಳನ್ನು ಭೇಟಿ ಮಾಡಲು ಅವಕಾಶ ಅನುಕೂಲ ಇರುವುದಿಲ್ಲ. ಅಂತಹ ಯೋಗ್ಯ ಸಲಹಾಕಾರರಿಗೆ ಇದು ಉತ್ತಮ ವೇದಿಕೆಯಾಗಲಿ.

ಸಲಹೆ ಸಾಧು ಎಂದಾದಲ್ಲಿ ಬ್ಲಾಗ್ ನ ಮುದ್ರಿಸಿ ಗುರುಗಳ ಗಮನಕ್ಕೆ ತರುವ ಕೆಲಸ ಈ ಬ್ಲಾಗ್ ನ ನಿರ್ವಾಹಕರಿಂದ ಆಗಬೇಕಿದೆ ಎಂಬುದು ನನ್ನ ಮೊದಲ ಸಲಹೆ.

ಗೋಕರ್ಣ ಶ್ರೀ ಮಠದ ಆಡಳಿತಕ್ಕೆ ಬಂದಿರುವುದು ಸರಿ. ಆದರೆ ಅಲ್ಲಿ ಬದಲಾವಣೆ ಬಹಳಷ್ಟು ಆಗಬೇಕಿದೆ. ನಾನು ಗುಜರಾತ್ ನ ಅಕ್ಷರಧಾಮ ದೇವಸ್ಥಾನಕ್ಕೆ ಭೇಟಿ ಕೊಟ್ಟಾಗ ಅಲ್ಲಿ ಭಕ್ತರು ತನ್ನಿಂದ ತಾನೆ ಪಾಲಿಸುವ ಒಂದು ಅಘೋಷಿತ ನಿಯಮವನು ಗಮನಿಸಿದೆ. ಅದು ದೇವಸ್ಥಾನದ ಆವರಣದೊಳಕ್ಕೆ ಪ್ರವೇಶಿಸಿದಾಕ್ಷಣ ಭಕ್ತರು ಮಾತನಾಡುವುದನ್ನು ನಿಲ್ಲಿಸುತ್ತಾರೆ. ಸಾವಿರಾರು ಭಕ್ತರು ನಾನು ಹೋಗಿದ್ದ ದಿವಸ ಇದ್ದರು. ಆದರೆ ಮಾತು ಗಲಾಟೆ ಮಾತ್ರಾ ಇರಲಿಲ್ಲ. ನಂತರ ಅಲ್ಲಿ ವಿಚಾರಿಸಿದಾಗ ತಿಳಿದದ್ದು. ಆರಂಭದಲ್ಲಿ ಒಳಬರುವ ಭಕ್ತರಿಗೆ ಇಲ್ಲಿ ಮಾತನಾಡಬಾರದು ಎಂದರಂತೆ. ಈಗ ಭಕ್ತರು ತನ್ನಿಂದ ತಾನೆ ಅದನ್ನು ಪಾಲಿಸುತ್ತಾ ಬಂದಿದ್ದಾರೆ. ಅದೇ ರೀತಿ ಗೋಕರ್ಣದ ದೇವಸ್ಥಾನದ ಆವರಣದೊಳಗೆ ಪ್ರವೇಶಿಸಿದ ತಕ್ಷಣ ಮೌನ ಅಂತ ನಿಯಮ ಆರಂಭದಲ್ಲಿ ಮಾಡಿದರೆ ಅದು ದೈವತ್ವದ ಅನುಭೂತಿಗೆ ಉತ್ತಮ ಮಾರ್ಗ ಆಗಬಲ್ಲದು.

ಇಸ್ಕಾನ್ ನ ದೇವಸ್ಥಾನಕ್ಕೆ ಭೇಟಿಕೊಟ್ಟವರಿಗೆ ಗೊತ್ತು. ಅಲ್ಲಿ ಎಲ್ಲಾಕಡೆ ಸ್ಪೀಕರ್ರಿನಲ್ಲಿ ಹರೇ ರಾಮ ಹರೆ ಕೃಷ್ಣ ಎಂಬ ಹಾಡನ್ನು ಕೇಳುವಂತೆ ಸಂಯೋಜಿಸಿದ್ದಾರೆ. ಅದು ನಮ್ಮ ಮನಸ್ಸು ಬೇರೆಡೆ ಹೋಗದಂತೆ ತಡೆಯುವಲ್ಲಿ ಒಳ್ಳೆಯ ಮಾರ್ಗ. ಗೋಕರ್ಣದ ದೇವಸ್ಥಾನದಲ್ಲಿ ಸಣ್ಣದಾಗಿ ವೇದಘೋಷ ಯಾವಾಗಲೂ ಭಕ್ತರಿಗೆ ಕೇಳುವಂತೆ ಮಾಡಿದರೆ ಅದ್ಬುತ ಅನುಭವ ಭಕ್ತರಿಗೆ ನೀಡಬಲ್ಲದು.

ಸಧ್ಯಕ್ಕೆ ಈ ನನ್ನ ಮೂರು ಸಲಹೆಗಳ ಪ್ರಿಂಟ್ ಔಟ್ ಶ್ರೀಗಳ ಆವಾಗಾಹನೆಗೆ ನಿರ್ವಾಹಕರು ತಲುಪಿಸುತ್ತಾರೆ ಎಂಬ ಭರವಸೆಯೊಂದಿಗೆ ಈ ನನ್ನ ಪತ್ರ ಮುಗಿಸುತ್ತೇನೆ

-ಸುಮಂತ (krsumantha@gmail.com)

1 comment:

ಸಿರಿರಮಣ said...

ಹರೇ ರಾಮ, ನಮಸ್ಕಾರ,
ನನ್ನದು ಮೂಲಭೂತ ಪ್ರಶ್ನೆ ; ಭಾರತೀಯ ಸಂಸ್ಕೃತಿಯ ಬೆಂಬಲಿಗರು, ಶಿಷ್ಟ ಭಾಷಾ ಪ್ರಯೋಗಿಗಳು, ಶುದ್ಧ ಮಾಧ್ಯಮ ಪ್ರತಿನಿಧಿಗಳು ಸೂಕ್ಷ್ಮಗ್ರಾಹಿಗಳಾಗಿರುತ್ತಾರೆ. ಅಡಿಕೆಯಷ್ಟು ವ್ಯತ್ಯಾಸವೂ ಭಾಷೆಗಳಲ್ಲಿ ಆನೆಯಷ್ಟು ವ್ಯತ್ಯಾಸವೆಂದೇ ಪರಿಗಣಿಸುವರು ಸುಸಂಸ್ಕೃತರು. ಶ್ರೀಮಠದ ಯೋಜನೆಗಳಿಗೆ ಪೂರಕವಾದ ಈ ಬ್ಲಾಗು media 4 cow ಹೇಗಾಯಿತು. 4 ಕ್ಕೂ for ಗೂ ವ್ಯತ್ಯಾಸ ಅಜ - ಗಜ ದಂತಲ್ಲವೇ ? ಶ್ರೀ ಗಳು ಒಂದು ನಾಲ್ಕು ಹಸುಗಳಿಗಾಗಿ ಆಂದೋಲನ ಆರಂಭಿಸಿದ್ದಲ್ಲ ತಾನೆ. ತಮ್ಮ ಗೋವಿಗಾಗಿ ಮಾಧ್ಯವವೂ ಒಂದ್ನಾಲ್ಕು ಜನರನ್ನು ತಲುಪುವ ಉದ್ದೇಶ ಹೊಂದಿದ್ದಲ್ಲ ಎಂದುಕೊಳ್ಲುತ್ತೇನೆ. ಆದ್ದರಿಂದ ಈ ಇಂಗ್ಲೀಶ್ ಶೀರ್ಷಿಕೆಯನ್ನು ಸರಿಡಿಸಿ ತಮಗಿರುವ ಬದ್ಧತೆಯೊಂದಿಗೆ ಶುದ್ಧತೆ ಮತ್ತು ಪರಿಪೂರ್ಣತೆಯನ್ನೂ ಪ್ರದರ್ಶಿಸಬೇಕಾಗಿ ಅರಿಕೆ.

ತಮ್ಮವ
ಸಿರಿರಮಣ,ಬೆಂಗಳೂರು