Friday, September 19, 2008

Ramesh said...

ನನಗೂ ಅದೇ ಅನಿಸಿದ್ದು.

ಸ್ವರ್ಣವಲ್ಲಿ ಸ್ವಾಮಿಗಳು ಗೋಕರ್ಣ ಹಸ್ತಾಂತರವನ್ನು ವಿರೋಧಿಸುತ್ತಿರುವುದ್ದೇಕೆ ಎಂದು.ಗೋಕರ್ಣ ದೇವಸ್ಥಾನವೇನಾದ್ರು ಅವರ ಮಠಕ್ಕೆ ಸೇರಿತ್ತಾ? ಹೋಗಲಿ ಸ್ವರ್ಣವಲ್ಲಿಯ ಮಠವೇನಾದರೂ ಗೋಕರ್ಣದಲ್ಲಿ ಇದೆಯಾ?ರಾಜಕಾರಣದಲ್ಲಾದರೇ ವಿರೋದ ಪಕ್ಷದವರು ಆಡಳಿತ ಪಕ್ಷವನ್ನು ವಿನಾಕಾರಣ ವಿರೋದಿಸುವುದನ್ನು ನಾವಿಂದು ಕಾಣುತ್ತೇವೆ. ಇದು ಮಠಗಳಿಗೂ ಹರಡಿದೆಯೇ? ರಾಮಚಂದ್ರಾಪುರ ಮಠ ಎಂದೂ ಸ್ವರ್ಣವಲ್ಲಿ ಮಠವನ್ನು ವಿರೋದಿಸಿದ್ದು ನಾವ್ಯಾರು ಕೇಳಿಲ್ಲ. ಹಾಗಿದ್ದರೂ ಸ್ವರ್ಣವಲ್ಲಿಯ ಗುರುಗಳಿಗೆ ರಾಮಚಂದ್ರಾಪುರ ಮಠದ ಮೇಲೆ ವಿರೋದವೇಕೆ?

ಇತ್ತೀಚಿನ ದಿನಗಳಲ್ಲಿ ರಾಮಚಂದ್ರಾಪುರ ಮಠ ಬಹಳ ಪ್ರಸಿದ್ದಿಗೆ ಬರುತ್ತಾಯಿದೆ. ಅದನ್ನು ಇವರಿಗೆ ಸಹಿಸಲಾಗದೇ ವಿರೋದ ವ್ಯಕ್ತಪಡಿಸಿರಬಹುದೇ? ಒಂದು ವ್ಯಕ್ತಿ/ಸಂಸ್ಥೆ ಮೇಲೆ ಬಂದ ಹಾಗೆ ಅದರ ಏಳ್ಗೆ ಸಹಿಸದವರು ಅದನ್ನು ಎಳೆಯುವುದನ್ನು ನಾವು ಇಂದಿನ ಸಮಾಜದಲ್ಲಿ ಹೆಚ್ಚಾಗಿ ಕಾಣುತ್ತೇವೆ. ನಾವು ಅವರು ಏರಿದ ಎತ್ತರಕ್ಕೆ ಏರೋಣ ಅಂತ ಅವರ ಮನಸ್ಸಲ್ಲಿ ಇರೋದಿಲ್ಲ. ಅವರು ನಾವಿರುವ ಜಾಗಕ್ಕೆ ಬರಲಿ ಅನ್ನೋ ಮನಸ್ಥಿತಿ. ಸ್ವರ್ಣವಲ್ಲಿ ಗುರುಗಳುೀ ಈ ರೀತಿ ಯಾಕೆ ಯೋಚಿಸುತ್ತಿದ್ದಾರೆ. ಅವರನ್ನು ಯಾರೋ ದಿಕ್ಕು ತಪ್ಪಿಸುತ್ತಿದ್ದಾರಾ?

ಒಂದು ಉತ್ತಮ ಸ್ಪರ್ದೆಯಿದ್ದರೆ ಅದರಿಂದ ಸಮಾಜಕ್ಕೆ ಒಳ್ಳೆಯದಾಗುತ್ತದೆ. ಆದರೆ ಅದು ಇಲ್ಲದಿದ್ದರೆ ಸಮಾಜ ಹಾಳಾಗುತ್ತದೆ. ಒಂದು ಸಮಾಜದ ಉನ್ನತ ಸ್ಥಾನದಲ್ಲಿರುವ ಮಠಾದೀಶರೇ ಹೀಗೆ ಮಾಡಿದರೆ ಅವರನ್ನು ನಂಬಿರುವ ಜನಗಳು ಹೇಗೆ ಮಾಡಿಯಾರು. ಅದರಿಂದ ಸಮಾಜ ಉದ್ದಾರವಾಗುತ್ತದೆಯೇ?

ನನ್ನ ಗೊಂದಲಗಳಿಗೆ ಯಾರಾದರು ಉತ್ತರಿಸುವಿರಾ? ನಾನು ಹೇಳಿದ್ದು ನನ್ನ ವಯಕ್ತಿಕ ಅಭಿಪ್ರಾಯ. ತಪ್ಪಿದ್ದರೆ ತಿದ್ದಿ. ಆದರೆ ತಿದ್ದುವ ಮುನ್ನ ನಿಮ್ಮಲ್ಲಿ ಸರಿಯಾದ ಸಾಕ್ಷ್ಯ ಅಥವಾ ಮಾಹಿತಿಯಿದೆಯಾ ಎಂದು ಒಮ್ಮೆ ನೋಡಿಕೊಳ್ಳಿ.

No comments: